ಬೆಂಗಳೂರಿಗೆ ಬಂದ ನರೇಶ್: ಮೂರನೇ ಪತ್ನಿ ರಮ್ಯಾ ವಿರುದ್ಧ ಹಲವು ಆರೋಪ

ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಮದುವೆ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ನರೇಶ್ ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿಗೆ ವಿಚ್ಛೇಧನ ನೀಡದೆ ಪವಿತ್ರಾ ಲೋಕೇಶ್ ಅನ್ನು ವಿವಾಹವಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಅದರ ಬೆನ್ನಲ್ಲೆ ನರೇಶ್‌ರ ಮೂರನೇ ಪತ್ನಿ ಕನ್ನಡತಿಯೂ ಆದ ರಮ್ಯಾ ರಘುಪತಿ ಬೆಂಗಳೂರಿಗೆ ಆಗಮಿಸಿ ಇಲ್ಲಿನ ಚಾನೆಲ್‌ಗೆ ಸಂದರ್ಶನ ನೀಡಿ, ನರೇಶ್ ತಮ್ಮ ವಿರುದ್ಧ ಸತತ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದರು. ತಮ್ಮ ಜೀವನ ಹಾಳು ಮಾಡಿದರು ಎಂದರು. ಪವಿತ್ರಾ ಲೋಕೇಶ್ ಸಹ ತಮ್ಮ ಹೆಸರಿಗೆ ಮಸಿ ಬಳಿದುಕೊಳ್ಳುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ಅದರ ಬೆನ್ನಲ್ಲೆ ಪವಿತ್ರಾ ಲೋಕೇಶ್ ಪತಿ ಸುಚೇಂದ್ರ ಪ್ರಸಾದ್ ಸಹ, ಪವಿತ್ರಾ ಲೋಕೇಶ್‌ ಲಾಲಸೆಯುಳ್ಳ ಮಹಿಳೆಯೆಂದು, ನರೇಶ್ ಜೊತೆ ಇನ್ನಾರು ತಿಂಗಳಷ್ಟೆ ಅವರು ಸಂಸಾರ ಮಾಡಬಲ್ಲರು ಎಂದಿದ್ದಾರೆ. ಇದೆಲ್ಲದರ ನಡುವೆ ಇದೀಗ ನಟ ನರೇಶ್ ಬೆಂಗಳೂರಿಗೆ ಆಗಮಿಸಿದ್ದು, ರಮ್ಯಾ ರಘುಪತಿ ಮಾಡಿರುವ ಆರೋಪಗಳ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ರಮ್ಯಾ ರಘುಪತಿ ನಿಜ ಮುಖ ಬಯಲಾಗುತ್ತದೆ

ರಮ್ಯಾ ರಘುಪತಿ ನಿಜ ಮುಖ ಬಯಲಾಗುತ್ತದೆ

ಟಿವಿ9 ಜೊತೆ ಮಾತನಾಡಿರುವ ನರೇಶ್, ''ಹೈದರಾಬಾದ್‌ನಲ್ಲಿ ರಮ್ಯಾ ಹಾಗೂ ಸಂಗಡಿಗರು ಸರಣಿ ಆರ್ಥಿಕ ಅಪರಾಧಗಳನ್ನು ಮಾಡಿದ್ದಾರೆ. ಸುಮಾರು ಎರಡು ಕೋಟಿ ರುಪಾಯಿ ಹಣ ವಂಚನೆ ಮಾಡಿದ್ದಾಳೆ. ಹಿಂದುಪುರದಲ್ಲಿ ಚಿಟ್‌ಫಂಡ್ ಅವ್ಯವಹಾರವನ್ನು ಮಾಡಿದ್ದಾಳೆ. ಈಗ ಬೆಂಗಳೂರಿಗೆ ಬಂದು ಇಲ್ಲಿ ತಮ್ಮ ಮಾರುಕಟ್ಟೆ ತೆರೆಯಲು ನೋಡುತ್ತಿದ್ದಾಳೆ. ಹಾಗಾಗಿ ನಾನು ಬೆಂಗಳೂರಿಗರನ್ನು ಎಚ್ಚರಿಸಲೆಂದು ಇಲ್ಲಿಗೆ ಬಂದಿದ್ದೇನೆ. ಆಕೆಯಿಂದ (ರಮ್ಯಾ ರಘುಪತಿ) ಹಣ ಕಳೆದುಕೊಂಡವರು ದಾಖಲೆಗಳ ಸಮೇತ ನಾಳೆ ಬರುತ್ತಿದ್ದಾರೆ. ನಾಳೆ ಇಲ್ಲಿಯೇ ರಮ್ಯಾ ರಘುಪತಿ ನಿಜ ಮುಖ ಬಯಲಾಗುತ್ತದೆ'' ಎಂದಿದ್ದಾರೆ.

ಬೆಂಗಳೂರಿಗೆ ಬಂದು ಮಾತನಾಡಿದ್ದು ಏಕೆ: ನರೇಶ್

ಬೆಂಗಳೂರಿಗೆ ಬಂದು ಮಾತನಾಡಿದ್ದು ಏಕೆ: ನರೇಶ್

''ಹೈದರಾಬಾದ್‌ನಲ್ಲಿ ನನ್ನ ಘನತೆಗೆ ಧಕ್ಕೆ ತಂದಿದ್ದಾಳೆ. ಸಣ್ಣ ಪುಟ್ಟ ವ್ಯಕ್ತಿಗಳಿಂದಲೂ ಲಕ್ಷಾಂತರ ಹಣ ಪಡೆದಿದ್ದಾಳೆ. ಕೂದಲು ಮಾರಿಕೊಳ್ಳುವ ವ್ಯಕ್ತಿಯಿಂದಲೂ ಲಕ್ಷಾಂತರ ಹಣ ಪಡೆದಿದ್ದಾಳೆ. ಅವರೆಲ್ಲ ನನಗೆ ರಾತ್ರಿ ಹಗಲು ಕರೆ, ಸಂದೇಶಗಳನ್ನು ಮಾಡಿ ನಮ್ಮ ಹಣ ನಮಗೆ ಕೊಡಿಸಿ ಎಂದು ಕೇಳಿಕೊಳ್ಳುತ್ತಲೇ ಇದ್ದರು. ಆಕೆಗೆ ಅಷ್ಟೋಂದು ನೋವಾಗಿದ್ದರೆ ಆಕೆ ಹೈದರಾಬಾದ್‌ನಲ್ಲಿ ಮಾತನಾಡಬಹುದಿತ್ತು, ಆದರೆ ಅಲ್ಲಿ ನಾನಿದ್ದೆ ಎಂದು ಮಾತನಾಡಲಿಲ್ಲ. ಅಥವಾ ನ್ಯಾಯಾಲಕ್ಕೆ ಹೋಗಬಹುದಿತ್ತು, ಅಲ್ಲಿ ವಾದಿಸಬಹುದಿತ್ತು. ಆದರೆ ಆಕೆ ಇಲ್ಲಿಗೆ ಬಂದಳು. ಏಕೆಂದರೆ, ಹಿಂದಪುರ, ಅನಂತಪುರ, ಹೈದರಾಬಾದ್‌ನಲ್ಲಿ ಎಲ್ಲ ಮುಗಿಸಿ, ಅಲ್ಲಿನ ಜನರಿಗೆ ಮೋಸ ಮಾಡಿ, ಈಗ ಬೆಂಗಳೂರಿಗೆ ಬಂದಿದ್ದಾಳೆ. ಇಲ್ಲಿ ಜನರಿಗೆ ಮೋಸ ಮಾಡುವ ಮಾರುಕಟ್ಟೆ ತೆರೆಯಬೇಕೆಂಬುದು ಆಕೆಯ ಉದ್ದೇಶ'' ಎಂದಿದ್ದಾರೆ ನರೇಶ್.

ನಾನು, ರಮ್ಯಾ ಬೇರಾಗಿ ಎಂಟು ವರ್ಷವಾಗಿವೆ: ನರೇಶ್

ನಾನು, ರಮ್ಯಾ ಬೇರಾಗಿ ಎಂಟು ವರ್ಷವಾಗಿವೆ: ನರೇಶ್

''ನಾನು ರಮ್ಯಾ ಮದುವೆಯಾಗಿ ಹತ್ತು ವರ್ಷವಾಗಿದೆ. ಕಳೆದ ಎಂಟು ವರ್ಷದಿಂದ ನಾವಿಬ್ಬರು ಜೊತೆಯಲ್ಲಿಲ್ಲ. ಮಗು ಹುಟ್ಟಿದಾಗಿನಿಂದಲೂ ನಾವಿಬ್ಬರು ಒಟ್ಟಿಗೆ ಇಲ್ಲ. ನಾನು ಒಬ್ಬನೇ ಇದ್ದೆ, ಖಿನ್ನತೆಗೆ ಒಳಗಾಗಿದ್ದೆ. ನನ್ನ ವೃತ್ತಿ ಬದುಕು ಒಂದುಕಡೆ, ಮನೆಯಲ್ಲಿ ಹಿರಿಯರನ್ನು ನೋಡಿಕೊಳ್ಳಬೇಕಾಗಿದ್ದ ಜವಾಬ್ದಾರಿ ಒಂದು ಕಡೆ. ಇಡೀ ಮನೆ ಮರಳುಗಾಡಿನಂತಾಗಿತ್ತು. ಯಾರೂ ನಮ್ಮನ್ನು ನೋಡಿಕೊಳ್ಳಲಿಲ್ಲ. ಆಗ ರಮ್ಯಾ ರಘುಪತಿ ಎಲ್ಲಿದ್ದರು. ಆ ಸಮಯದಲ್ಲೆಲ್ಲ ರಮ್ಯಾ, ಹಿಂದುಪುರ ಹಾಗೂ ಬೆಂಗಳೂರಿನಲ್ಲಿದ್ದರು, ತಮ್ಮ ವೈಯಕ್ತಿಕ ಹಾಗೂ ವ್ಯಾವಹಾರಿಕ ಸಂಬಂಧಗಳ ನಡುವೆ ಬ್ಯುಸಿಯಾಗಿದ್ದರು. ಸಾಲಗಳ ಮೇಲೆ ಸಾಲ ಮಾಡಿದರು, ವ್ಯವಹಾರಗಳ ಮೇಲೆ ವ್ಯಹಾರ ಮಾಡಿ ಸತತವಾಗಿ ಲಾಸ್ ಆದರು. ಹಣ ಪಡೆದ ಜನರಿಗೂ ಮೋಸ ಮಾಡಿದಳು'' ಎಂದಿದ್ದಾರೆ ನರೇಶ್.

ತಂದೆಯ ಬಳಿ 50 ಲಕ್ಷ ಹಣಕ್ಕೆ ಅಂಗಲಾಚಿದ್ದಳು: ನರೇಶ್

ತಂದೆಯ ಬಳಿ 50 ಲಕ್ಷ ಹಣಕ್ಕೆ ಅಂಗಲಾಚಿದ್ದಳು: ನರೇಶ್

''ರಮ್ಯಾ ರಘುಪತಿ ನನ್ನ ಜೀವನಕ್ಕೆ ಎಂಟ್ರಿ ಆದರು ನನ್ನ ಇಡೀ ಕುಟುಂಬವನ್ನು ಹಾಳು ಮಾಡಿದರು. ತಮ್ಮ ತಂದೆ ಸೂಪರ್ ಸ್ಟಾರ್ ಕೃಷ್ಣ ಬಳಿ ಬಂದು 50 ಲಕ್ಷ ಕೊಡಿ ಎಂದು ಒತ್ತಾಯ ಮಾಡಿದರು, ಇಲ್ಲವಾದರೆ ನಾನು ಜೈಲಿಗೆ ಹೋಗಬೇಕಾಗುತ್ತದೆ ಎಂದು ಅಂಗಲಾಚಿದಳು. ಆಗ ನಾನು ಹತ್ತು ಲಕ್ಷ ಹಣ ನೀಡಿದ್ದೇನೆ. ಆದರೆ ಈಗ ಬಂದು ಹೀಗೆ ನನ್ನ ವಿರುದ್ಧ ಮಾತನಾಡುತ್ತಿದ್ದಾಳೆ. ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿ, ತಾನು ಒಳ್ಳೆಯವಳಂತೆ ಬಿಂಬಿಸಿಕೊಂಡು ಜನರನ್ನು ನಂಬಿಸಿ ಇಲ್ಲಿನ ಜನರಿಂದ ಹಣ ವಸೂಲಿ ಮಾಡುವುದು ಆಕೆಯ ಉದ್ದೇಶ. ಇದಕ್ಕಾಗಿ ಒಂದು ಚಾನೆಲ್‌ ಜೊತೆ ಒಪ್ಪಂದ ಮಾಡಿಕೊಂಡೆ ಆಕೆ ಬೆಂಗಳೂರಿಗೆ ಬಂದಿದ್ದಾಳೆ'' ಎಂದು ಆರೋಪಿಸಿದ್ದಾರೆ ನರೇಶ್.

ರಮ್ಯಾ ರಘುಪತಿ ಮನೋರೋಗಿ: ನರೇಶ್

ರಮ್ಯಾ ರಘುಪತಿ ಮನೋರೋಗಿ: ನರೇಶ್

''ಆಕೆಯ ತಂಗಿಗೆ ಮದುವೆ ಮಾಡಿದಾಗ ವರನ ಕಡೆಯವರು ಒಂದು ರುಪಾಯಿ ಸಹ ವರದಕ್ಷಿಣೆ ಪಡೆಯಲಿಲ್ಲ. ಆದರೆ ರಮ್ಯಾ, ಎಲ್ಲರ ಬಳಿ ಹೋಗಿ ವರದಕ್ಷಿಣೆ ಕೇಳಿದ್ದಾರೆ ಅದಕ್ಕೆ ಹಣ ಕೊಡಿ ಎಂದು ಕೇಳಿ ಪಡೆದುಕೊಂಡಳು. ಬಾಯಿ ತೆರೆದರೆ ಆಕೆ ಬರೀ ಸುಳ್ಳು ಹೇಳುತ್ತಾಳೆ. ಆಕೆಯ ಬುದ್ಧಿ ಸ್ಥಿಮಿತದಲ್ಲಿಲ್ಲ. ಐದು ವರ್ಷದ ಹಿಂದೆಯೇ ಆಕೆಯನ್ನು ಪರೀಕ್ಷಿಸಿದ ವೈದ್ಯ ರಮಣಾರಾವ್, ಮನಶಾಸ್ತ್ರಜ್ಞರ ಬಳಿ ಚಿಕಿತ್ಸೆ ಪಡೆದುಕೊಳ್ಳಿ ಎಂದಿದ್ದರು. ಆಕೆ ಎಲ್ಲರಿಂದ ಸಾಲ ಬೇರೆ ಪಡೆದುಕೊಂಡಿದ್ದಳು, ಅದೆಲ್ಲ ನನ್ನ ತಲೆಯ ಮೇಲೆ ಬೀಳುತ್ತಿತ್ತು. ಈಗ ನನ್ನನ್ನು ಬ್ಲಾಕ್‌ ಮೇಲ್ ಮಾಡಿ ನನ್ನಿಂದ ಹಣ ವಸೂಲಿ ಮಾಡಲು ಹೀಗೆಲ್ಲ ಮಾಡುತ್ತಿದ್ದಾರೆ'' ಎಂದಿದ್ದಾರೆ ನರೇಶ್.

ಇರುವ ಆಸ್ತಿ ನೋಡಿಕೊಂಡು ಇದ್ದಿದ್ದರೆ ಸಾಕಿತ್ತು: ನರೇಶ್

ಇರುವ ಆಸ್ತಿ ನೋಡಿಕೊಂಡು ಇದ್ದಿದ್ದರೆ ಸಾಕಿತ್ತು: ನರೇಶ್

''ಆಕೆಗೆ ಮಾನಸಿಕ ಆರೋಗ್ಯ ಸರಿಯಿಲ್ಲ. ನಮಗೆ ಸಾಕಷ್ಟು ಆಸ್ತಿ ಇತ್ತು. ಅದನ್ನು ನೋಡಿಕೊಂಡು ಸುಮ್ಮನೆ ಇದ್ದಿದ್ದರೆ ಸಾಕಾಗುತ್ತಿತ್ತು. ನನ್ನ ತಾಯಿಗೆ ಅದೇ ಕೊರಗಿತ್ತು, ಇರುವ ಆಸ್ತಿಯನ್ನು ನೋಡಿಕೊಂಡು ಆರಾಮವಾಗಿದ್ದಿದ್ದರೆ ಸಾಕಿತ್ತು. ಊದುಬತ್ತಿ ಫ್ಯಾಕ್ಟರಿ ಇಟ್ಟು, ಎನ್‌ಜಿಓ ಹೆಸರಲ್ಲಿ ಏನೇನೋ ವ್ಯವಹಾರ ಮಾಡಿ, ಮುನ್ನೂರು ಜನಕ್ಕೆ ಉದ್ಯೋಗ ಕೊಡುತ್ತಿದ್ದೇನೆಂದು ಹೇಳಿಕೊಂಡು ಎಂಎಲ್‌ಎ ಆಗಲು ಸಹ ಪ್ರಯತ್ನ ಮಾಡಿದಳು. ನಂತರ ಎರಡು ಕೋಟಿ ಮೋಸ ಮಾಡಿ. ಈಗ ನನ್ನ ಜೀವಕ್ಕೆ ಬೆದರಿಕೆ ಇದೆ. ರಮ್ಯಾ ಹಾಗೂ ಆಕೆಯ ಜನರು ನನಗೆ ಬೆದರಿಕೆ ಹಾಕುತ್ತಿದ್ದಾರೆ'' ಎಂದು ಆರೋಪಿಸಿದ್ದಾರೆ ನರೇಶ್.

ಮಕ್ಕಳಿಗಾಗಿ ಇಷ್ಟು ವರ್ಷ ವಿಚ್ಛೇಧನಕ್ಕೆ ಅರ್ಜಿ ಹಾಕಿರಲಿಲ್ಲ: ನರೇಶ್

ಮಕ್ಕಳಿಗಾಗಿ ಇಷ್ಟು ವರ್ಷ ವಿಚ್ಛೇಧನಕ್ಕೆ ಅರ್ಜಿ ಹಾಕಿರಲಿಲ್ಲ: ನರೇಶ್

ಇದೆಲ್ಲ ಕಾರಣಗಳಿಂದ ಇಷ್ಟು ದಿನ ಕಾದ ಬಳಿಕ ನಾನು ಈಗ ವಿಚ್ಛೇಧನಕ್ಕೆ ಅರ್ಜಿ ಹಾಕಿಕೊಂಡೆ. ಕಳೆದ ಏಳು ವರ್ಷದಿಂದ ನಾನು ತಡೆದುಕೊಂಡಿದ್ದೆ. ನನ್ನ ಮಗುವಿಗಾಗಿ ನಾನು ಸುಮ್ಮನೆ ಇದ್ದೆ. ನಾನು ವಿಚ್ಛೇಧನ ಸಲ್ಲಿಸಲು ಪವಿತ್ರಾ ಲೋಕೇಶ್ ಕಾರಣವಲ್ಲ, ಅದಕ್ಕೆ ಆಕೆಯೇ ಕಾರಣ. ಆಕೆ ನಮ್ಮ ಇಡೀ ಕುಟುಂಬವನ್ನು ಹಾಳು ಮಾಡಿದಳು. ಈಗ ಆಕೆ ಬೆಂಗಳೂರಿಗೆ ಬಂದಿದ್ದಾಳೆ. ಇಲ್ಲಿ ಹೊಸದಾಗಿ ತನ್ನ ಮೋಸದ ಮಾರುಕಟ್ಟೆ ತೆರೆಯಲು ಬಂದಿದ್ದಾಳೆ. ಹಾಗಾಗಿ ಇಲ್ಲಿನವರನ್ನು ಎಚ್ಚರಿಸಲೆಂದು ನಾನು ಇಲ್ಲಿಗೆ ಬಂದಿದ್ದೇನೆ'' ಎಂದಿದ್ದಾರೆ ನರೇಶ್.

More from Filmibeat

English summary
Actor Naresh said Ramya Raghupathi is a economic offender. She is trying to extract money from me. I have life threat from Ramya and her associates.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X