ರಾಣಾ ದಗ್ಗುಬಾಟಿ-ಮಿಹಿಕಾ ವಿವಾಹ ಸ್ಥಳ ನಿಶ್ಚಯ
ಕೆಲವು ದಿನಗಳ ಹಿಂದಷ್ಟೆ ಎಂಗೇಜ್ ಆಗಿರುವ ತೆಲುಗಿನ ಖ್ಯಾತ ನಟ ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್ ಮದುವೆ ಭಾರಿ ಅದ್ಧೂರಿಯಾಗಿ ನಡೆಯುವ ಸರ್ವ ಸಾಧ್ಯತೆ ಇದೆ.
Recommended Video
ಅದ್ಧೂರಿಯಾಗಿ ಮದುವೆ ಮಾಡಬೇಕೆಂಬ ಕಾರಣದಿಂದಲೇ ನಿಗದಿಯಾಗಿದ್ದ ಮದುವೆಯನ್ನು ಕೊರೊನಾ ಕಾರಣದಿಂದಾಗಿ ಮುಂದೂಡಿದ್ದು, ಡಿಸೆಂಬರ್ ಸನಿಹದಲ್ಲಿ ಮದುವೆ ಮಾಡುವ ಆಲೋಚನೆಯಲ್ಲಿದೆ ಇಬ್ಬರ ಕುಟುಂಬ.
ರಾಣಾ-ಮಿಹಿಕಾ ಅವರ ಮದುವೆ ಎಲ್ಲಿ ನಡೆಸಬೇಕು ಎಂಬುದು ಭಾರಿ ಚರ್ಚೆಯ ವಿಷಯವಾಗಿತ್ತು. ಇದೀಗ ಎರಡೂ ಕುಟುಂಬ ಸದಸ್ಯರು ಚರ್ಚೆ ನಡೆಸಿ ಐಶಾರಾಮಿ ಸ್ಥಳವೊಂದನ್ನು ಮದುವೆಗೆ ನಿಗದಿಪಡಿಸಿದ್ದಾರೆ.

ರಾಣಾ ದಗ್ಗುಬಾಟಿ-ಮಿಹಿಕಾ ಬಜಾಜ್ ಮದುವೆ
ರಾಣಾ ದಗ್ಗುಬಾಟಿ-ಮಿಹಿಕಾ ಅವರ ವಿವಾಹವನ್ನು ಪ್ರತಿಷ್ಠಿತ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ನಡೆಸಬೇಕು ಎಂಬುದು ಕುಟುಂಬ ಸದಸ್ಯರ ಆಸೆಯಾಗಿತ್ತು. ರಾಣಾ ದಗ್ಗುಬಾಟಿ ಕುಟುಂಬಸ್ಥರೇ ಅಬ್ಬಾನಾಯ್ಡು ಸ್ಟುಡಿಯೋದ ಮಾಲೀಕರು ಸಹ.

ಪ್ರತಿಷ್ಠಿತ ಹೋಟೆಲ್‌ನಲ್ಲಿ ಮದುವೆ
ಆದರೆ ಮಿಹಿಕಾ-ಬಜಾಜ್ ಮತ್ತು ರಾಣಾ ದಗ್ಗುಬಾಟಿ ಕುಟುಂಬ ಪರಸ್ಪರ ಚರ್ಚಿಸಿದ ಮೇಲೆ ಅಬ್ಬಯ್ಯ ನಾಯ್ಡು ಸ್ಟುಡಿಯೋದ ಬದಲಿಗೆ ಹೈದರಾಬಾದ್‌ನ ಪ್ರತಿಷ್ಠಿತ ಹೊಟೆಲ್ ತಾಜ್ ಫಲಕ್ನುಮಾ ಪ್ಯಾಲೆಸ್ ನಲ್ಲಿ ನಡೆಸಲು ನಿಶ್ಚಯಿಸಿವೆ.

ಅತಿಥಿಗಳ ಅನುಕೂಲಕ್ಕಾಗಿ...
ತಾಜ್ ಫಲಕ್ನುಮಾ ಪ್ಯಾಲೆಸ್ ಹೈದರಾಬಾದ್‌ನ ಪ್ರತಿಷ್ಠಿತ ಹೋಟೆಲ್ ಆಗಿದ್ದು, ಇಲ್ಲಿ ಮದುವೆ ಆಯೋಜಿಸಿದರೆ ವಿಐಪಿ ಗಣ್ಯರ ಆಗಮನಕ್ಕೆ ಅನುಕೂಲವಾಗುತ್ತದೆ. ಮಾಧ್ಯಮಗಳನ್ನು ಸಹ ದೂರ ಇಡಬಹುದು ಎಂಬುದು ಲೆಕ್ಕಾಚಾರ ಆಗಿರುವ ಸಾಧ್ಯತೆ ಇದೆ.

ರೋಕಾ ಕಾರ್ಯಕ್ರಮ ನಡೆದಿದೆ
ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್ ಕೆಲವು ದಿನಗಳ ಹಿಂದಷ್ಟೆ ತಾವು ಮದುವೆ ಆಗುತ್ತಿರುವುದಾಗಿ ಪ್ರಕಟಿಸಿದರು. ನಂತರ ಎರಡೂ ಕುಟುಂಬದ ಮುಖ್ಯಸ್ಥರು ಸೇರಿ ರೋಖಾ ಕಾರ್ಯಕ್ರಮ ಸಹ ಮಾಡಿದ.


Click it and Unblock the Notifications











