ಎಲ್ಲ ಫೋಟೊ ಡಿಲೀಟ್ ಮಾಡಿದ ರಾಣಾ: ಬಲ್ಲಾಳದೇವನ ದಾಂಪತ್ಯದಲ್ಲಿ ಬಿರುಕು!?
ಸಿನಿಮಾ ನಟ-ನಟಿಯರಿಗೆ ಸಾಮಾಜಿಕ ಜಾಲತಾಣ ಬಹಳ ಮುಖ್ಯವಾಗಿಬಿಟ್ಟಿದೆ. ಸಿನಿಮಾ ಪ್ರಚಾರ, ಇತರೆ ನಟರೊಟ್ಟಿಗೆ, ಚಿತ್ರರಂಗದೊಟ್ಟಿಗೆ ಸಂಬಂಧ ಸ್ಥಾಪಿಸಿಕೊಳ್ಳಲು, ತಮ್ಮ ಬಗ್ಗೆ ಜನಾಭಿಪ್ರಾಯ ಮೂಡಿಸಲು ಹೀಗೆ ಹಲವು ಕಾರಣಗಳಿಗೆ ಸಾಮಾಜಿಕ ಜಾಲತಾಣವನ್ನು ಸೆಲೆಬ್ರಿಟಿಗಳು ಬಳಸುತ್ತಾರೆ.
ನಟ ರಾಣಾ ದಗ್ಗುಬಾಟಿ ಸಹ ಹಾಗೆಯೇ ನಟ ಆಗಿರುವ ಜೊತೆಗೆ ನಿರ್ಮಾಪಕ, ವಿತರಕ ಸಹ ಆಗಿರುವ ರಾಣಾ ದಗ್ಗುಬಾಟಿ ತಮ್ಮ ಸಿನಿಮಾಗಳ ಪ್ರಚಾರಕ್ಕೆ ಹೆಚ್ಚಾಗಿ ಸಾಮಾಜಿಕ ಜಾಲತಾಣವನ್ನು ಬಳಸುತ್ತಿದ್ದರು. ಸಹ ನಟರ ಹುಟ್ಟುಹಬ್ಬಕ್ಕೆ ವಿಶ್ ಮಾಡುವುದು ಆಗಾಗ ಕುಟುಂದವರ ಚಿತ್ರಗಳನ್ನು ಸಹ ಹಂಚಿಕೊಳ್ಳುತ್ತಿದ್ದರು.
ಆದರೆ ಇಂದು ಇದ್ದಕ್ಕಿದ್ದಂತೆ ರಾಣಾ ದಗ್ಗುಬಾಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಎಲ್ಲ ಚಿತ್ರಗಳನ್ನು ಡಿಲೀಟ್ ಮಾಡಿದ್ದಾರೆ. ತಮ್ಮ ಪತ್ನಿ ಮಹಿಕಾ ಬಜಾಜ್ ಅವರೊಟ್ಟಿಗಿನ ಚಿತ್ರ ಸೇರಿದಂತೆ ಎಲ್ಲಾ ಚಿತ್ರಗಳೂ ಅವರ ಖಾತೆಯಿಂದ ಡಿಲೀಟ್ ಆಗಿವೆ. ರಾಣಾ ದಗ್ಗುಬಾಟಿ ಹಠಾತ್ತನೆ ತಮ್ಮ ಚಿತ್ರಗಳನ್ನೆಲ್ಲ ಡಿಲೀಟ್ ಮಾಡಿರುವುದು ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡಿಸಿದೆ.

ಮಿಹಿಕಾ ಬಜಾಜ್ ಹಾಗೂ ರಾಣಾ ದಗ್ಗುಬಾಟಿ ವಿವಾಹವಾಗಿ ಎರಡು ವರ್ಷವಾಗಿವೆ ಇದೇ ಸಮಯದಲ್ಲಿ ಹೀಗೆ ಹಠಾತ್ತನೆ ರಾಣಾ ಚಿತ್ರಗಳನ್ನೆಲ್ಲ ಡಿಲೀಟ್ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಮಿಹಿಕಾ ಬಜಾಜ್ ಹಾಗೂ ರಾಣಾ ದಾಂಪತ್ಯದಲ್ಲಿ ಬಿರುಕು ಮೂಡಿದೆಯೇ? ಎಂಬ ಅನುಮಾನಗಳು ವ್ಯಕ್ತವಾಗಿವೆ.
ಆದರೆ ರಾಣಾರ ಪತ್ನಿ ಮಿಹಿಕಾ ಬಜಾಜ್ ಸಾಮಾಜಿಕ ಜಾಲತಾಣದ ಮೇಲೆ ಕಣ್ಣಾಡಿಸಿದವರಿಗೆ ಹಾಗೇನೂ ಇಲ್ಲ ಎನಿಸುತ್ತದೆ. ಏಕೆಂದರೆ ಮಿಹಿಕಾ ನಿನ್ನೆಯಷ್ಟೆ ಪತಿಯೊಟ್ಟಿಗಿನ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಂ ಚಿತ್ರ ಡಿಲೀಟ್ ಆಗುತ್ತಿದ್ದಂತೆ ರಾಣಾ ದಗ್ಗುಬಾಟಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಅನುಮಾನಿಸಲು ಕಾರಣಗಳೂ ಇವೆ. ರಾಣಾ ದಗ್ಗುಬಾಟಿ ಚಿತ್ರೀಕರಣ, ಸಿನಿಮಾ ಪ್ರಚಾರ, ವಿತರಣೆ ಇನ್ನಿತರೆ ವಿಚಾರಗಳಲ್ಲಿ ವಿಪರೀತ ತೊಡಗಿಕೊಂಡಿದ್ದಾರೆ ಕುಟುಂಬಕ್ಕೆ ಸರಿಯಾಗಿ ಸಮಯ ನೀಡುತ್ತಿಲ್ಲ ಎಂದು ಕೆಲವು ದಿನಗಳ ಹಿಂದಷ್ಟೆ ಅವರ ಸಹ ಸಾಯಿ ಪಲ್ಲವಿ ಆರೋಪಿಸಿದ್ದರು.
ರಾಣಾ ದಗ್ಗುಬಾಟಿಯವರ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿರುವ ಸಂಭವವೂ ಇದೆ. ಆದರೆ ಈ ಬಗ್ಗೆ ರಾಣಾ ದಗ್ಗುಬಾಟಿ ಇನ್ನೂ ಸ್ಪಷ್ಟಪಡಿಸಿಲ್ಲ.


Click it and Unblock the Notifications











