2021 ಸೆಕೆಂಡ್ ಹಾಫ್ ಮೇಲೆ ಕಣ್ಣಿಟ್ಟ ನಟ ರಾಣಾ ದಗ್ಗುಬಾಟಿ
ಕೊರೊನಾ ವೈರಸ್ ಬಿಕ್ಕಟ್ಟನಿಂದ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿದೆ. ಬಿಡುಗಡೆಗೆ ತಯಾರಾಗಿದ್ದ ಚಿತ್ರಗಳು ತೆರೆಗೆ ಬಂದಿಲ್ಲ, ಶೂಟಿಂಗ್ ನಡೆಯುತ್ತಿದ್ದ ಚಿತ್ರಗಳು ಅರ್ಧಕ್ಕೆ ನಿಂತಿದೆ. ತೆಲುಗು ನಟ ರಾಣಾ ದಗ್ಗುಬಾಟಿ ನಟಿಸಿರುವ ನಿರೀಕ್ಷೆಯ ಸಿನಿಮಾಗಳು ಈ ವರ್ಷದ ಆರಂಭದಲ್ಲಿ ಬರಬೇಕಿತ್ತು.
ಆದರೆ, ಕೋವಿಡ್ ಪರಿಸ್ಥಿತಿಯಿಂದ ರಿಲೀಸ್ ಆಗಲಿಲ್ಲ. ಈಗ ಸೆಕೆಂಡ್ ಹಾಫ್ ಮೇಲೆ ರಾಣಾ ಕಣ್ಣಿಟ್ಟಿದ್ದಾರೆ. ಹಿಂದಿಯಲ್ಲಿ 'ಹಾತಿ ಮೇರೆ ಸಾಥಿ' ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. 'ವಿರಾಟ ಪರ್ವಂ' ಎಂಬ ತೆಲುಗು ಸಿನಿಮಾ ರಿಲೀಸ್‌ಗೆ ರೆಡಿ ಇದೆ.
ವಿರಾಟ ಪರ್ವಂ ಚಿತ್ರದಲ್ಲಿ ಸಾಯಿ ಪಲ್ಲವಿ, ಪ್ರಿಯಮಣಿ, ನಂದಿತಾ ದಾಸ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿರಾಟ ಪರ್ವಂ ಮತ್ತು ಹಾಥಿ ಮೇರೆ ಸಾಥಿ ಸಿನಿಮಾಗಳು 2021ರ ಮೊದಲಾರ್ಧದಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಎರಡನೇ ಅಲೆಯಿಂದ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದರಿಂದ ಪರಿಸ್ಥಿತಿ ಕೈ ತಪ್ಪಿತ್ತು.

ಇನ್ನು ಮಲಯಾಳಂ ಚಿತ್ರದ ತೆಲುಗು ರಿಮೇಕ್ 'ಅಯ್ಯಪ್ಪನೂಮ್ ಕೊಶಿಯಮ್' ಚಿತ್ರದಲ್ಲೂ ರಾಣಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ರಿಮೇಕ್‌ನಲ್ಲಿ ಪವನ್ ಕಲ್ಯಾಣ್ ಮುಖ್ಯ ಪಾತ್ರದಲ್ಲಿದ್ದಾರೆ.
ಬುಡಕಟ್ಟು ಜನರ ನೆರವಿಗೆ ರಾಣಾ
ತೆಲುಗಿನ ಖ್ಯಾತ ನಟ ರಾಣಾ ದಗ್ಗುಬಾಟಿ ಸುಮಾರು 400 ಕುಟುಂಬಗಳಿಗೆ ನೆರವು ನೀಡುವುದರ ಮೂಲಕ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ತೆಲಂಗಾಣದ ನಿರ್ಮಲಾ ಜಿಲ್ಲೆಯ ಸುಮಾರು 400 ಬುಡಕಟ್ಟು ಕುಟುಂಬಗಳಿಗೆ ರಾಣಾ ದಗ್ಗುಬಾಟಿ ದಿನಸಿ ಕಿಟ್ ಮತ್ತು ಔಷಧಗಳನ್ನು ವಿತರಿಸಿದ್ದಾರೆ ಎಂದು ತಿಳಿದು ಬಂದಿದೆ.

ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವ ಪ್ರಕಾರ, ರಾಣಾ ದಗ್ಗುಬಾಟಿ ತಂಡವು ಇಲ್ಲಿಯವರೆಗೆ ಪಾಲಾ ರೆಗಾಡಿ, ಅಡಾಲಾ ತಿಮ್ಮಾಪುರ, ಗಗಣ್ಣಪೇಟೆ, ಕಹಿರಾಮ್ ತಾಂಡಾ ಸೇರಿದಂತೆ ಅನೇಕ ಗ್ರಾಮಗಳಿಗೆ ಸಹಾಯ ಮಾಡಿದೆ.
ಇನ್ನು ರಾಣಾ ದಗ್ಗುಬಾಟಿ ತಮ್ಮ ಗೆಳತಿ ಮಿಹೀಕಾ ಬಜಾಜ್ ಅವರನ್ನು ಆಗಸ್ಟ್ 2020 ರಲ್ಲಿ ವಿವಾಹವಾದರು.


Click it and Unblock the Notifications











