ಜಪಾನ್‌ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ 'ರಂಗಸ್ಥಳಂ': ಮೊದಲ ದಿನ ಸಿನಿಮಾ ಗಳಿಸಿದ್ದೆಷ್ಟು?

5 ವರ್ಷಗಳ ಹಿಂದೆ ಟಾಲಿವುಡ್‌ನಲ್ಲಿ ಸೂಪರ್ ಹಿಟ್ ಆಗಿದ್ದ 'ರಂಗಸ್ಥಳಂ' ಸಿನಿಮಾ ಈಗ ಮತ್ತೆ ಸುದ್ದಿಯಲ್ಲಿದೆ. ಈ ವಾರ ಸಿನಿಮಾ ಜಪಾನ್ ದೇಶದಲ್ಲಿ ರಿಲೀಸ್ ಆಗಿ ಪ್ರೇಕ್ಷಕರ ಮನ ಗೆದ್ದಿದೆ. ಮೊದಲ ದಿನ ಜಪಾನ್ ಬಾಕ್ಸಾಫೀಸ್‌ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಈ ಪೀರಿಯಡ್ ಆಕ್ಷನ್ ಸಿನಿಮಾ ಪಾತ್ರವಾಗಿದೆ.

ರಾಮ್‌ಚರಣ್ ನಟನೆಯ 'RRR' ಸಿನಿಮಾ ಇತ್ತೀಚೆಗೆ ಜಪಾನ್ ದೇಶದಲ್ಲಿ ರಿಲೀಸ್ ಆಗಿ ಸಕ್ಸಸ್ ಕಂಡಿತ್ತು. ಹಾಗಾಗಿ ಸಹಜವಾಗಿಯೇ ಮೆಗಾ ಪವರ್ ಸ್ಟಾರ್ ಕ್ರೇಜ್ ಅಲ್ಲಿ ಜೋರಾಗಿದೆ. ಅದಕ್ಕೆ ತಕ್ಕಂತೆ 'ರಂಗಸ್ಥಳಂ' ಅಡ್ವಾನ್ಸ್ ಬುಕ್ಕಿಂಗ್ ಕೂಡ ನಡೆದಿತ್ತು. ಇದೀಗ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚಿಕೊಂಡಾಡುತ್ತಿದ್ದಾರೆ. ಮೊದಲ ದಿನ ಜಪಾನ್‌ನಲ್ಲಿ 'ರಂಗಸ್ಥಳಂ' ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎನಿಸಿಕೊಂಡಿದೆ. ಸುಕುಮಾರ್ ನಿರ್ದೇಶನದ ಸಿನಿಮಾ ಮುಂದಿನ ದಿನಗಳಲ್ಲಿ ಮತ್ತಷ್ಟು ಗಳಿಕೆ ಕಾಣುವ ಸುಳಿವು ಸಿಕ್ತಿದೆ.

Rangasthalam becomes the highest-collected Indian movie in Japan on Day 1

ಜಪಾನ್ ಬಾಕ್ಸಾಫೀಸ್‌ನಲ್ಲಿ 'ರಂಗಸ್ಥಳಂ' ಫಸ್ಟ್ ಡೇ ಕಲೆಕ್ಷನ್ ಬಗ್ಗೆ ಸ್ವತಃ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಮಾಹಿತಿ ನೀಡಿದೆ. ಮೊದಲ ದಿನ 70 ಶೋಗಳಿಂದ ಒಟ್ಟು 1.5 ಮಿಲಿಯನ್ ಯೆನ್‌ ಗಳಿಕೆ ಕಂಡಿದೆ. ಈ ಸುದ್ದಿ ಕೇಳಿ ಮೆಗಾ ಪವರ್ ಸ್ಟಾರ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಜಪಾನ್‌ನಲ್ಲಿ ಕೆಲವೇ ಭಾರತದ ಸಿನಿಮಾಗಳು ಉತ್ತಮ ಗಳಿಕೆ ಕಂಡಿವೆ. ಇದೀಗ 'ರಂಗಸ್ಥಳಂ' ಹಾಗೂ 'KGF' ಸಿನಿಮಾಗಳು ಅದೇ ಭರವಸೆ ಮೂಡಿಸಿವೆ.

ಚಿಟ್ಟಿಬಾಬು ನೋಡಿ ಜಪಾನೀಯರು ಫಿದಾ

'ರಂಗಸ್ಥಳಂ' ಚಿತ್ರದಲ್ಲಿ ರಾಮ್‌ಚರಣ್ ಚಿಟ್ಟಿಬಾಬು ಎನ್ನುವ ಹಳ್ಳಿ ಹೈದನ ಪಾತ್ರದಲ್ಲಿ ನಟಿಸಿದ್ದಾರೆ. ರಂಗಸ್ಥಳಂ ಊರಿನ ರಾಜಕೀಯ, ಫಣಿಂದ್ರ ಭೂಪತಿ ಅಟ್ಟಹಾಸ. ಅದನ್ನು ಎದುರಿಸಿ ನಿಲ್ಲುವ ಚಿಟ್ಟಿಬಾಬು ಮತ್ತವನ ಸಹೋದರ ಕುಮಾರ ಬಾಬು. ಅವರಿಬ್ಬರನ್ನು ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಎಂಎಲ್‌ಎ ದಕ್ಷಿಣ ಮೂರ್ತಿ. ಕ್ಷುಲ್ಲಕ ಕಾರಣಕ್ಕೆ ಮೋಸದಿಂದ ಕುಮಾರ ಬಾಬು ದಕ್ಷಿಣ ಮೂರ್ತಿ ಕೊಲ್ಲಿಸುವುದು, ಅದಕ್ಕೆ ಚಿಟ್ಟಿಬಾಬು ಸೇಡು ತೀರಿಸಿಕೊಳ್ಳುವ ಕಥೆ ಪ್ರೇಕ್ಷಕರಿಗೆ ಇಷ್ಟವಾಗಿದೆ.

Rangasthalam becomes the highest-collected Indian movie in Japan on Day 1

ವಿಶೇಷ ಚೇತನ ಪಾತ್ರದಲ್ಲಿ ರಾಮ್‌ಚರಣ್

ಸರಿಯಾಗಿ ಕಿವಿ ಕೇಳಿಸದ ವಿಶೇಷ ಚೇತನ ಚಿಟ್ಟಿಬಾಬು ಪಾತ್ರದಲ್ಲಿ ರಾಮ್‌ಚರಣ್ ನಟನೆ ಸಿನಿರಸಿಕರಿಗೆ ಇಷ್ಟವಾಗಿತ್ತು. ಇದೀಗ ಜಪಾನ್ ಪ್ರೇಕ್ಷಕರು ಕೂಡ ಇದನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಆತನಿಗೆ ಜೋಡಿಯಾ ಸಮಂತಾ ಮಿಂಚಿದ್ದಾರೆ. ಚಿಟ್ಟಿಬಾಬು ಸಹೋದರನ ಪಾತ್ರದಲ್ಲಿ ಆದಿ ಪಿನಿಶೆಟ್ಟಿ ಕಾಣಿಸಿಕೊಂಡಿದ್ದಾರೆ. 'RRR' ಚಿತ್ರದಲ್ಲಿ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ಚರಣ್‌ನ ಅಲ್ಲಿನ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಹಾಗಾಗಿ ಮೆಗಾ ಪವರ್ ಸ್ಟಾರ್ ಆರ್ಭಟ ಮತ್ತೆ ಜೋರಾಗಿದೆ.

'KGF' vs 'ರಂಗಸ್ಥಳಂ'

ಈ ಶುಕ್ರವಾರ 'ರಂಗಸ್ಥಳಂ' ಸಿನಿಮಾ ಜೊತೆಗೆ ಕನ್ನಡದ 'KGF' ಸರಣಿ ಸಿನಿಮಾಗಳು ರಿಲೀಸ್ ಆಗಿದೆ. ರಾಕಿಭಾಯ್ ಅಭಿನಯಕ್ಕೂ ಜಪಾನಿಯರು ಜೈಕಾರ ಹಾಕುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಜಪಾನ್ ಬಾಕ್ಸಾಫೀಸ್‌ನಲ್ಲಿ 2 ಸಿನಿಮಾಗಳ ನಡುವೆ ಸಣ್ಣದಾಗಿ ಫೈಟ್ ಶುರುವಾಗಿದೆ. ಮೊದಲ ದಿನಕ್ಕೆ ಹೋಲಿಸಿದರೆ 2ನೇ ದಿನ 'KGF' ಸರಣಿ ಸಿನಿಮಾಗಳಿಗೆ ರೆಸ್ಪಾನ್ಸ್ ಚೆನ್ನಾಗಿದೆ.

'ರಂಗಸ್ಥಳಂ' ವಿತರಕರು ಖುಷ್

ಸ್ಪೇಸ್ ಬಾಕ್ಸ್ ಸಂಸ್ಥೆ ಭಾರತದ ಸಿನಿಮಾಗಳನ್ನು ಜಪಾನ್ ದೇಶದಲ್ಲಿ ವಿತರಣೆ ಮಾಡುತ್ತಾ ಬರುತ್ತಿದೆ. ಇದೀಗ 'ರಂಗಸ್ಥಳಂ' ಕೂಡ ಜಪಾನ್ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿ ವಿತರಕರು ಸಂತಸ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ಯಾವ ರೀತಿ ಸದ್ದು ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಜಪಾನ್ ಬಾಕ್ಸಾಫೀಸ್‌ನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 'RRR' ಹಾಗೂ 'ಮುತ್ತು' ಮೊದಲೆರಡು ಸ್ಥಾನದಲ್ಲಿದೆ.

More from Filmibeat

English summary
Rangasthalam becomes the highest-collected Indian movie in Japan on Day 1. Sukumar Direcional breaking barriers even after 5 years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X