For Quick Alerts
  ALLOW NOTIFICATIONS  
  For Daily Alerts

  ದೃಶ್ಯಂ 2 ತೆಲುಗು ರೀಮೇಕ್‌ನಲ್ಲಿ ವೆಂಕಟೇಶ್ ಜೊತೆ ಮತ್ತೊಬ್ಬ ಸ್ಟಾರ್?

  |

  ಮಲಯಾಳಂ ದೃಶ್ಯಂ 2 ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ದೃಶ್ಯಂ 2 ಸಿನಿಮಾ ಫೆಬ್ರವರಿ 19 ರಂದು ಅಮೇಜಾನ್ ಪ್ರೈಮ್‌ನಲ್ಲಿ ತೆರೆಕಂಡು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ.

  ಮಲಯಾಳಂ ಚಿತ್ರವನ್ನು ನಿರೀಕ್ಷೆಯಂತೆ ತೆಲುಗಿನಲ್ಲಿ ರೀಮೇಕ್ ಮಾಡಲಾಗುತ್ತಿದೆ. ದೃಶ್ಯಂ ಸಿನಿಮಾದಲ್ಲಿ ನಟಿಸಿದ್ದ ವೆಂಕಟೇಶ್ ಅವರೇ ದೃಶ್ಯಂ 2 ರಲ್ಲಿ ನಾಯಕನಾಗಿ ಮುಂದುವರಿಯುತ್ತಿದ್ದಾರೆ.

  ಮಲಯಾಳಂ ಬಳಿಕ ತೆಲುಗಿನಲ್ಲಿ ತಯಾರಾಗುತ್ತಿದೆ 'ದೃಶ್ಯಂ-2'ಮಲಯಾಳಂ ಬಳಿಕ ತೆಲುಗಿನಲ್ಲಿ ತಯಾರಾಗುತ್ತಿದೆ 'ದೃಶ್ಯಂ-2'

  ಇತ್ತೀಚಿಗಷ್ಟೆ ದೃಶ್ಯಂ 2 ತೆಲುಗು ಸಿನಿಮಾ ಅಧಿಕೃತವಾಗಿ ಸೆಟ್ಟೇರಿದೆ. ಮಲಯಾಳಂ ಚಿತ್ರಕ್ಕೆ ನಿರ್ದೇಶನ ಹೇಳಿದ್ದ ಜಿತು ಜೋಸೆಫ್ ಅವರೇ ತೆಲುಗಿನಲ್ಲಿ ಡೈರೆಕ್ಟ್ ಮಾಡ್ತಿದ್ದಾರೆ.

  ಇದೀಗ, ತೆಲುಗಿನ ದೃಶ್ಯಂ 2 ಚಿತ್ರದಲ್ಲಿ ವೆಂಕಟೇಶ್ ಜೊತೆ ನಟ ರಾಣಾ ದಗ್ಗುಬಾಟಿ ನಟಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಹೊರಬಿದ್ದಿದೆ.

  ಮುರಳಿ ಗೋಪಿ ನಟಿಸಿರುವ ಪೊಲೀಸ್ ಅಧಿಕಾರಿ ಪಾತ್ರಕ್ಕೆ ತೆಲುಗಿನಲ್ಲಿ ರಾಣಾ ಅವರನ್ನು ಅಪ್ರೋಚ್ ಮಾಡಲಾಗಿದೆಯಂತೆ. ಈ ತಿಂಗಳ ಅಂತ್ಯದಲ್ಲಿ ರಾಣಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರಂತೆ. ಇನ್ನುಳಿದಂತೆ ಪಾತ್ರವರ್ಗವನ್ನು ಶೀಘ್ರದಲ್ಲಿ ಪ್ರಕಟಿಸಲಿದ್ದಾರೆ.

  ರಿಲೀಸ್ ಗೂ ಮೊದಲೇ ಮೈಸೂರಿನಲ್ಲಿ ಅಬ್ಬರಿಸಲಿದ್ದಾನೆ ಯುವರತ್ನ | Yuvaratna | Puneeth Rajkumar|Filmibeat Kannada

  2014ರಲ್ಲಿ ಬಂದಿದ್ದ ತೆಲುಗು ದೃಶ್ಯಂ ಚಿತ್ರದಲ್ಲಿ ವೆಂಕಟೇಶ್, ಮೀನಾ, ನಾಧಿಯಾ, ನರೇಶ್, ಕೃತಿಕಾ ಜಯಕುಮಾರ್, ಎಸ್ತರ್ ಅನಿಲ್ ಸೇರಿದಂತೆ ಹಲವರು ನಟಿಸಿದ್ದರು.

  English summary
  Telugu actor Rana Daggubati set to play important role in Drishyam 2 telugu Remake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X