ಹೀರೋಯಿನ್ ಆಗಬೇಕು ಅಂದರೆ ಅವರ ಹತ್ರ ಹೋಗಬೇಕು - ರಮ್ಯಾ ಕೃಷ್ಣ ಬಾಯಲ್ಲಿ ಇದೆಂಥಾ ಮಾತು..!
ತೀರಾ ಚಿಕ್ಕ ವಯಸ್ಸಿನಲ್ಲಿಯೇ ಬಣ್ಣದ ಮೋಹಕ್ಕೆ ಸಿಲುಕಿ, ಚಿತ್ರರಂಗದಲ್ಲಿ ಅದಾಗಲೇ ಹತ್ ಹತ್ರ ಮೂರುವರೆ ದಶಕ ಪೂರೈಸಿರುವ ರಮ್ಯಾ ಕೃಷ್ಣ ಅವರಿಗೆ ಇವತ್ತು ಕೂಡ ಚಿತ್ರರಂಗದಲ್ಲಿ ಎಲ್ಲಿಲ್ಲದ ಬೇಡಿಕೆ ಇದೆ.
ಪಡೆಯಪ್ಪ ಚಿತ್ರದ ನೀಲಾಂಬರಿ ಪಾತ್ರದಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್‌ಗೆ ಸೆಡ್ಡು ಹೊಡೆಯುವಂತೆ ಅಭಿನಯಿಸಿದ್ದ ರಮ್ಯಾ ಕೃಷ್ಣ, ಕನ್ನಡ ಚಿತ್ರರಂಗದಲ್ಲಿ ಸೃಷ್ಟಿಸಿದ್ದ ಕ್ರೇಜ್ ಕಡಿಮೆ ಏನಿಲ್ಲ. ಕೃಷ್ಣ ರುಕ್ಮಿಣಿ, ಗಡಿಬಿಡಿ ಗಂಡ, ಮಾಂಗಲ್ಯಂ ತಂತುನಾನೇನ, ಬಾ ಬಾರೋ ರಸಿಕ, ಏಕಾಂಗಿ, ಸ್ನೇಹ, ರಕ್ತ ಕಣ್ಣೀರು, ಮಾಣಿಕ್ಯ.. ಹೀಗೆ ಹತ್ತಾರು ಚಿತ್ರ, ವೈವಿಧ್ಯಮಯ ಪಾತ್ರದ ಮೂಲಕ ಮೂರು ತಲೆಮಾರಿನ ಹೀರೋಗಳ ಜೊತೆ ನಟಿಸುತ್ತಾ ಬಂದಿರುವ ಅಪರೂಪದ ನಟಿ ರಮ್ಯಾ ಕೃಷ್ಣ

ದಕ್ಷಿಣ ಭಾರತದ ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಅಲ್ಲದೆ ಬಾಲಿವುಡ್‌ನಲ್ಲಿಯೂ ಕೂಡ ರಮ್ಯಾಕೃಷ್ಣ ಹೆಸರು ಚಿರಪರಿಚಿತ. ಇನ್ನೂ 1998ರಲ್ಲಿ ತೆರೆಕೆಂಡ ಚಂದ್ರಲೇಖ ಎಂಬ ತೆಲುಗು ಚಿತ್ರದಲ್ಲಿ ನಟಿಸುವ ಹೊತ್ತಿಗೇ ರಮ್ಯಾ ಕೃಷ್ಣಾಗೆ ಆ ಚಿತ್ರದ ನಿರ್ದೇಶಕ ಕೃಷ್ಣ ವಂಶಿಯೊಂದಿಗೆ ಪ್ರೇಮಾಂಕುರವಾಗಿತ್ತು. ಆ ಪ್ರೀತಿ ಮತ್ತಷ್ಟು ಗಟ್ಟಿಯಾಗಿದ್ದೇ, 2003ರಲ್ಲಿ ರಮ್ಯಕೃಷ್ಣ, ಕೃಷ್ಣ ವಂಶಿಯನ್ನು ವಿವಾಹವಾದರು.
ಇಂಥ ರಮ್ಯಾ ಕೃಷ್ಣ ಹಿಂದೆ ಒಮ್ಮೆ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದ ಮಾತು ಈಗ ದೇಶದೆಲ್ಲೆಡೆ ಮತ್ತೊಮ್ಮೆ ಮಾರ್ದನಿಸುತ್ತಿದೆ. ಹೌದು.. ಕೆಲ ವರ್ಷಗಳ ಹಿಂದೆ, ಅನೇಕ ನಾಯಕಿಯರು ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವ ಹಂಚಿಕೊಳ್ತಿದ್ದರು. ಇದೇ ಸಮಯದಲ್ಲಿ ಮಾತನಾಡಿದ್ದ ರಮ್ಯಾ ಕೃಷ್ಣ, ಕಾಸ್ಟಿಂಗ್ ಕೌಚ್ ಸಮಸ್ಯೆ ಇಂದು ನಿನ್ನೆಯದಲ್ಲ, ಈ ಸಮಸ್ಯೆ ಕೇವಲ ಚಿತ್ರರಂಗದಲ್ಲಿ ಅಷ್ಟೇ ಅಲ್ಲ ಬೇರೆ ಬೇರೆ ಕ್ಷೇತ್ರದಲ್ಲಿಯೂ ಇದೆ ಎಂದು ಹೇಳಿದ್ದರು. ಚಿತ್ರರಂಗದ ಸೆಲೆಬ್ರಿಟಿಗಳು ಹೆಚ್ಚಾಗಿ ಪರದೆಯ ಮೇಲೆ ಕಾಣಿಸಿಕೊಳ್ಳುವುದರಿಂದ ಬಹುತೇಕರಿಗೆ ಸಿನಿಮಾದವರ ವಿಚಾರದಲ್ಲಿ ಸಿಕ್ಕಾಪಟ್ಟೆ ಆಸಕ್ತಿ ಎಂದಿದ್ದರು.

ಮುಂದುವರೆದು ಮಾತನಾಡಿದ್ದ ರಮ್ಯಾ ಕೃಷ್ಣ ಚಿತ್ರರಂಗದಲ್ಲಿ ಸ್ಟಾರ್ ಆಗಬೇಕೆಂದರೆ ನಿರ್ದೇಶಕ-ನಿರ್ಮಾಪಕರ ಅಥವಾ ಹೀರೋಗಳ ಜೊತೆ ಕೆಲವೊಮ್ಮೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತೆ ಎಂದಿದ್ದರು. ಇಲ್ಲದೇ ಇದ್ದರೆ ಬಣ್ಣದ ಕನಸು ಕಮರಿ ಹೋಗುವ ಸಾಧ್ಯತೆ ಹೆಚ್ಚಿರುತ್ತೆ ಅಂದಿದ್ದರು. ಇನ್ನೂ ನಾನು ತುಂಬಾ ಲಕ್ಕಿ. ನನಗ್ಯಾವತ್ತು ಹೊಂದಾಣಿಕೆ ಮಾಡಿಕೊಳ್ಳುವ ಪ್ರಮೇಯ ಬಂದಿಲ್ಲ ಎಂದು ಕೂಡ ರಮ್ಯಾ ಕೃಷ್ಣ ಹೇಳಿದ್ದರು.
ಹೆಚ್ಚು ಕಡಿಮೆ 07 ವರ್ಷದ ಹಿಂದೆ ರಮ್ಯಾ ಕೃಷ್ಣ ಹಂಚಿಕೊಂಡಿದ್ದ ಈ ಅಭಿಪ್ರಾಯದ ಬಗ್ಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಈಗ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದ್ದಾರೆ. ರಮ್ಯಾ ಅವರ ಈ ಹೇಳಿಕೆಯನ್ನ ಅನೇಕರು ವಿರೋಧಿಸುತ್ತಿದ್ದಾರೆ. ಒಟ್ನಲ್ಲಿ ರಮ್ಯಾ ಕೃಷ್ಣ ಯಾವತ್ತೋ ಮಾತನಾಡಿದ್ದ ಮಾತು ಇವತ್ತು ಸಾಮಾಜಿಕ ಜಾಲತಾಣದಲ್ಲಿ ಚರ್ಚಿತ ವಿಷಯವಾಗಿದೆ.


Click it and Unblock the Notifications











