For Quick Alerts
  ALLOW NOTIFICATIONS  
  For Daily Alerts

  ಸೆಲ್ಫಿ ತೆಗೆಯಲು ಮುಂದಾದ ಅಭಿಮಾನಿಯ ಮೊಬೈಲ್ ಕಸಿದುಕೊಂಡ ರಾಣಾ ದಗ್ಗುಬಾಟಿ; ಒಳ್ಳೆ ಕಾರಣವೂ ಇದೆ!

  |

  ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ನಡೆದ ಕಬ್ಜ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತೆಲುಗು ನಟ ರಾಣಾ ದಗ್ಗುಬಾಟಿ ನಿನ್ನೆ ( ಸೆಪ್ಟೆಂಬರ್ 19 ) ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಯೋರ್ವ ನಟ ರಾಣಾ ದಗ್ಗುಬಾಟಿ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾನೆ. ದೇವಸ್ಥಾನದ ಆವರಣದಲ್ಲಿ ನಡೆಯುತ್ತಾ ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದ್ದು ಕೋಪಗೊಂಡ ರಾಣಾ ದಗ್ಗುಬಾಟಿ ಈ ರೀತಿ ನಡೆದುಕೊಂಡಿದ್ದಾರೆ.

  ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳಿಗೆ ಸದಾ ಗೌರವ ಕೊಡುವ ರಾಣಾ ಹೀಗೇಕೆ ನಡೆದುಕೊಂಡರು ಎಂಬ ಪ್ರಶ್ನೆ ಎದ್ದಿದೆ. ಈ ಪ್ರಶ್ನೆಗೆ ಸಮಾಧಾನಕರ ಉತ್ತರವೂ ದೊರಕಿದ್ದು, ದೇವಸ್ಥಾನದಂತ ಪವಿತ್ರ ಸ್ಥಳದ್ಲಲಿ ಸೆಲ್ಫಿ ಅಂತೆಲ್ಲಾ ತೆಗೆದುಕೊಳ್ಳಬಾರದು ಎಂಬ ಕಾರಣದಿಂದ ರಾಣಾ ಈ ರೀತಿ ನಡೆದುಕೊಂಡಿದ್ದಾರೆ ಎನ್ನಲಾಗಿದೆ.

  ಸದ್ಯ ರಾಣಾ ಅವರ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕೆಲವರು ರಾಣಾ ನಡೆದುಕೊಂಡ ರೀತಿ ಸರಿ ಇದೆ ಎನ್ನುತ್ತಿದ್ದರೆ, ಇನ್ನೂ ಕೆಲವರು ಜಾಗ ಯಾವುದಾದರೇನು ಚಿತ್ರ ನೋಡಿ ಬೆಳೆಸುವ ಅಭಿಮಾನಿಗಳನ್ನೂ ಸಹ ದೇವರಂತೆ ಕಾಣುವವನೇ ನಿಜವಾದ ಕಲಾವಿದ, ಈ ರೀತಿ ಜಾಗ ನೋಡಿ ಪ್ರಾಶಸ್ತ್ಯ ನೀಡುವುದು ಸರಿಯಲ್ಲ ಎಂದಿದ್ದಾರೆ.

  ಉಪ್ಪಿ 90ರಲ್ಲೇ ಪ್ಯಾನ್ ಇಂಡಿಯಾ ನೋಡಿದ್ರು

  ಇನ್ನು ಕಬ್ಜ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಣಾ ದಗ್ಗುಬಾಟಿ ರಿಯಲ್ ಸ್ಟಾರ್ ಉಪೇಂದ್ರ ಅವರ ಕುರಿತು ವಿಶೇಷವಾಗಿ ಮಾತನಾಡಿದ್ದರು. ಪ್ಯಾನ್ ಇಂಡಿಯಾ ಟ್ರೆಂಡ್ ಈಗಿನದ್ದಲ್ಲ, ಅವರ 90ರ ದಶಕದ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದ್ದವು ಎಂದು ಹೊಗಳಿದ್ದರು.

  English summary
  Baahubali fame Rana Daggubati snatches a fan's mobile when he tried to click selfie. Take a look
  Tuesday, September 20, 2022, 19:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X