ಅಧಿಕೃತ: ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ಸಿನಿಮಾ ಘೋಷಣೆ
ಕಳೆದ ಕೆಲವು ತಿಂಗಳಿನಿಂದ ಮಲಯಾಳಂ ಹಿಟ್ ಚಿತ್ರದ ರೀಮೇಕ್‌ಗಾಗಿ ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ಒಂದಾಗಲಿದ್ದಾರೆ ಎಂಬ ಸುದ್ದಿಗಳು ಚರ್ಚೆಯಲ್ಲಿದ್ದವು. ನಂತರ, ರಾಣಾ ಬದಲು ಮತ್ತೊಬ್ಬ ನಟ ಬರುವ ಸಾಧ್ಯತೆ ಇದೆ ಎನ್ನಲಾಯ್ತು.
ಈ ಪ್ರಾಜೆಕ್ಟ್ ನಲ್ಲಿ ಸ್ಟಾರ್ ನಟಿ ಸಾಯಿ ಪಲ್ಲವಿಯ ಎಂಟ್ರಿ ಸಹ ಆಗಲಿದೆ ಎಂದು ವರದಿಗಳು ಆಗಿದ್ದವು. ಅದ್ರೆ, ಈ ಸಿನಿಮಾ ಬಗ್ಗೆ ಅಧಿಕೃತವಾಗಿ ಯಾರೂ ಪ್ರಕಟಣೆ ಮಾಡಿರಲಿಲ್ಲ. ಇದೀಗ, ಸಿತಾರ ಎಂಟರ್‌ಟೈನ್‌ಮೆಂಟ್ ಸಂಸ್ಥೆ 'ಪ್ರೊಡಕ್ಷನ್ ನಂ 12' ಎಂಬ ಹೆಸರಿನಲ್ಲಿ ಮೆಗಾ ಪ್ರಾಜೆಕ್ಟ್ ಘೋಷಣೆ ಮಾಡಿದ್ದು, ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಮತ್ತು ರಾಣಾ ತೆರೆ ಹಂಚಿಕೊಳ್ಳಲಿದ್ದಾರೆ. ಮುಂದೆ ಓದಿ....

ಮಲಯಾಳಂ ರೀಮೇಕ್‌ನಲ್ಲಿ ಪವನ್-ರಾಣಾ
'ವಕೀಲ್ ಸಾಬ್' ಚಿತ್ರದ ಮೂಲಕ ಸುಮಾರು ಎರಡು ವರ್ಷದ ನಂತರ ಪವನ್ ಕಲ್ಯಾಣ್ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಈ ಸಿನಿಮಾ ಇನ್ನು ತೆರೆಗೆ ಬಂದಿಲ್ಲ. ಅಷ್ಟರಲ್ಲೇ ಮತ್ತೊಂದು ಹೊಸ ಪ್ರಾಜೆಕ್ಟ್ ಘೋಷಣೆಯಾಗಿದೆ. ಮಲಯಾಳಂನ ಅಯ್ಯಪ್ಪನುಮ್ ಕೋಶಿಯುಮ್ ಚಿತ್ರದ ರೀಮೇಕ್‌ನಲ್ಲಿ ಪವನ್ ನಟಿಸುತ್ತಿದ್ದು, ಜೊತೆಗೆ ರಾಣಾ ಸಹ ಕಾಣಿಸಿಕೊಳ್ಳಲಿದ್ದಾರೆ.

ಸಾಗರ್ ಕೆ ಚಂದ್ರ ನಿರ್ದೇಶನ
ಸಾಗರ್ ಕೆ ಚಂದ್ರ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಸೂರ್ಯದೇವರ ನಾಗ ವಂಶಿ ನಿರ್ಮಾಣ ಮಾಡುತ್ತಿದ್ದಾರೆ. ಅಧಿಕೃತವಾಗಿ ಈ ಚಿತ್ರದ ಮುಹೂರ್ತ ಇಂದು ನೆರವೇರಿದ್ದು, ಪವನ್ ಕಲ್ಯಾಣ್ ಮಾತ್ರ ಭಾಗಿಯಾಗಿದ್ದರು. ತಮನ್ ಎಸ್ ಸಂಗೀತ ಹಾಗೂ ನವೀನ್ ನೂಲಿ ಸಂಕಲನ ಇದೆ. ಪ್ರಸಾದ್ ಮುರೇಲ್ಲ ಅವರ ಛಾಯಾಗ್ರಹಣ ಹೊಂದಿದೆ.

ಸಾಯಿ ಪಲ್ಲವಿ ಹೆಸರು ಚರ್ಚೆ!
ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ಸಿನಿಮಾ ಅಂದ್ಮೇಲೆ ಈ ಪ್ರಾಜೆಕ್ಟ್ ಮೇಲೆ ಭಾರಿ ನಿರೀಕ್ಷೆ ಹುಟ್ಟಿಕೊಂಡಿದೆ. ಅಂದ್ಹಾಗೆ, ಪವನ್ ಕಲ್ಯಾಣ್‌ಗೆ ಜೋಡಿಯಾಗಿ ಸಾಯಿ ಪಲ್ಲವಿ ಅವರನ್ನು ಕರೆತರಲು ಚಿತ್ರತಂಡ ಪ್ಲಾನ್ ಮಾಡಿದೆಯಂತೆ. ಈ ಕುರಿತು ಸುದ್ದಿ ಸಹ ಆಗಿತ್ತು. ಆದ್ರೆ, ಅಧಿಕೃತ ಮಾಡಿಲ್ಲ.
Recommended Video

'ಅಯ್ಯಪ್ಪನುಮ್ ಕೋಶಿಯುಮ್' ಸಿನಿಮಾ ಕುರಿತು
'ಅಯ್ಯಪ್ಪನುಮ್ ಕೋಶಿಯುಮ್' ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ಮತ್ತು ಬಿಜು ಮೆನನ್ ನಟಿಸಿದ್ದಾರೆ. ಸಚಿ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಬಿಜೆ ಮೆನನ್ ಪತ್ನಿ ಪಾತ್ರದಲ್ಲಿ ಗೌರಿ ನಂದಾ ನಟಿಸಿದ್ದರು. ಈ ಸಿನಿಮಾ ಇದೇ ವರ್ಷ ಫೆಬ್ರವರಿ 7 ರಂದು ತೆರೆಕಂಡಿತ್ತು.


Click it and Unblock the Notifications











