For Quick Alerts
  ALLOW NOTIFICATIONS  
  For Daily Alerts

  ಅನುಷ್ಕಾ ಮೇಲೆ ಕ್ರಶ್ ಆಗಿದೆ ಅವರ ಜೊತೆ ನಟಿಸಬೇಕು: ಬಾಲಿವುಡ್ ಸ್ಟಾರ್ ನಟನ ಬಯಕೆ

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ. ಅಪಾರ ಸಂಖ್ಯೆಯ ಅಭಿಮಾನಿ ಬಳಗ ಸಂಪಾದಿಸಿರುವ ದಕ್ಷಿಣದ ಈ ಸ್ವೀಟಿ ಜೊತೆ ನಟಿಸಬೇಕೆಂದು ಸಾಕಷ್ಟು ನಾಯಕರು ಕಾಯುತ್ತಿದ್ದರು. ಇದು ಕೇವಲ ದಕ್ಷಿಣದ ಸ್ಟಾರ್ಸ್ ಮಾತ್ರವಲ್ಲದೆ ಬಾಲಿವುಡ್ ಸ್ಟಾರ್ಸ್ ಕೂಡ ಎನ್ನುವುದು ವಿಶೇಷ.

  ಬಾಹುಬಲಿ ಸಿನಿಮಾ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ದೇವಸೇನಾ ಅನುಷ್ಕಾ ಮೇಲೆ ಬಾಲಿವುಡ್ ನ ಈ ಸ್ಟಾರ್ ನಟನಿಗೂ ಕ್ರಶ್. ಅಂದಹಾಗೆ ಅನುಷ್ಕಾ ಮೇಲೆ ಕ್ರಶ್ ಆಗಿರುವ ಆ ಸ್ಟಾರ್ ಮತ್ಯಾರು ಅಲ್ಲ ರಣಬೀರ್ ಕಪೂರ್. ಈ ಬಗ್ಗೆ ಸ್ವತಃ ರಣಬೀರ್ ಕಪೂರ್ ಅವರೇ ಹೇಳಿಕೊಂಡಿದ್ದಾರೆ.

  ಸಹನಟನ ಅಗಲಿಕೆಗೆ ಕಂಬನಿ ಮಿಡಿದ ಸ್ವೀಟಿ: ಅನುಷ್ಕಾ ಇಷ್ಟವಾಗುವುದು ಇದೇ ಕಾರಣಕ್ಕೆಸಹನಟನ ಅಗಲಿಕೆಗೆ ಕಂಬನಿ ಮಿಡಿದ ಸ್ವೀಟಿ: ಅನುಷ್ಕಾ ಇಷ್ಟವಾಗುವುದು ಇದೇ ಕಾರಣಕ್ಕೆ

  2017ರಲ್ಲಿ ಸೈಮಾ ಪ್ರಶಸ್ತಿ ಸಮಾರಂಭರಕ್ಕೆ ರಣಬೀರ್ಮತ್ತು ಕತ್ರಿನಾ ಕೈಫ್ ವಿಶೇಷ ಅತಿಥಿಗಳಾಗಿ ಭಾಗಿಯಾಗಿದ್ದರು. ಈ ಸಮಯದಲ್ಲಿ ರಣಬೀರ್ ತನ್ನ ಮನಲ್ಲಿದ್ದ ಆಸೆಯನ್ನು ಹೊರಹಾಕಿದ್ದಾರೆ. ಯಾರ ಜೊತೆ ನಟಿಸಲು ಇಷ್ಟಪಡುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ರಣಬೀರ್, 'ಅನುಷ್ಕಾ ಶೆಟ್ಟಿ ಜೊತೆ ನಟಿಸಲು ಇಷ್ಟಪಡುತ್ತೇನೆ. ಬಾಹುಬಲಿ ಸಿನಿಮಾ ಬಳಿಕ ಅನುಷ್ಕಾ ಶೆಟ್ಟಿ ಮೇಲೆ ನನಗೆ ಕ್ರಶ್ ಆಗಿದೆ. ನಾನು ಖಂಡಿತವಾಗಿ ಅವರ ಜೊತೆ ಕೆಲಸ ಮಾಡಲು ಬಯಸುತ್ತೇನೆ' ಎಂದು ಹೇಳಿದ್ದರು.

  ಇದೇ ಸಮಯದಲ್ಲಿ ನಟಿ ಕತ್ರಿನಾ ಬಾಹುಬಲಿ ಸ್ಟಾರ್ ಪ್ರಭಾಸ್ ಜೊತೆ ನಟಿಸಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸಿದ್ದರು. ಅದರಂತೆ ಈಗ ಪ್ರಭಾಸ್ ಮುುಂದಿನ ಸಿನಿಮಾದಲ್ಲಿ ಕತ್ರಿನಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಚಿತ್ರದಲ್ಲಿ ಕತ್ರಿನಾ ಸೌತ್ ಸ್ಟಾರ್ ಪ್ರಭಾಸ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

  ಇನ್ನು ಬಾಹುಬಲಿ ಸಿನಿಮಾ ಬಳಿಕ ಅನುಷ್ಕಾ ಬಾಲಿವುಡ್ ಗೆ ಎಂಟ್ರಿ ಕೊಡ್ತಾರೆ ಎನ್ನುವ ಮಾತು ಕೇಳಿಬಂದಿತ್ತು. ಸೌತ್ ಸ್ವೀಟಿಯನ್ನು ಬಾಲವುಡ್ ಗೆ ಕರೆತರಲು ನಿರ್ಮಾಪಕ ಕರಣ್ ಜೋಹರ್ ಸಕಷ್ಟು ಪ್ರಯತ್ನ ಪಟ್ಟಿದ್ದರು. ಆದರೆ ಅನುಷ್ಕಾ ದಕ್ಷಿಣ ಭಾರತೀಯ ಚಿತ್ರರಂಗ ಬಿಟ್ಟು ಹೋಗಿಲ್ಲ. ಬಾಹುಬಲಿ ಬಳಿಕ ಕಡಿಮೆ ಸಿನಿಮಾಗಳಲ್ಲಿ ನಟಿಸಿರುವ ಅನುಷ್ಕಾ ನಿಶಬ್ದಂ ಬಳಿಕ ಮತ್ತೆ ಬಣ್ಣ ಹಚ್ಚಿಲ್ಲ. ಹಾಗಾಗಿ ಅನುಷ್ಕಾ ಮುಂದಿನ ಸಿನಿಮಾ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

  Recommended Video

  ಆಕ್ಸಿಜನ್‍ನಿಂದ ಉಸಿರಾಡ್ತಾ ಹಾಡಿಗೆ ತಲೆದೂಗಿದ್ದ ಯುವತಿ ಸಾವಿಗೆ ಸೋನು ಸೂದ್ ಕಂಬನಿ | Filmibeat Kannada
  English summary
  Bollywood Actor Ranbir Kapoor reveals his crush on Anushka shetty and he would like to act with her.
  Monday, May 17, 2021, 9:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X