ಮತ್ತೆ ಪ್ರಭಾಸ್ ಗೆ ವಿಲನ್ ಆಗಲಿದ್ದಾರಾ ನಟ ರಾಣಾ ದಗ್ಗುಬಾಟಿ?
ಟಾಲಿವುಡ್ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಮತ್ತು ನಟ ರಾಣಾ ದಗ್ಗುಬಾಟಿ ಬಾಹುಬಲಿ ಸಿನಿಮಾ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿರುವ ಸ್ಟಾರ್ಸ್. ಚಿತ್ರದಲ್ಲಿ ಇಬ್ಬರ ಕಾಳಗ ನೋಡಿ ಸಿನಿಪ್ರಿಯರು ದಂಗ್ ಆಗಿದ್ದರು. ಇಬ್ಬರ ಕಾಂಬಿನೇಷನ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
Recommended Video
ಬಲ್ಲಾಳದೇವ ಮತ್ತು ಬಾಹುಬಲಿ ಪಾತ್ರದ ಮೂಲಕ ಭಾರತೀಯ ಚಿತ್ರ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದ ಪ್ರಭಾಸ್ ಮತ್ತು ರಾಣಾ ಇಬ್ಬರು ಮತ್ತೆ ಒಂದಾಗಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಇಬ್ಬರ ಕಾಂಬಿನೇಷನ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಬಾಹುಬಲಿ ನಂತರ ಇಬ್ಬರು ಮತ್ತೆ ಒಟ್ಟಿಗೆ ತೆರೆಮೇಲೆ ಬಂದಿರಲಿಲ್ಲ. ಆದರೀಗ ಇಬ್ಬರು ಒಟ್ಟಿಗೆ ಅಭಿನಯಿಸಲಿದ್ದಾರೆ ಎನ್ನುವ ಸರ್ಪ್ರೈಸ್ ಸುದ್ದಿಯೊಂದು ವೈರಲ್ ಆಗಿದೆ. ಮುಂದೆ ಓದಿ..

ಪ್ರಭಾಸ್ ವಿರುದ್ಧ ತೊಡೆತಟ್ಟಲಿದ್ದಾರಾ ರಾಣಾ?
ಪ್ರಭಾಸ್ ಮತ್ತು ನಾಗ್ ಅಶ್ವಿನ್ ಸಿನಿಮಾ ಸದ್ಯ ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಪ್ರಭಾಸ್ 20 ಸಿನಿಮಾಗಿಂತ ಹೆಚ್ಚಾಗಿ ಪ್ರಭಾಸ್ 21ನೇ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಈಗಾಗಲೆ ಪ್ರಭಾಸ್ ಗೆ ನಾಯಕಿಯಾರಾಗಲಿದ್ದಾರೆ, ಯಾರೆಲ್ಲ ನಟಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದರ ನಡುವೆ ಈಗ ಪ್ರಭಾಸ್ ಗೆ ರಾಣಾ ದಗ್ಗುಬಾಟಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಲನ್ ಆಗಿ ಅಬ್ಬರಿಸಲಿದ್ದಾರಾ ರಾಣಾ?
ಪ್ರಭಾಸ್ ಮತ್ತು ನಾಗ್ ಅಶ್ವಿನ್ ಸಿನಿಮಾದಲ್ಲಿ ರಾಣಾ ದಗ್ಗುಬಾಟಿ ಕಾಣಿಸಿಕೊಳ್ಳಲಿದ್ದಾರಂತೆ. ಚಿತ್ರದ ವಿಲನ್ ಪಾತ್ರಕ್ಕಾಗಿ ನಿರ್ಮಾಪಕರು ರಾಣಾ ಅವನ್ನು ಸಂಪರ್ಕ ಮಾಡಿದ್ದಾರಂತೆ. ಪ್ರಭಾಸ್ ಮತ್ತು ರಾಣಾ ಅವರನ್ನು ಮತ್ತೆ ತೆರೆಮೇಲೆ ಕರೆತರಲು ನಿರ್ಮಾಪಕರು ಪ್ರಯತ್ನ ಪಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ನಾಯಕನಾಗಿ ಮಿಂಚುತ್ತಿರುವ ರಾಣಾ ಮತ್ತೆ ಖಳನಟನಾಗಿ ಪ್ರಭಾಸ್ ವಿರುದ್ಧ ತೊಡೆತಟ್ಟುತ್ತಾರಾ ಎನ್ನುವುದನ್ನು ಕಾದು ನೋಡಬೇಕು.

ರಾಣಾ ಅನಾರೋಗ್ಯದ ಸುದ್ದಿ
ರಾಣಾ ದಗ್ಗುಬಾಟಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಇತ್ತೀಚಿಗಷ್ಟೆ ವಿದೇಶದಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ವಾಪಸ್ ಆಗಿರುವ ಬಗ್ಗೆ ಸಾಕಷ್ಟು ವರದಿಗಳು ಬಂದಿತ್ತು. ಆದರೆ ಈ ಬಗ್ಗೆ ರಾಣಾ ಎಲ್ಲೂ ಪ್ರತಿಕ್ರಿಯೆ ನೀಡಿರಲಿಲ್ಲ. ಅಲ್ಲದೆ ರಾಣಾ ಬಣ್ಣ ಹಚ್ಚದೆ ಅನೇಕ ಸಮಯವಾಗಿದೆ. ರಾಣಾ ಬಳಿ ಸಾಕಷ್ಟು ಸಿನಿಮಾಗಳಿವೆ. ತೆಲುಗಿನ ವಿರಾಟ ಪರ್ವಂ ಸಿನಿಮಾ ಸೇರಿದಂತೆ ಹಿಂದಿಯಲ್ಲಿಯೂ ಅಭಿನಯಿಸುತ್ತಿದ್ದಾರೆ.

ಮದುವೆ ವಿಚಾರ ಬಹಿರಂಗ ಪಡಿಸಿರುವ ಬಲ್ಲಾಳದೇವ
ಇತ್ತೀಚಿಗಷ್ಟೆ ರಾಣಾ ದಗ್ಗುಬಾಟಿ ತನ್ನ ಪ್ರೀತಿಯ ವಿಚಾರ ಬಹಿರಂಗ ಪಡಿಸಿದ್ದಾರೆ. ಹಸೆಮಣೆ ಏರಲು ಸಜ್ಜಾಗಿರುವ ರಾಣಾ ಭಾವಿ ಪತ್ನಿಯನ್ನು ಪರಿಚಯಿಸಿದ್ದಾರೆ. ಪ್ರೇಯಸಿ ಮಿಹಿಕಾ ಬಜಾಜ್ ಜೊತೆ ರಾಣಾ ದಗ್ಗುಬಾಟಿ ಹಸೆಮಣೆ ಏರಲು ತಯಾರಾಗಿದ್ದಾರೆ.

ಪ್ರಭಾಸ್ ಚಿತ್ರದಲ್ಲಿ ಅರವಿಂದ್ ಸ್ವಾಮಿ?
ಪ್ರಭಾಸ್ ಮತ್ತು ನಾಗ್ ಅಶ್ವಿನ್ ಸಿನಿಮಾಗೆ ತಮಿಳಿನ ಖ್ಯಾತ ನಟ ಅರವಿಂದ್ ಸ್ವಾಮಿ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಅರವಿಂದ್ ಸ್ವಾಮಿ ವಿಲನ್ ಆಗಿ ಅಬ್ಬರಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.ಇದರ ಜೊತೆಗೀಗ ರಾಣಾ ಹೆಸರು ಸಹ ಹರಿದಾಡುತ್ತಿದೆ. ಪ್ರಭಾಸ್ ಗೆ ಯರು ವಿಲನ್ ಆಗಲಿದ್ದಾರೆ? ರಾಣಾ ದಗ್ಗುಬಾಟಿ ಅಭಿನಯಿಸಲಿದ್ದಾರಾ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ.


Click it and Unblock the Notifications











