For Quick Alerts
  ALLOW NOTIFICATIONS  
  For Daily Alerts

  ರಾಣಾ ದಗ್ಗುಬಾಟಿ ಮದುವೆ ವಿಚಾರ ಕೇಳಿ ಮಾಜಿ ಪ್ರೇಯಸಿ ಶಾಕ್ ಆದರಂತೆ

  |

  ನಟ ರಾಣಾ ದಗ್ಗುಬಾಟಿ ಮದುವೆ ಆಗಲಿದ್ದಾರೆ. ಪ್ರೇಯಸಿ ಮಿಹಿಕಾ ಬಜಾಜ್ ಮದುವೆಗೆ ಒಪ್ಪಿಗೆ ಸೂಚಿಸಿದ್ದು, ಎರಡೂ ಕುಟುಂಬದವರೂ ಸೇರಿ 'ರೋಕಾ' ಕಾರ್ಯಕ್ರಮವನ್ನೂ ಸಹ ಇತ್ತೀಚೆಗೆ ಮಾಡಿದ್ದಾರೆ.

  ಫಿಲಂ ಟಿಕೆಟ್ ಗೆ 5 ರೂಪಾಯಿ ಜಾಸ್ತಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ ಫಿಲಂ ಛೇಂಬರ್ | Film Chamber | KFI

  ತಾವು ಮದುವೆ ಆಗುತ್ತಿರುವ ವಿಷಯವನ್ನು ರಾಣಾ ದಗ್ಗುಬಾಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಖ್ಯಾತ ನಟ-ನಟಿಯರು ರಾಣಾ ದಗ್ಗುಬಾಟಿಗೆ ಅಭಿನಂದಿಸಿದ್ದರು. ರಾಣಾ ಮಾಜಿ ಪ್ರೇಯಸಿಯರೂ ಸಹ ಅಭಿನಂದನೆ ಹೇಳಿದ್ದರು.

  ರಾಣಾ ದಗ್ಗುಬಾಟಿ ಭಾವಿ ಪತ್ನಿ ಮಿಹಿಕಾ ಬಜಾಜ್ ಯಾರು? ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆರಾಣಾ ದಗ್ಗುಬಾಟಿ ಭಾವಿ ಪತ್ನಿ ಮಿಹಿಕಾ ಬಜಾಜ್ ಯಾರು? ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ

  ಈ ಬಗ್ಗೆ ಮಾತನಾಡಿರುವ ರಾಣಾ ದಗ್ಗುಬಾಟಿ, 'ನಾನು ಎಂಗೇಜ್ ಆಗಿರುವ ವಿಷಯ ಕೇಳಿ ನನ್ನ ಮಾಜಿ ಪ್ರೇಯಸಿಯರು ಶಾಕ್‌ ಆಗಿಬಿಟ್ಟಿದ್ದರು, ನಂತರ ಸುಧಾರಿಸಿಕೊಂಡು ಶುಭಾಶಯ ಹೇಳಿದರು' ಎಂದಿದ್ದಾರೆ.

  ಕೆಲವು ನಟಿಯರೊಂದಿಗೆ ಹೆಸರು ತಳುಕು

  ಕೆಲವು ನಟಿಯರೊಂದಿಗೆ ಹೆಸರು ತಳುಕು

  ರಾಣಾ ದಗ್ಗುಬಾಟಿ ಹೆಸರು ಕೆಲವು ನಟಿಯರೊಂದಿಗೆ ತಳುಕು ಹಾಕಿಕೊಂಡಿತ್ತು. ತ್ರಿಶಾ, ಬಿಪಾಶಾ ಬಸು, ಚಾರ್ಮಿ, ಇಲಿಯಾನಾ ಹೀಗೆ ಕೆಲವು ನಟಿಯರೊಂದಿಗೆ ತಳುಕು ಹಾಕಿಕೊಂಡಿತ್ತು. ಆದರೆ ಹೆಚ್ಚಾಗಿ ಕೇಳಿಬಂದಿದ್ದು ತ್ರಿಶಾ ಜೊತೆಗೆ.

  ತ್ರಿಶಾ ಮತ್ತು ರಾಣಾ ದಗ್ಗುಬಾಟಿ

  ತ್ರಿಶಾ ಮತ್ತು ರಾಣಾ ದಗ್ಗುಬಾಟಿ

  ಹೌದು, ತ್ರಿಶಾ ಮತ್ತು ರಾಣಾ ದಗ್ಗುಬಾಟಿ ಪರಸ್ಪರ ಪ್ರೀತಿಯಲ್ಲಿದ್ದರು. ಪಾರ್ಟಿಗಳಲ್ಲಿ, ಇನ್ನಿತರೆ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಕೆಲ ವರ್ಷ ಜೊತೆಯಾಗಿದ್ದ ಈ ಜೊಡಿ ನಂತರ ಬೇರೆ-ಬೇರೆ ಆಯಿತು.

  ಗೆಳೆತನ ಮುಂದುವರೆಸಿದ ಮಾಜಿ ಪ್ರೇಮಿಗಳು

  ಗೆಳೆತನ ಮುಂದುವರೆಸಿದ ಮಾಜಿ ಪ್ರೇಮಿಗಳು

  ಬೇರಾದ ಮೇಲೂ ಗೆಳೆತನವನ್ನು ತ್ರಿಶಾ-ರಾಣಾ ದಗ್ಗುಬಾಟಿ ಮುಂದುವರೆಸಿದ್ದರು. ಹಾಗಾಗಿಯೇ ರಾಣಾ ದಗ್ಗುಬಾಟಿ ತಾವು ಮದುವೆ ಆಗಲಿರುವುದಾಗಿ ಘೋಷಿಸಿ ಪ್ರೇಯಸಿ ಮಿಹಿಕಾ ಬಜಾಜ್ ಚಿತ್ರ ಅಪ್‌ಲೋಡ್ ಮಾಡಿದಾಗ ತ್ರಿಶಾ ಸಹ ಅಭಿನಂದನೆಗಳನ್ನು ಹೇಳಿದ್ದಾರಂತೆ.

  ಮಿಹಿಕಾ ಬಜಾಜ್ ಯಾರು?

  ಮಿಹಿಕಾ ಬಜಾಜ್ ಯಾರು?

  ರಾಣಾ ದಗ್ಗುಬಾಟಿ ಮದುವೆ ಆಗಲಿರುವ ಮಿಹಿಕಾ ಬಜಾಜ್ ಗೆ ಸಿನಿಮಾ ನಂಟಿಲ್ಲ. ಮಿಹಿಕಾ ಬಜಾಜ್ ವೃತ್ತಿಯಲ್ಲಿ ಉದ್ಯಮಿ. ಲಂಡನ್ ನ ಚೆಲ್ಸಿಯಾ ಆರ್ಟ್ ಅಂಡ್ ಡಿಸೈನ್ ವಿಶ್ವವಿದ್ಯಾನಿಲಯದಲ್ಲಿ ಈವೆಂಟ್ ಮತ್ತು ವೆಡ್ಡಿಂಗ್ ಪ್ಲಾನ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆನಂತರ ಮಿಹಿಕಾ ಮುಂಬೈನ ಆರ್ಕಿಟ್ರೆಕ್ಟರ್ ಸ್ಕೂಲ್ ನಲ್ಲಿ ಇಂಟಿರಿಯರ್ ಡಿಸೈನ್ ನಲ್ಲಿ ಡಿಪ್ಲೊಮ ಕೋರ್ಸ್ ಸಹ ಮಾಡಿದ್ದಾರೆ.

  English summary
  Actor Rana Daggubati's ex girl friends were shocked to hear he engaged again. He said anyway they congratulate him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X