ಹೊಸ ರೀತಿಯ ರಾಣಾ ದಗ್ಗುಬಾಟಿ-ಮಿಹಿಕಾ ಬಜಾಜ್ ಲಗ್ನ ಪತ್ರಿಕೆ

ತೆಲುಗು ನಟ ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಬಜಾಜ್ ವಿವಾಹ ಇನ್ನೇನು ಸನಿಹಕ್ಕೆ ಬಂದಿದೆ. ಕೊರೊನಾ ಕಾರಣಕ್ಕೆ ಮುಂದೂಡಲಾಗಿದ್ದ ಮದುವೆಯ ಸ್ಥಳ-ದಿನಾಂಕ ನಿಗದಿಯಾಗಿದೆ.

Recommended Video

ನಾವಿದ್ದೇವೆ ಯೋಚನೆ ಮಾಡಬೇಡಿ ಎಂದ ಶಿವಣ್ಣ | Shivarajkumar | Filmibeat Kannada

ವಿವಾಹ ಆಮಂತ್ರಣ ಪತ್ರಿಕೆ ಸಹ ಸಿದ್ಧವಾಗಿದ್ದು, ಸಖತ್ ಭಿನ್ನವಾಗಿದೆ ಇವರ ಮದುವೆ ಆಮಂತ್ರಣ ಪತ್ರಿಕೆ. ಎರಡು ಮಾದರಿಯ ವಿವಾಹ ಆಮಂತ್ರಣ ಪತ್ನಿಕೆ ಸಿದ್ಧ ಮಾಡಲಾಗಿದ್ದು, ಒಂದು ಅತಿಥಿಗಳಿಗೆ ನೀಡುವ ಆಮಂತ್ರಣ ಪತ್ರಿಕೆ ಆಗಿದ್ದರೆ, ಮತ್ತೊಂದು ಡಿಜಿಟಲ್ ಆಮಂತ್ರಣ ಪತ್ರಿಕೆ.

ಮಿಹಿಕಾ ಬಜಾಜ್-ರಾಣಾ ದಗ್ಗುಬಾಟಿ ಮದುವೆಗೆ ಡಿಜಿಟಲ್ ಆಮಂತ್ರಣ ಪತ್ರಿಕೆ ರೆಡಿಯಾಗಿದ್ದು, ವಿಡಿಯೋ ಮಾದರಿಯ ಈ ಆಮಂತ್ರಣ ಪತ್ರಿಕೆಯನ್ನು ಅತಿಥಿಗಳಿಗೆ, ಆಪ್ತರಿಗೆ ಕಳುಹಿಸಲಾಗುತ್ತದೆಯಂತೆ.

ಡಿಜಿಟಲ್ ಆಮಂತ್ರಣ ಪತ್ರಿಕೆ

ಡಿಜಿಟಲ್ ಆಮಂತ್ರಣ ಪತ್ರಿಕೆ

ಮಿಹಿಕಾ ಬಜಾಜ್ ಅವರು ಡಿಜಿಟಲ್ ಆಮಂತ್ರಣ ಪತ್ರಿಕೆಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಈ ಆಮಂತ್ರಣ ಪತ್ರಿಕೆ ಸಖತ್ ಭಿನ್ನವಾಗಿದೆ. ಮದುವೆ ಸ್ಥಳ, ದಿನಾಂಕ, ಮುಹೂರ್ತದ ಜೊತೆಗೆ ಇನ್ನೂ ಹಲವು ಮಾಹಿತಿಗಳನ್ನು ಈ ಡಿಜಿಟಲ್ ಆಮಂತ್ರಣ ಪತ್ರಿಕೆ ಒಳಗೊಂಡಿದೆ.

ಆಗಸ್ಟ್ 8 ಕ್ಕೆ ವಿವಾಹ

ಆಗಸ್ಟ್ 8 ಕ್ಕೆ ವಿವಾಹ

ಮಿಹಿಕಾ-ರಾಣಾ ರ ಮದುವೆಯು ಆಗಸ್ಟ್ 8 ರಂದು ಹೈದರಾಬಾದ್‌ನ ಚೈತನ್ಯ ಎನ್‌ಕ್ಲೇವ್‌ನಲ್ಲಿ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಮುಹೂರ್ತ ನಿಗದಿಪಡಿಸಲಾಗಿದೆ. ಕೊರೊನಾ ನಿಯಮಾವಳಿಗಳನ್ನು ಪಾಲಿಸಿ ಮದುವೆ ಸಮಾರಂಭ ನಡೆಸಲಾಗುತ್ತದೆಯಂತೆ.

ಹಲವು ವೈಶಿಷ್ಟತೆ ಹೊಂದಿದೆ

ಹಲವು ವೈಶಿಷ್ಟತೆ ಹೊಂದಿದೆ

ಮಿಹಿಕಾ ಹಂಚಿಕೊಂಡಿರುವ ಡಿಜಿಟಲ್ ಆಮಂತ್ರಣ ಪತ್ರಿಕೆಯಲ್ಲಿ ರಾಣಾ ಹಾಗೂ ಮಿಹಿಕಾ ಮೊದಲು ಭೇಟಿಯಾಗಿದ್ದ ದಿನಾಂಕ, ಪ್ರೀತಿಗೆ ಬಿದ್ದ ದಿನಾಂಕ, ರೋಕಾ ಕಾರ್ಯಕ್ರಮದ ದಿನಾಂಕ ಎಲ್ಲವೂ ನಮೂದಾಗಿದೆ. ಅಷ್ಟೆ ಅಲ್ಲದೆ, ಸ್ಟಾರ್ ನಟರ ಶುಭ ಹಾರೈಕೆಗಳನ್ನು ಸಹ ಕೊನೆಯಲ್ಲಿ ನಮೂದಿಸಲಾಗಿದೆ.

ಕೊರೊನಾ ನಿಯಮದಂತೆ ಮದುವೆ

ಕೊರೊನಾ ನಿಯಮದಂತೆ ಮದುವೆ

ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್ ಮೇ 12 ರಂದು ಪರಸ್ಪರ ಎಂಗೇಜ್ ಆದರು. ಅಂದಿನಿಂದಲೂ ವಿವಾಹದ ಬಗ್ಗೆ ಸುದ್ದಿ ಹರಿದಾಡುತ್ತಲೇ ಇದೆ. ಅಬ್ಬಯ್ಯಾ ನಾಯ್ಡು ಸ್ಟುಡಿಯೋದಲ್ಲಿ ಮದುವೆ ಮಾಡಲಾಗುತ್ತದೆ ಎನ್ನಲಾಗಿತ್ತು, ಕೊನೆಗೆ ಚೈತನ್ಯ ಎನ್‌ಕ್ಲೇವ್‌ನಲ್ಲಿ ನಿಗದಿಯಾಗಿದೆ.

More from Filmibeat

English summary
Rana Daggubati and Mihika Bajaj's marriage is on August 08 at Hyderabad's Chaitanya enclave.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X