ನರೇಶ್ ಬಾಳಿಗೆ ಪವಿತ್ರಾ ಎಂಟ್ರಿ ಕೊಟ್ಟಿದ್ದು ಅದಕ್ಕೆ: ನರೇಶ್ ಅಫೇರ್ಸ್ ಬಗ್ಗೆ ತಾಯಿಗೂ ಗೊತ್ತಿತ್ತು: ರಮ್ಯಾ ರಘುಪತಿ

ತೆಲುಗು ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಲಿವ್‌ಇನ್ ರಿಲೇಶನ್‌ಶಿಪ್‌ನಲ್ಲಿರೋದು ಗೊತ್ತೇಯಿದೆ. ಹೊಸ ವರ್ಷದ ಸಂಭ್ರಮದಲ್ಲೇ ಇಬ್ಬರು ಮದುವೆ ಆಗುತ್ತಿರುವುದಾಗಿ ಹೇಳಿ ಒಂದು ಲಿಪ್‌ಲಾಕ್ ವಿಡಿಯೋವನ್ನು ಕೂಡ ಜೋಡಿ ರಿಲೀಸ್ ಮಾಡಿತ್ತು. ಆದರೆ ಇದು ಸಿನಿಮಾ ಪ್ರಮೋಷನ್ ಗಿಮಿಕ್ ಎನ್ನಲಾಗ್ತಿದೆ.

ನರೇಶ್- ಪವಿತ್ರಾ ಲಿಪ್‌ಲಾಕ್‌ ವಿಡಿಯೋ ಬಗ್ಗೆ 2 ದಿನಗಳ ನಂತರ ನರೇಶ್ 3ನೇ ಪತ್ನಿ ರಮ್ಯಾ ರಘುಪತಿ ಪ್ರತಿಕ್ರಿಯಿಸಿದ್ದರು. ಇಂತಹದನ್ನೆಲ್ಲಾ ನಾನು ಸಾಕಷ್ಟು ನೋಡಿದ್ದೇನೆ. ನರೇಶ್ ರಾಸಲೀಲೆಗಳ ಬಗ್ಗೆ ನನಗೆ ಗೊತ್ತು. ಇದರಲ್ಲಿ ನನಗೆ ಅಚ್ಚರಿ ಏನು ಅನ್ನಿಸಲಿಲ್ಲ ಎಂದಿದ್ದರು. ಸದ್ಯ ಇದೇ ವಿಚಾರವಾಗಿ ಸಾಕಷ್ಟು ಸಂದರ್ಶನಗಳಲ್ಲಿ ರಮ್ಯಾ ರಘುಪತಿ ಮಾತನಾಡುತ್ತಿದ್ಧಾರೆ. ನರೇಶ್ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಜೊತೆಗೆ ನಮ್ಮಿಬ್ಬರ ಡಿವೋರ್ಸ್ ಆಗಿಲ್ಲ. ನರೇಶ್- ಪವಿತ್ರಾ ಮದುವೆ ಆಗಲು ನಾನು ಬಿಡುವುದಿಲ್ಲ ಎಂದು ಹೇಳುತ್ತಾ ಬರುತ್ತಿದ್ದಾರೆ.

ನನ್ನ ಮಗನಿಗೆ ತಂದೆಯ ಅವಶ್ಯಕತೆ ಇದೆ. ಹಾಗಾಗಿ ನಾನು ಡಿವೋರ್ಸ್‌ಗೆ ಒಪ್ಪುವುದಿಲ್ಲ. ನಾವಿಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ತೆಗೆದುಕೊಳ್ಳುತ್ತಿದ್ದೇವೆ, ನಾನು ಅದಕ್ಕಾಗಿ ಜೀವನಾಂಶ ತೆಗೆದುಕೊಂಡಿದ್ದೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಅದೆಲ್ಲ ಸುಳ್ಳು ಎಂದಿದ್ದಾರೆ.

ನರೇಶ್ ವಿರುದ್ಧ್ ಹಲವು ಆರೋಪ

ನರೇಶ್ ವಿರುದ್ಧ್ ಹಲವು ಆರೋಪ

"ನರೇಶ್ ಒಬ್ಬ ಸ್ತ್ರೀ ಪೀಡಕ. ಮಗನ ಎದುರೇ ಪೋರ್ನ್ ವಿಡಿಯೋಗಳನ್ನು ನೋಡುತ್ತಾನೆ. ನನ್ನನ್ನು ಬಿಡಿಸಿಕೊಳ್ಳಲು ಅಕ್ರಮ ಸಂಬಂಧಗಳು ಕಟ್ಟಿದ್ದ. ಕೊನೆಗೂ ದೇವರಂಥ ಮಾವ ಕೃಷ್ಣ ಅವರ ಜೊತೆಗೂ ನನಗೆ ಸಂಬಂಧ ಇದೆ ಎಂದು ಹೇಳಿದ್ದ. ಬರೀ ಆರೋಪಗಳಿಂದಲೇ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾನೆ. ಸುಳ್ಳು ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾನೆ" ಹೀಗೆ ರಮ್ಯಾ ರಘುಪತಿ ಹತ್ತು ಹಲವು ಆರೋಪಗಳನ್ನು ಮಾಡುತ್ತಿದ್ದಾರೆ.

ಡಿವೋರ್ಸ್‌ಗಾಗಿ ಅರ್ಜಿ ಹಾಕಿದ್ದಾರೆ

ಡಿವೋರ್ಸ್‌ಗಾಗಿ ಅರ್ಜಿ ಹಾಕಿದ್ದಾರೆ

ಇದೀಗ ಮತ್ತೊಂದು ಸಂದರ್ಶನದಲ್ಲಿ ಮಾತನಾಡಿರುವ ರಮ್ಯ, "ನರೇಶ್ ಡಿವೋರ್ಸ್‌ಗಾಗಿ ಬೇಕೆಂದು ಅರ್ಜಿ ಹಾಕಿದ್ದಾರೆ. ಅಷ್ಟೇ ಅಲ್ಲದೇ ನನ್ನ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಮಗುವಿನ ಗಾರ್ಡಿಯನ್‌ಶಿಪ್‌ ಇಂಜಕ್ಷನ್‌ ಆದೇಶಕ್ಕೆ ಅರ್ಜಿ ಸಲ್ಲಿಸಲಾಗಿದೆ. ನರೇಶ್ ಮಾಡಿದ ಆರೋಪಗಳ ವಿರುದ್ಧ ನಾನು ಹೋರಾಟ ಮಾಡುತ್ತಿದ್ದೇನೆ. ನನ್ನ ಮೇಲೆ ಮಾಡಿದ ಆರೋಪಗಳನ್ನು 6 ತಿಂಗಳು ಕಳೆದರೂ ಅವರಿಂದ ನಿರೂಪಿಸಲು ಸಾಧ್ಯವಾಗಿಲ್ಲ" ಎಂದಿದ್ದಾರೆ.

ನನಗೆ ನರೇಶ್ ಆಸ್ತಿ ಬೇಕಾಗಿಲ್ಲ

ನನಗೆ ನರೇಶ್ ಆಸ್ತಿ ಬೇಕಾಗಿಲ್ಲ

"ನಾನು ಗೃಹ ಹಿಂಸೆ ಕೇಸ್ ಮಾತ್ರ ಹಾಕಿದ್ದೀನಿ. ಹಾಗೆಯೇ ನನಗೂ , ನನ್ನ ಮಗನ ಜೀವನದ ನಿರ್ವಹಣೆಗೆ ಹಣ ಬೇಕು. ನನ್ನ ಮೇಲೆ ಅನೇಕ ಆರೋಪಗಳು ಬಂದವು. ನರೇಶ್ ಆಸ್ತಿಗಾಗಿ ನಾನು ಇದೆಲ್ಲಾ ಮಾಡುತ್ತಿದ್ದೀನಿ ಎಂದು ಆರೋಪಿಸುತ್ತಿದ್ದಾರೆ. ನನಗೆ ಆಸ್ತಿ ಮುಖ್ಯ ಅಲ್ಲ. ನನ್ನ ಮಗನ ಭವಿಷ್ಯ ಮುಖ್ಯ. ಮಗನಿಗೋಸ್ಕರ ಡಿವೋರ್ಸ್‌ಗೆ ನಾನು ಒಪ್ಪುವುದು ಇಲ್ಲ. ಏನೇ ಆದರೂ ಸರಿ, ನನ್ನ ಹೋರಾಟವನ್ನು ಮುಂದುವರೆಸುತ್ತೇನೆ"

ನರೇಶ್‌ಗೆ ಪವಿತ್ರಾ ಹತ್ತಿರ ಆಗಿದ್ದೇಕೆ?

ನರೇಶ್‌ಗೆ ಪವಿತ್ರಾ ಹತ್ತಿರ ಆಗಿದ್ದೇಕೆ?

"ಹೆಂಡತಿ ಎಂದು ಕೂಡ ನೋಡದೇ ನನ್ನನ್ನು ಟೀಕೆ ಮಾಡುತ್ತಿದ್ದಾನೆ. ನನ್ನ ಮಗನ ರಕ್ಷಣೆ ನನಗೆ ಮುಖ್ಯ. ಆರ್ಥಿಕ ಕಾರಣಕ್ಕೆ ನರೇಶ್‌ಗೆ ಪವಿತ್ರಾ ಲೋಕೇಶ್‌ ಹತ್ತಿರವಾಗಿದ್ದು. ಅದು ಬಿಟ್ಟು ಮತ್ತೇನು ಇಲ್ಲ. ಹಿಂದೆ ಕೂಡ ನರೇಶ್‌ಗೆ ಅಫೇರ್‌ಗಳಿದ್ದವು. ಯಾರೊಟ್ಟಿಗಾದರೂ ಸಿಕ್ಕಿ ಬಿದ್ದರೆ 2 ತಿಂಗಳು ಒಳ್ಳೆಯ ಗಂಡನಾಗಿ ನಟಿಸುತ್ತಿದ್ದ. ನಂತರ ಮತ್ತೆ ಹಳೇ ಚಾಳಿ ಶುರುವಾಗುತ್ತಿತ್ತು. ನರೇಶ್ ಅಫೇರ್‌ಗಳ ವಿಚಾರ ಅವರ ತಾಯಿ ವಿಜಯ ನಿರ್ಮಲಾ ಅವರಿಗೂ ಗೊತ್ತಿತ್ತು. ಆದರೆ ನರೇಶ್ ಬದಲಾಗುತ್ತಾನೆ ಎಂದುಕೊಂಡಿದ್ದರು. ಆಕೆಯ ಅಗಲಿಕೆಯ ನಂತರ ಇವರನ್ನು ಕೇಳುವವರು ಇಲ್ಲದಂತಾಗಿದೆ. ವಿಜಯ ನಿರ್ಮಲಾ ಬದುಕಿದ್ದರೆ ನನಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ನನ್ನ ಸಮಸ್ಯೆಗಳ ಬಗ್ಗೆ ನನ್ನ ಫ್ಯಾಮಿಲಿಗೆ ಹೇಳುತ್ತಿರಲಿಲ್ಲ. ನಾನು ಆರ್ಯ ಸಮಾಜದಲ್ಲಿ ಮದುವೆ ಮಾಡಿಕೊಂಡಿದ್ದೇನೆ. ನಾನು ಕಾನೂನುಬದ್ಧವಾಗಿ ಹೋರಾಡುತ್ತೇನೆ" ಎಂದಿದ್ದಾರೆ.

More from Filmibeat

English summary
Ramya Raghupathi serious allegations on her Husband Naresh and Pavitra lokesh. Naresh's 3rd wife Ramya Raghupati has reacted by saying she will never let Naresh get married again. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X