For Quick Alerts
  ALLOW NOTIFICATIONS  
  For Daily Alerts

  ರಮ್ಯಾ ನನ್ನನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾಳೆ: ನರೇಶ್

  |

  ಪವಿತ್ರಾ ಲೋಕೇಶ್-ನರೇಶ್-ರಮ್ಯಾ ರಘುಪತಿ ಪ್ರಕರಣ ಶೀಘ್ರದಲ್ಲಿ ಮುಗಿಯುವಂತೆ ಕಾಣುತ್ತಿಲ್ಲ. ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪ ಮಾಡುತ್ತಲೇ ಇದ್ದಾರೆ.

  ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ನರೇಶ್‌ಗೆ ವಿಚ್ಛೇಧನ ನೀಡುವುದಿಲ್ಲ, ನನಗೆ ಪತಿ ಬೇಡದಿದ್ದರೂ ಮಕ್ಕಳಿಗೆ ತಂದೆ ಬೇಕು ಎಂದಿದ್ದಾರೆ. ಅದರ ಬೆನ್ನಲ್ಲೆ ನರೇಶ್, ಈಗಾಗಲೇ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದು, ವಿಚ್ಛೇಧನ ಪಡೆದೇ ಸಿದ್ಧ ಎಂದಿದ್ದಾರೆ.

  ನರೇಶ್ ಹಾಗೂ ಪವಿತ್ರಾ ಲೋಕೇಶ್ ಮೈಸೂರಿನ ಹೋಟೆಲ್ ಒಂದರಲ್ಲಿ ಇದ್ದಾಗ ಅಲ್ಲಿಗೆ ರಮ್ಯಾ ಹೋಗಿ ಗಲಾಟೆ ಮಾಡಿದ್ದರು. ಆಗ ನರೇಶ್, ರಮ್ಯಾಗೆ ವ್ಯಕ್ತಿಯೊಬ್ಬರ ಜೊತೆ ಅಫೇರ್ ಇದೆ ಎಂದು ಹೇಳಿದ್ದರು. ಈಗ ರಮ್ಯಾ ತಮ್ಮನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದಿದ್ದಾರೆ.

  ರಮ್ಯಾ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ: ನರೇಶ್ ಆರೋಪ

  ರಮ್ಯಾ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ: ನರೇಶ್ ಆರೋಪ

  ರಮ್ಯಾ ಕೆಲವು ಪ್ರಭಾವಿ ವ್ಯಕ್ತಿಗಳ ಸೇರಿಕೊಂಡು ನನ್ನನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಆದರೆ ನಾನು ಆ ರೀತಿಯ ಯಾವುದೇ ಬ್ಲಾಕ್‌ಮೇಲ್‌ಗಳಿಗೆ ಬಗ್ಗುವುದಿಲ್ಲ, ನಾನು ನ್ಯಾಯಾಲಯದ ಮೂಲಕವೇ ಹೋರಾಟ ಮಾಡುತ್ತೇನೆ ಎಂದು ನರೇಶ್ ಹೇಳಿರುವುದಾಗಿ ಕೆಲ ತೆಲುಗು ಮಾಧ್ಯಮಗಳು ವರದಿ ಮಾಡಿವೆ.

  ಮದುವೆ ಆಗಿಲ್ಲ ಎಂದಿದ್ದ ಪವಿತ್ರಾ ಲೋಕೇಶ್

  ಮದುವೆ ಆಗಿಲ್ಲ ಎಂದಿದ್ದ ಪವಿತ್ರಾ ಲೋಕೇಶ್

  ಇತ್ತ ಪವಿತ್ರಾ ಲೋಕೇಶ್‌ ಹೇಳಿಕೆಗೆ ನಟ ಸುಚೇಂದ್ರ ಪ್ರಸಾದ್ ಸಹ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ. ನಾನು, ಸುಚೇಂದ್ರ ಪ್ರಸಾದ್ ಜೊತೆಗೆ ಮದುವೆ ಆಗಿಲ್ಲ. ನಾನು ಅವರ ಜೊತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದೆ. ಹಾಗಾಗಿ ವಿಚ್ಛೇದನ ಕೊಡುವ ಮಾತೇ ಇಲ್ಲ ಎಂದು ಪವಿತ್ರ ಲೋಕೇಶ್ ಹೇಳಿಕೊಂಡಿದ್ದರು. ಆದರೆ ಇದಕ್ಕೆ ಸುಚೇಂದ್ರ ಪ್ರಸಾದ್ ತಿರುಗೇಟು ಕೊಟ್ಟಿದ್ದು, ''ನಾವು ಸಂಪ್ರದಾಯ ಪ್ರಕಾರವೇ ಮದುವೆ ಆಗಿದ್ದೇವೆ'' ಎಂದಿದ್ದಾರೆ. ಜೊತೆಗೆ ಒಂದಷ್ಟು ಉದಾಹರಣೆಗಳನ್ನೂ ಕೂಡ ಕೊಟ್ಟಿದ್ದಾರೆ.

  ಸಂಪ್ರದಾಯದಂತೆ ಮದುವೆ ಆಗಿದ್ದೇವೆ: ಸುಚೇಂದ್ರ ಪ್ರಸಾದ್

  ಸಂಪ್ರದಾಯದಂತೆ ಮದುವೆ ಆಗಿದ್ದೇವೆ: ಸುಚೇಂದ್ರ ಪ್ರಸಾದ್

  ನಾನು ಹಿಂದೂ ವಿವಾಹದ ಸಂಪ್ರದಾಯದಂತೆ ಮದುವೆ ಆಗಿದ್ದೇನೆ. ನಾನೇ ಪವಿತ್ರಾ ಲೋಕೇಶ್ ಅವರ ಗಂಡ ಎನ್ನುವುದಕ್ಕೆ ಅವರ ಪಾಸ್ ಪೋರ್ಟ್ ಹಾಗೂ ಆಧಾರ್ ಕಾರ್ಡ್ ಗಮನಿಸಿದರೆ ಗೊತ್ತಾಗುತ್ತದೆ. ನನ್ನ ಪಾಸ್ ಪೋರ್ಟ್ ನಲ್ಲೂ ಅವರೇ ಹೆಂಡತಿ ಅಂತಿದೆ. ಅಲ್ಲದೇ, ನಾವಿಬ್ಬರೂ ಗಂಡ ಹೆಂಡತಿ ಅನ್ನುವ ಕಾರಣಕ್ಕಾಗಿಯೇ ಹಲವಾರು ಧಾರ್ಮಿಕ ಗುರುಗಳು ನಮ್ಮನ್ನು ಸನ್ಮಾನಿಸಿದ್ದಾರೆ. ಇದಕ್ಕಿಂತ ಬೇರೆ ಪುರಾವೆ ಬೇಕಿಲ್ಲ. ಆದರೆ, ಮದುವೆ ನೋಂದಣಿ ಪತ್ರ ಮಾತ್ರ ಮಾಡಿಸಿಲ್ಲ" ಎಂದಿದ್ದಾರೆ ಸುಚೇಂದ್ರ ಪ್ರಸಾದ್.

  ಎಂಟು ವರ್ಷದಿಂದ ಜೊತೆಗಿಲ್ಲ ಎಂದ ನರೇಶ್

  ಎಂಟು ವರ್ಷದಿಂದ ಜೊತೆಗಿಲ್ಲ ಎಂದ ನರೇಶ್

  ಮತ್ತೊಂದೆಡೆ ನರೇಶ್, ನಾನು, ರಮ್ಯಾ ಮದುವೆ ಆಗಿದ್ದೆವು, ಆದರೆ ಎರಡು ವರ್ಷವಷ್ಟೆ ಜೊತೆಯಲ್ಲಿದ್ದೆವು, ನನ್ನ ಪಾಸ್‌ಪೋರ್ಟ್‌ನಲ್ಲಿ ಸಹ ರಮ್ಯಾ ಹೆಸರು ಪತ್ನಿ ಎಂದಿಲ್ಲ. ನಾವು ಕಳೆದ ಎಂಟು ವರ್ಷದಿಂದ ಜೊತೆಯಾಗಿಲ್ಲ. ಆಕೆಗೆ ರಘು ಶೆಟ್ಟಿ ಎಂಬುವರೊಟ್ಟಿಗೆ ಅನೈತಿಕ ಸಂಬಂಧ ಇದೆ'' ಎಂದು ನರೇಶ್ ವಾಗ್ದಾಳಿ ನಡೆಸಿದ್ದರು.

  English summary
  Telugu actor Naresh alleged that Ramya Raghupathi blackmailing him. He said he will fight against Ramya through court.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X