'ಬಾಹುಬಲಿ' ಅಥವಾ 'ಭೀಮ್ಲಾ ನಾಯಕ್'? ರಾಣ ಉತ್ತರ ಕೇಳಿ ಪ್ರಭಾಸ್ ಫ್ಯಾನ್ಸ್ ಶಾಕ್
ತೆಲುಗು ನಟ ರಾಣಾ ದಗ್ಗುಬಾಟಿ ಬಾಲಿವುಡ್ ಸಿನಿಮಾಗಳಲ್ಲೂ ನಟಿಸಿ ಗೆದ್ದಿದ್ದಾರೆ. ಆದರೆ ದಗ್ಗುಬಾಟಿ ಫ್ಯಾಮಿಲಿ ವಾರಸ್ದಾರನಿಗೆ ದೊಡ್ಡಮಟ್ಟದ ಸಕ್ಸಸ್ ಮಾತ್ರ ಸಿಕ್ಕಿಲ್ಲ. 3 ವರ್ಷಗಳ ಹಿಂದೆ ಹಸೆಮಣೆ ಏರಿದ ರಾಣಾ ಸದ್ಯ ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಸದ್ಯ 'ಪರಶಾನ್' ಎನ್ನುವ ಚಿತ್ರದಲ್ಲಿ ರಾಯಲ್ ಸ್ಟಾರ್ ನಟಿಸಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.
ರಾಣ ಅಂದಾಕ್ಷಣ ಮೊದಲು ನೆನಪಾಗುವ ಸಿನಿಮಾ 'ಬಾಹುಬಲಿ'. ಎರಡು ಭಾಗಗಳಾಗಿ ಈ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿತ್ತು. ಚಿತ್ರದಲ್ಲಿ ಬಾಹುಬಲಿ ಸಹೋದರ ಬಲ್ಲಾಳ ದೇವನ ಪಾತ್ರದಲ್ಲಿ ರಾಣಾ ಅಬ್ಬರಿಸಿದ್ದರು. ಪ್ರಭಾಸ್‌ಗೆ ಸರಿಸಮನಾದ ಪಾತ್ರದಲ್ಲಿ ನಟಿಸಿ ಗೆದ್ದಿದ್ದರು. 2ನೇ ಭಾಗದಲ್ಲಿ ಒಂದು ಹಂತದಲ್ಲಿ ಯಂಗ್ ರೆಬಲ್ ಸ್ಟಾರ್‌ಗೆ ಟಫ್ ಕಾಂಪಿಟೇಷನ್ ಕೊಟ್ಟಿದ್ದರು. ಸಿನಿರಸಿಕರು ಎಂದೂ ಆ ಪಾತ್ರವನ್ನು ಮರೆಯೋಕೆ ಸಾಧ್ಯವಿಲ್ಲ.

ಕಳೆದ ವರ್ಷ ಪವನ್ ಕಲ್ಯಾಣ್ ಜೊತೆ 'ಭೀಮ್ಲಾ ನಾಯಕ್' ಚಿತ್ರದಲ್ಲಿ ರಾಣಾ ದರ್ಬಾರ್ ನಡೆಸಿದ್ದರು. ಸಾಗರ್ ಚಂದ್ರ ನಿರ್ದೇಶನದ ಈ ಚಿತ್ರದಲ್ಲಿ ಕೊಂಚ ನೆಗೆಟಿವ್ ಶೇಡ್ ರೋಲ್‌ನಲ್ಲಿ ನಟಿಸಿ ಗಮನ ಸೆಳೆದಿದ್ದರು. ತೆಲುಗಿನ 'ಅಯ್ಯಪ್ಪನುಂ ಕೋಶಿಯುಂ' ರೀಮೆಕ್ ಆಗಿದ್ದ ಈ ಚಿತ್ರದಲ್ಲಿ ರಾಣಾ ನಟನೆ ಪ್ರೇಕ್ಷಕರ ಮನಗೆದ್ದಿತ್ತು. ಒಂದು ಹಂತದಲ್ಲಿ ಪವರ್ ಸ್ಟಾರ್‌ನ ಮೀರಿಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.
ರಾಣಾ ಅಚ್ಚರಿಯ ಉತ್ತರ
'ಬಾಹುಬಲಿ' ಹಾಗೂ 'ಭೀಮ್ಲಾ ನಾಯಕ್' ಎರಡು ಮಲ್ಟಿಸ್ಟಾರರ್ ಸಿನಿಮಾಗಳಲ್ಲಿ ರಾಣಾ ನಟಿಸಿದ್ದಾರೆ. ಎರಡು ಚಿತ್ರಗಳಲ್ಲಿ ನಾಯಕನಿಗೆ ಸರಿಸಮನಾದ ಪಾತ್ರ ಸಿಕ್ಕಿತ್ತು. ಉತ್ತಮವಾಗಿ ನಟಿಸಿ ಒಳ್ಳೆ ಅಂಕ ಗಿಟ್ಟಿಸಿಕೊಂಡಿದ್ದರು. ಈ ಎರಡು ಸಿನಿಮಾಗಳಲ್ಲಿ ಯಾರ ಜೊತೆ ನಟಿಸಿದ್ದು ಹೆಚ್ಚು ನಿಮಗೆ ಎಕ್ಸೈಟ್ ಅನ್ನಿಸ್ತು ಎನ್ನುವ ಪ್ರಶ್ನೆಗೆ ಅವರು ಅಚ್ಚರಿಯ ಉತ್ತರ ನೀಡಿದ್ದಾರೆ. ಬೇರೆ ಯಾರಾದರೂ ಆಗಿದ್ದರೆ ಬಾಹುಬಲಿ ಎಂದುಬಿಡುತ್ತಿದ್ದರು. ಆದರೆ ರಾಣಾ ಹಾಗೆ ಮಾಡಲಿಲ್ಲ.

ಬ್ಯಾಲೆನ್ಸ್ ಉತ್ತರ ಕೊಟ್ಟ ರಾಣಾ
'ಪರಶಾನ್' ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಸುಮಾ ಅಡ್ಡಾ ಕಾರ್ಯಕ್ರಮಕ್ಕೆ ಹಾಜರಾಗಿತ್ತು. ಈ ವೇಳೆ ಸುಮಾ "ನೀವು ಮಲ್ಟಿಸ್ಟಾರರ್ ಸಿನಿಮಾಗಳಲ್ಲಿ ನಟಿಸಿದ್ದೀರಾ. ಯಾವ ಹೀರೊ ಜೊತೆ ನಟಿಸಿದ್ದು ಹೆಚ್ಚು ಎಕ್ಸೈಟ್ ಅನ್ನಿಸ್ತು, ವಾಹ್ ಅಂತ ಫೀಲ್ ಆಗಿದ್ರಿ ಎನ್ನುವ ಪ್ರಶ್ನೆಗೆ ಪವನ್ ಕಲ್ಯಾಣ್ ಎಂದು ರಾಣಾ ಹೇಳಿದ್ದಾರೆ. ನಂತರ ಅದು ಹೇಗೆ ಎನ್ನುವುದನ್ನು ಬ್ಯಾಲೆನ್ಸ್ ಮಾಡಿ ವಿವರಿಸಿದ್ದಾರೆ.
ಕಾಲರ್ ಎಗರಿಸಿದ ಪವನ್ ಫ್ಯಾನ್ಸ್
"ಬಾಹುಬಲಿ ವಿಭಿನ್ನವಾದ ಎಕ್ಸೈಟ್‌ಮೆಂಟ್. ಆದರೆ 'ಭೀಮ್ಲಾ ನಾಯಕ್' ಸಿನಿಮಾ ಮಾಡೋದು ನನಗೆ ಹೆಚ್ಚು ಎಕ್ಸೈಟ್ ಎನ್ನಿಸ್ತು. ಅಂದರೆ ಪ್ರಭಾಸ್ ಜೊತೆ ಸಿನಿಮಾ ಮಾಡುವುದು ವಿಭಿನ್ನ ಎಕ್ಸೈಟ್‌ಮೆಂಟ್ ಆದರೆ ಪವನ್ ಕಲ್ಯಾಣ್ ಜೊತೆ ನಟಿಸುವುದು ಮತ್ತಷ್ಟು ರೋಮಾಂಚನ ಎನಿಸಿತು ಎಂದು ವಿವರಿಸಿದ್ದಾರೆ. ಸದ್ಯ ಈ ಕಾರ್ಯಕ್ರಮದ ಪ್ರೋಮೊ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ರಾಣಾ ಮಾತು ಕೇಳಿ ಪವನ್ ಕಲ್ಯಾಣ್ ಅಭಿಮಾನಿಗಳು ಕಾಲರ್ ಎಗರಿಸಿದ್ದಾರೆ.

ಹೆಚ್ಚು ಚಿತ್ರಗಳಲ್ಲಿ ನಟಿಸ್ತಿಲ್ಲ
ರಾಣಾ ಯಾಕೋ ಬರ್ತಾ ಬರ್ತಾ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿದೆ. ಬಾಲಿವುಡ್‌ಗೂ ಹೋಗಿ ಬಂದ ದಗ್ಗುಬಾಟಿ ಫ್ಯಾಮಿಲಿ ಹೀರೊ ಈಗ ಒಳ್ಳೆ ಅವಕಾಶಗಳಿಗಾಇ ಕಾಯುತ್ತಿದ್ದಾರೆ. ಕೊನೆಯದಾಗಿ 'ವಿರಾಟ ಪರ್ವ' ಚಿತ್ರದಲ್ಲಿ ನಟಿಸಿದ್ದರು. ಅದು ಬಿಟ್ಟರೆ 'ರಾಣಾ ನಾಯ್ಡು' ನೆಟ್ ಫ್ಲಿಕ್ಸ್ ವೆಬ್ ಸೀರಿಸ್‌ನಲ್ಲಿ ಚಿಕ್ಕಪ್ಪ ವಿಕ್ಟರಿ ವೆಂಕಟೇಶ್ ಜೊತೆ ಮಿಂಚಿದ್ದರು.


Click it and Unblock the Notifications











