ರಾಣಾ ದಗ್ಗುಬಾಟಿ-ಮಿಹಿಕಾ ಬಜಾಜ್ ಮದುವೆ ಮುಂದೂಡಿಕೆ

ಇತ್ತೀಚೆಗಷ್ಟೆ ಜಂಟಿಯಾದ ತೆಲುಗು ಖ್ಯಾತ ನಟ ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್ ಅವರ ಮದುವೆ ಮುಂದಕ್ಕೆ ಹೋಗಿದೆ.

Recommended Video

ವೈರಲ್ ಆಯ್ತು ಯಶ್ ಮಗಳಿಗೆ ಚಿರು ಮಾಡಿದ್ದ ಕಮೆಂಟ್! | Chiranjeevi Sarja | Yash | Radhika Pandit

ಕಳೆದ ತಿಂಗಳಷ್ಟೆ ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್ ಮದುವೆಯಾಗುವುದು ಘೋಷಿಸಿದ್ದರು. ಅಂತೆಯೇ ಅವರ ರೋಕಾ ಕಾರ್ಯಕ್ರಮ ಸಹ ನಡೆದು ಶೀಘ್ರದಲ್ಲೇ ಮದುವೆ ಮಾಡುವುದಾಗಿ ರಾಣಾ-ಮಿಹಿಕಾ ಕುಟುಂಬದವರು ನಿಶ್ಚಯಿಸಿದ್ದರು.

ರೋಕಾ ಸಂಭ್ರಮಕ್ಕೆ ಕೆಲವು ಸ್ಟಾರ್ ನಟ-ನಟಿಯರು ಭಾಗವಹಿಸಿದ್ದರು. ಜೊತೆಗೆ ರಾಣಾ ಕುಟುಂಬ ಸದಸ್ಯರೂ ಸಹ ಇದ್ದರು. ಆದರೆ ಈಗ ಇದ್ದಕ್ಕಿದ್ದಂತೆ ಮದುವೆ ಮುಂದಕ್ಕೆ ಹೋಗಿದೆ.

ಸರಳವಾಗಿ ವಿವಾಹವಾಗುತ್ತಾರೆ ಎನ್ನಲಾಗಿತ್ತು

ಸರಳವಾಗಿ ವಿವಾಹವಾಗುತ್ತಾರೆ ಎನ್ನಲಾಗಿತ್ತು

ಈ ಮುಂಚೆ ಹರಿದಾಡಿದ್ದ ವರದಿಯಂತೆ ರಾಣಾ ಹಾಗೂ ಮಿಹಿಕಾ ಲಾಕ್‌ಡೌನ್‌ ನಡುವೆಯೇ ಸರಳವಾಗಿ ವಿವಾಹವಾಗುತ್ತಾರೆ ಎನ್ನಲಾಗಿತ್ತು. ಹೆಚ್ಚು ತಡ ಮಾಡದೆ ಮದುವೆ ಬಂಧನಕ್ಕೆ ಒಳಗಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.

ಕೊರೊನಾ ಮುಗಿದ ಮೇಲೆಯೇ ಮದುವೆ

ಕೊರೊನಾ ಮುಗಿದ ಮೇಲೆಯೇ ಮದುವೆ

ಆದರೆ ಕಟುಂಬದ ಹಿರಿಯರು ಬೇರೆಯದ್ದೇ ನಿಶ್ಚಯ ಮಾಡಿದ್ದು, ಕೊರೊನಾ ಮುಗಿದ ಮೇಲೆಯೇ ಇಬ್ಬರ ಮದುವೆ ಮಾಡುವ ನಿರ್ಣಯ ಕೈಗೊಂಡಿದ್ದಾರೆ. ಹಾಗಾಗಿ ಮದುವೆ ಮುಂದೂಡಲ್ಪಟ್ಟಿದೆ.

ಆಗಸ್ಟ್ 8 ಕ್ಕೆ ಮದುವೆ ನಿಶ್ಚಯವಾಗಿತ್ತು

ಆಗಸ್ಟ್ 8 ಕ್ಕೆ ಮದುವೆ ನಿಶ್ಚಯವಾಗಿತ್ತು

ಆಗಸ್ಟ್‌ 8 ರಂದು ಇಬ್ಬರ ಮದುವೆ ಮಾಡುವ ನಿಶ್ಚಯ ಮಾಡಲಾಗಿತ್ತು, ಆದರೆ ಕೊರೊನಾ ಪರಿಸ್ಥಿತಿ ಬೇಗನೆ ಸರಿಹೋಗುವುದಿಲ್ಲ ಎಂಬ ಅನುಮಾನದಲ್ಲಿ ಮದುವೆಯನ್ನು ಮುಂದಕ್ಕೆ ಹಾಕಲಾಗಿದೆ.

ನಿಖಿಲ್, ನಿತಿನ್ ಅವರ ಮದವೆ ಸಹ ಮುಂದೂಡಿಕೆ

ನಿಖಿಲ್, ನಿತಿನ್ ಅವರ ಮದವೆ ಸಹ ಮುಂದೂಡಿಕೆ

ರಾಣಾ-ಮಿಹಿಕಾ ಮಾತ್ರವಲ್ಲದೆ, ತೆಲುಗಿನ ಮತ್ತೋರ್ವ ನಟ ನಿಖಿಲ್ ಮತ್ತು ಜಯಂ ನಟ ನಿತಿನ್ ಅವರ ಮದುವೆಯೂ ಮುಂದಕ್ಕೆ ಹೋಗಿದೆ. ನಿಖಿಲ್ ಮದುವೆಯಂತೂ ಎರಡು ಬಾರಿ ಮುಂದೂಡಲಾಗಿದೆ.

More from Filmibeat

English summary
Rana Daggubati and Mihika Bajaj's marriage has been postponed due to coronavirus situation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X