For Quick Alerts
  ALLOW NOTIFICATIONS  
  For Daily Alerts

  ಪುರುಷರ ಬೆತ್ತಲೆ ಫೋಟೊವನ್ನು ಮಹಿಳೆಯರು ನೋಡಲು ಇಷ್ಟ ಪಡುತ್ತಾರಾ? ಸಮೀಕ್ಷೆಗೆ ಇಳಿದ RGV!

  |

  ಬಾಲಿವುಡ್‌ನ ಎನೆರ್ಜೆಟಿಕ್ ಸ್ಟಾರ್ ರಣ್‌ವೀರ್‌ ಸಿಂಗ್ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಮ್ಯಾಗಜೀನ್‌ವೊಂದಕ್ಕೆ ಬೆತ್ತಲೆ ಪೋಸ್ ಕೊಟ್ಟು ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ. ಈ ವಿಚಾರವಾಗಿ ರಣ್‌ವೀರ್ ಸಿಂಗ್ ವಿರುದ್ಧ ಮುಂಬೈನಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ.

  ರಣ್‌ವೀರ್‌ ಸಿಂಗ್ ಬೋಲ್ಡ್ ಆಗಿ ಬೆತ್ತಲೆ ಫೋಟೊಶೂಟ್ ಮಾಡಿಸಿದ್ದಕ್ಕೆ ಸೆಲೆಬ್ರೆಟಿಗಳು ಮೆಚ್ಚುಗೆ ಸೂಚಿಸಿದ್ದರು. ಆದರೆ, ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮಾತ್ರ ಕಿಡಿಕಾರುತ್ತಿದ್ದಾರೆ. ಕೆಲವು ದಿನಗಳಿಂದ ನೆಟ್ಟಿಗರು ಈ ಫೋಟೊಗಳ ಬಗ್ಗೆನೇ ಕಮೆಂಟ್ ಮಾಡುತ್ತಿದ್ದಾರೆ.

  'ಎಕ್ಕ ಸಕ್ಕ' ವಿಡಿಯೋ ಸಾಂಗ್ ಝಲಕ್ ನೋಡಿ ಕೈ ಕೈ ಹಿಸುಕಿಕೊಂಡ ಫ್ಯಾನ್ಸ್!'ಎಕ್ಕ ಸಕ್ಕ' ವಿಡಿಯೋ ಸಾಂಗ್ ಝಲಕ್ ನೋಡಿ ಕೈ ಕೈ ಹಿಸುಕಿಕೊಂಡ ಫ್ಯಾನ್ಸ್!

  ಈ ವಿವಾದಕ್ಕೆ ರಾಮ್‌ ಗೋಪಾಲ್ ವರ್ಮಾ ಉಪ್ಪಿ-ಹುಳಿ-ಖಾರ ಸೇರಿಸಿದ್ದಾರೆ. ರಣ್‌ವೀರ್ ಸಿಂಗ್ ಬೆಂಬಲಕ್ಕೆ ನಿಂತಿದ್ದಷ್ಟೇ ಅಲ್ಲದೆ ಟ್ವಿಟರ್‌ನಲ್ಲಿ ಸಮೀಕ್ಷೆ ನಡೆಸುತ್ತಿದ್ದಾರೆ. ಮೊದಲೇ ಹೊತ್ತಿ ಉರಿಯುತ್ತಿದ್ದ ಬೆಂಕಿಗೆ ರಾಮ್‌ ಗೋಪಾಲ್ ವರ್ಮಾ ತುಪ್ಪ ಸುರಿದಂತಾಗಿದೆ.

  ಚೀನಾದ 47 ಸಾವಿರ ಸ್ಕ್ರೀನ್‌ನಲ್ಲಿ ತೆರೆಕಂಡ ರಾಮ್‌ ಗೋಪಾಲ್ ವರ್ಮಾ ಸಿನಿಮಾದ ಕಲೆಕ್ಷನ್ ಎಷ್ಟು?ಚೀನಾದ 47 ಸಾವಿರ ಸ್ಕ್ರೀನ್‌ನಲ್ಲಿ ತೆರೆಕಂಡ ರಾಮ್‌ ಗೋಪಾಲ್ ವರ್ಮಾ ಸಿನಿಮಾದ ಕಲೆಕ್ಷನ್ ಎಷ್ಟು?

  ರಣ್‌ವೀರ್ ಸಿಂಗ್ ಬೆತ್ತಲೆ ಫೋಟೊಶೂಟ್

  ರಣ್‌ವೀರ್ ಸಿಂಗ್ ಬೆತ್ತಲೆ ಫೋಟೊಶೂಟ್

  ರಾಮ್‌ಗೋಪಾಲ್ ವರ್ಮಾ ಏನೇ ಮಾತಾಡಿದರೂ ಅದು ವಿವಾದಕ್ಕೆ ಸಿಕ್ಕಿಕೊಳ್ಳುತ್ತೆ. ಇಲ್ಲಾ ವಿವಾದ ಆಗಲಿ ಅಂತಾನೇ ಆರ್‌ಜಿವಿ ಹಾಗೆಲ್ಲಾ ಮಾತಾಡುತ್ತಾರೋ ಗೊತ್ತಿಲ್ಲ. ಅಷ್ಟಕ್ಕೂ ರಣ್‌ವೀರ್ ಸಿಂಗ್ ಮ್ಯಾಗಜೀನ್‌ಗಾಗಿ ನೀಡಿದ ಬೆತ್ತಲೆ ಫೋಟೊಗಳಿಂದ ಇದೆಲ್ಲಾ ಶುರುವಾಗಿದೆ. ಕೆಲವರು ಸಕರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೆ ಕೆಲವರು ತಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಕಿಡಿಕಾರುತ್ತಿದ್ದಾರೆ. ಈ ಮಧ್ಯೆ ರಾಮ್ ಗೋಪಾಲ್ ವರ್ಮಾ ತಮ್ಮದೇ ಸ್ಟೈಲ್‌ನಲ್ಲಿ ರಣ್‌ವೀರ್ ಸಿಂಗ್‌ಗೆ ಸಪೋರ್ಟ್ ಮಾಡುತ್ತಿದ್ದಾರೆ.

  ರಾಮ್‌ಗೋಪಾಲ್ ವರ್ಮಾ ಎಂಟ್ರಿ

  ಸೋಶಿಯಲ್ ಮೀಡಿಯಾದಲ್ಲಿ ರಣ್‌ವೀರ್ ಸಿಂಗ್ ಬೆತ್ತಲೆ ಫೋಟೊಗಳಿಂದ ಪ್ರೇರಣೆ ಹೊಂದಿದವರು ಇದ್ದಾರೆ. ಈ ಮಧ್ಯೆ ವಿವಾದಾದ್ಮತ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ ಅಖಾಡಕ್ಕಿಳಿದಿದ್ದು, ಹೊಸ ತಿರುವು ನೀಡಲು ಮುಂದಾಗಿದ್ದಾರೆ. ರಣ್‌ವೀರ್ ಸಿಂಗ್ ಲಿಂಗ ಸಮಾನತೆಗಾಗಿ ಇಂತಹ ಫೋಟೊಶೂಟ್ ಮಾಡಿಸಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. " ನಾನು ವೈಯಕ್ತಿಕವಾಗಿ ಚಪ್ಪಾಳೆ ತಟ್ಟುತ್ತೇನೆ. ಇನ್ನೊಂದು ಕಡೆ ಬಹಳಷ್ಟು ಮಂದಿ ಬೆಂಬಲಕ್ಕೆ ನಿಂತಿರುವುದಕ್ಕೆ ಥ್ರಿಲ್ ಆಗಿದ್ದೇನೆ. ಇದು ಹೊಸ ಜಮಾನದ ಬೋಲ್ಡ್‌ನೆಸ್." ಎಂದು ಟ್ವೀಟ್ ಮಾಡಿದ್ದಾರೆ.

  ಸಮೀಕ್ಷೆಗಿಳಿದ ಆರ್‌ಜಿವಿ

  ಹೌದು, ರಣ್‌ವೀರ್ ಸಿಂಗ್ ವಿಚಾರದಲ್ಲಿ ರಾಮ್ ಗೋಪಾಲ್ ವರ್ಮಾ ಅಖಾಡಕ್ಕಿಳಿದಿದ್ದಾರೆ. ಕೇವಲ ಟ್ವೀಟ್ ಮಾಡಿ ಸುಮ್ಮನಾಗಿದ್ದರೆ ಬೇರೆ ಮಾತಾಗಿರುತ್ತಿತ್ತು. ಆದ್ರೀಗ ರಾಮ್‌ ಗೋಪಾಲ್ ವರ್ಮಾ ಟ್ವಿಟರ್‌ನಲ್ಲಿ ಸಮೀಕ್ಷೆ ಮಾಡುತ್ತಿದ್ದಾರೆ. "ಪುರುಷರು ಮಹಿಳೆಯ ಬೆತ್ತಲೆ ಫೋಟೊವನ್ನು ನೋಡಿ ಎಂಜಾಯ್ ಮಾಡುವಂತೆ ಮಹಿಳೆಯರೂ ಕೂಡ ಹುಡುಗರ ಬೆತ್ತಲೆ ಫೋಟೊವನ್ನು ನೋಡಿ ಎಂಜಾಯ್ ಮಾಡುತ್ತಾರಾ?" ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.

  ರಣ್‌ವೀರ್‌ಗೆ ಆರ್‌ಜಿವಿ ಬೆಂಬಲ

  ರಣ್‌ವೀರ್‌ಗೆ ಆರ್‌ಜಿವಿ ಬೆಂಬಲ

  ರಾಮ್‌ ಗೋಪಾಲ್ ವರ್ಮಾ ಕೇಳಿದ ಪ್ರಶ್ನೆಗಳಿಗೆ ಇಲ್ಲಿವರೆಗೂ ಸುಮಾರು 6 ಸಾವಿರಕ್ಕೂ ಅಧಿಕ ಮೊತ್ತಗಳು ಸಿಕ್ಕಿದೆ. ರಣ್‌ವೀರ್ ಬೆಂಬಲಕ್ಕೆ ನಿಂತಿದ್ದಕ್ಕೆ ರಾಮ್ ಗೋಪಾಲ್ ವರ್ಮಾ ವಿರುದ್ಧವೂ ಕೆಲವರು ತಿರುಗಿಬಿದ್ದಿದ್ದಾರೆ. ಇನ್ನು ರಣ್‌ವೀರ್ ಸಿನಿಮಾ ವಿಚಾರಕ್ಕೆ ಬರುವುದಾದರೆ, 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಆಲಿಯಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ. ಕರಣ್ ಜೋಹರ್ ನಿರ್ದೇಶಿಸಿರೋ ಈ ಸಿನಿಮಾ ಮುಂದಿನ ವರ್ಷ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ. ಇದರೊಂದಿಗೆ ರೋಹಿತ್ ಶೆಟ್ಟಿ ನಿರ್ದೇಶನದ 'ಸರ್ಕಸ್' ಪೂರ್ಣಗೊಂಡಿದೆ.

  Recommended Video

  ಹೆಂಡತಿ ಕೈ ಹಿಡಿದು ಬರಮಾಡಿಕೊಂಡ ಸುದೀಪ್ | Vikrant Rona | Kiccha Sudeep | Priya Sudeep | *Press Meet
  English summary
  Ranveer Singh Nude Photoshoot: Ram Gopal Varma Supported Bollywood Actor, Know More.
  Wednesday, July 27, 2022, 10:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X