For Quick Alerts
  ALLOW NOTIFICATIONS  
  For Daily Alerts

  ಫೋಟೊಗಳು: ರಾಣಾ ದಗ್ಗುಬಾಟಿ-ಮಿಹೀಕಾ ಬಜಾಜ್ ಮದುವೆ ಸಂಭ್ರಮ

  |

  ಖ್ಯಾತ ನಟ ರಾಣಾ ದಗ್ಗುಬಾಟಿ, ತಮ್ಮ ಬಹುಕಾಲದ ಗೆಳತಿ ಮಿಹೀಕಾ ಬಜಾಜ್ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿದ್ದಾರೆ. ಹೈದರಾಬಾದ್‌ನ ರಾಮನಾಯ್ಡು ಸ್ಟುಡಿಯೋದಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ರಾಣಾ ಮತ್ತು ಮಿಹಿಕಾ ವಧು ವರರಾಗಿ ಮಿಂಚುತ್ತಿದ್ದಾರೆ.

  Kabza ಚಿತ್ರ ನೀವು ಹಿಂದೆಂದೂ ನೋಡಿರದ Pan India Cinema : R Chandru | Filmibeat Kannada

  ಅದ್ಧೂರಿಯಾಗಿ ನಡೆಯಬೇಕಿದ್ದ ಮದುವೆ, ಕೊರೊನಾ ವೈರಸ್ ಹಾವಳಿಯ ಕಾರಣ ಸರ್ಕಾರ ನಿಯಮಗಳಿಗೆ ಅನುಗುಣವಾಗಿ ಸರಳವಾಗಿ ನಡೆಯುತ್ತಿದೆ. ಅಪಾರ ಸ್ನೇಹಿತರು, ಸಹೋದ್ಯೋಗಿಗಳನ್ನು ಹೊಂದಿರುವ ರಾಣಾ ಮತ್ತು ಮಿಹಿಕಾ ಕುಟುಂಬ, ಕುಟುಂಬದ ಅತಿ ಆಪ್ತರು ಮತ್ತು ತೀರಾ ಆತ್ಮೀಯ ಸ್ನೇಹಿತರನ್ನು ಮಾತ್ರವೇ ಮದುವೆಗೆ ಆಹ್ವಾನಿಸಿದೆ. ಹೀಗಾಗಿ 30ಕ್ಕಿಂತ ಹೆಚ್ಚು ಜನರ ಹಾಜರಾತಿ ಇರದಂತೆ ಎಚ್ಚರಿಕೆ ವಹಿಸಿದೆ. ಮದುವೆಗೆ ಬರುವ ಪ್ರತಿ ಆಹ್ವಾನಿತರೂ ಕಡ್ಡಾಯವಾಗಿ ಕೊರೊನಾ ವೈರಸ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಮದುವೆ ಮನೆಯಲ್ಲಿ ಸ್ಯಾನಿಟೈಸರ್ ಮತ್ತು ಫೇಸ್ ಮಾಸ್ಕ್‌ಗಳನ್ನು ಇರಿಸಲಾಗಿದೆ. ಮುಂದೆ ಓದಿ.

  ರಾಣಾ ದಗ್ಗುಬಾಟಿ ಮದುವೆ ಸಂಭ್ರಮ: ಗೈರಾಗಲಿದ್ದಾನೆ ಆಪ್ತ ಗೆಳೆಯರಾಣಾ ದಗ್ಗುಬಾಟಿ ಮದುವೆ ಸಂಭ್ರಮ: ಗೈರಾಗಲಿದ್ದಾನೆ ಆಪ್ತ ಗೆಳೆಯ

  ಮೆಹಂದಿ ಕಾರ್ಯಕ್ರಮದ ಚಿತ್ರಗಳು

  ಮೆಹಂದಿ ಕಾರ್ಯಕ್ರಮದ ಚಿತ್ರಗಳು

  ಮದುವೆಯ ದಿನವಾದ ಶನಿವಾರ ಬೆಳಿಗ್ಗೆಯಿಂದಲೇ ಸ್ಟುಡಿಯೋದಲ್ಲಿ ಮಿಹಿಕಾ ಮತ್ತು ರಾಣಾ ವರ್ಣರಂಜಿತ ಉಡುಪುಗಳಲ್ಲಿ ಕಂಗೊಳಿಸುತ್ತಿದ್ದಾರೆ. ಶುಕ್ರವಾರ ಸಂಜೆ ಮೆಹಂದಿ ಕಾರ್ಯಕ್ರಮದಲ್ಲಿ ಹಳದಿ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರೆ, ರಾಣಾ ದಗ್ಗುಬಾಟಿ ಶ್ವೇತಮಯ ಉಡುಪಿನಲ್ಲಿ ಮಿಂಚಿದ್ದರು.

  ಮದುವೆಗೆ 'ರೆಡಿ' ಎಂದ ರಾಣಾ

  ಮದುವೆಗೆ 'ರೆಡಿ' ಎಂದ ರಾಣಾ

  ಶನಿವಾರ ಬೆಳಿಗ್ಗೆಯೇ ಮಿಹೀಕಾ ಮತ್ತೊಂದು ಆಕರ್ಷಕ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಗುಲಾಬಿ ಬಣ್ಣದ ಲೆಹೆಂಗಾ ಧರಿಸಿದ್ದ ಮಿಹಿಕಾ ಅದಕ್ಕೆ ಒಪ್ಪುವ ಆಭರಣಗಳನ್ನು ಧರಿಸಿ ಫೋಟೊಗಳಿಗೆ ಪೋಸ್ ನೀಡಿದ್ದಾರೆ. ಇನ್ನೊಂದೆಡೆ ರಾಣಾ ಸರಳವಾದ ಕುರ್ತಾ ಉಡುಗೆಯಲ್ಲಿ ಅಪ್ಪ ಸುರೇಶ್ ಬಾಬು ಮತ್ತು ಚಿಕ್ಕಪ್ಪ ವೆಂಕಟೇಶ್ ಜತೆಗಿನ ಸ್ಟೈಲಿಶ್ ಫೊಟೊ ಹಂಚಿಕೊಂಡು ಮದುವೆಗೆ ತಾವು 'ರೆಡಿ' ಎಂದಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ವೈರಲ್

  ಸಾಮಾಜಿಕ ಜಾಲತಾಣದಲ್ಲಿ ವೈರಲ್

  ಈ ಜೋಡಿಗೆ ಮದುವೆ ಸಮಾರಂಭದ ಸಂಪ್ರದಾಯ ಮತ್ತು ಶಾಸ್ತ್ರಗಳ ನಡುವೆಯೂ ಸಾಮಾಜಿಕ ಜಾಲತಾಣದಲ್ಲಿ ಅದರ ಫೋಟೊಗಳನ್ನು ಹಂಚಿಕೊಳ್ಳುವಷ್ಟು ಸಮಯ ಸಿಕ್ಕಿದೆ. ನಿರ್ಬಂಧಗಳ ಕಾರಣ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣದ ಮೂಲಕ ಮದುವೆ ಸುದ್ದಿ ಅಭಿಮಾನಿಗಳಿಗೆ ಸಿಗುತ್ತಿಲ್ಲ ಎಂದು ಸ್ವತಃ ರಾಣಾ ಮತ್ತು ಮಿಹೀಕಾ ತಾವೇ ಫೋಟೊ ಹಾಗೂ ಮಾಹಿತಿಯನ್ನು ತಲುಪಿಸುತ್ತಿದ್ದಾರೆ.

  ಶುಭ ಹಾರೈಸಿದ ಸಮಂತಾ

  ಶುಭ ಹಾರೈಸಿದ ಸಮಂತಾ

  ನಟಿ ಹಾಗೂ ರಾಣಾ ಸಂಬಂಧಿ ಸಮಂತಾ ಅಕ್ಕಿನೇನಿ, 'ಇದು ಸಂಭ್ರಮಾಚರಿಸುವ ಸಮಯ. ರಾಣಾ ದಗ್ಗುಬಾಟಿ ನಮ್ಮ ರಾಕ್ ಸ್ಟಾರ್' ಎಂದು ಪೋಸ್ಟ್ ಹಾಕಿದ್ದಾರೆ. ಟಾಲಿವುಡ್ ಮತ್ತು ಬಾಲಿವುಡ್ ಸೇರಿದಂತೆ ವಿವಿಧ ಚಿತ್ರರಂಗಗಳ ಸ್ಟಾರ್‌ಗಳು ರಾಣಾಗೆ ಶುಭಾಶಯ ತಿಳಿಸಿದ್ದಾರೆ.

  ಹೊಸ ರೀತಿಯ ರಾಣಾ ದಗ್ಗುಬಾಟಿ-ಮಿಹಿಕಾ ಬಜಾಜ್ ಲಗ್ನ ಪತ್ರಿಕೆಹೊಸ ರೀತಿಯ ರಾಣಾ ದಗ್ಗುಬಾಟಿ-ಮಿಹಿಕಾ ಬಜಾಜ್ ಲಗ್ನ ಪತ್ರಿಕೆ

  ಅಕ್ಷಯ್ ಕುಮಾರ್ ಶುಭಾಶಯ

  ಅಕ್ಷಯ್ ಕುಮಾರ್ ಶುಭಾಶಯ

  ಶಾಶ್ವತವಾಗಿ ಲಾಕ್‌ಡೌನ್ ಆಗಲು ಅತ್ಯಂತ ಸೂಕ್ತವಾದ ಮಾರ್ಗವಿದು. ರಾಣಾ ದಗ್ಗುಬಾಟಿಗೆ ಶುಭಾಶಯಗಳು. ಜೀವನಪರ್ಯಂತ ಸಂತಸ ನಿಮಗಿರಲಿ ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಶುಬಾಶಯ ತಿಳಿಸಿದ್ದಾರೆ.

  English summary
  Actor Rana Daggubati and Miheeka Bajaj to tie knot on August 8th in Hyderabad. Here is some pictures of the wedding ceremony.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X