For Quick Alerts
  ALLOW NOTIFICATIONS  
  For Daily Alerts

  ಕನಸಿನ ರಾಜಕುಮಾರನ ಬಗ್ಗೆ ಮನಬಿಚ್ಚಿ ಮಾತನಾಡಿದ ರಾಶಿ ಖನ್ನಾ!

  By ರವೀಂದ್ರ ಕೊಟಕಿ
  |

  ಸಿನಿಮಾ ನಟಿಯರ ಬಗ್ಗೆ ಜನಸಾಮಾನ್ಯರಲ್ಲೊಂದು ಕೆಟ್ಟ ಕುತೂಹಲ ಸದಾ ಮನೆ ಮಾಡಿರುತ್ತದೆ. ಧರೆಗಿಳಿದ ಬೊಂಬೆಗಳು ಇವರು, ಯಾರನ್ನು ಯಾರು ಮದುವೆಯಾಗುತ್ತಾರೆ? ಇವರ ಮನ ಕದ್ದು, ಇವರನ್ನು ಮದುವೆಯಾಗುವ ರಾಜಕುಮಾರ ಯಾರು? ಹೇಗೆ ಇರುತ್ತಾನೆ? ಅದರಲ್ಲೂ ಪಡ್ಡೆಗಳ ನಿದ್ದೆ ಕದ್ದ ನಾಯಕ ನಟಿಯರ ಜೀವನದ ಬಗ್ಗೆ ವಿಶೇಷವಾದ ಕುತೂಹಲ ಸದಾ ಮನೆ ಮಾಡಿರುತ್ತದೆ. ಟಾಲಿವುಡ್ ನ ಗುಳಿಕೆನ್ನೆಯ ಬೆಡಗಿ ರಾಶಿ ಖನ್ನಾ ಇತ್ತೀಚೆಗೆ ತನ್ನ ಮದುವೆಯಾಗಲಿರುವ ರಾಜಕುಮಾರನ ಬಗ್ಗೆ ಕನಸೊಂದನ್ನು ಬಿಚ್ಚಿಟ್ಟಿದ್ದಾಳೆ.

  ಮದ್ರಾಸ್ ಕೆಫೆ ಹುಡುಗಿ

  ಸೌಂದರ್ಯದ ನಿಧಿ ಯಾಗಿರುವ ರಾಶಿ ಖನ್ನಾ 2013ರಲ್ಲಿ ಹಿಂದಿ ಚಿತ್ರ 'ಮದ್ರಾಸ್ ಕೆಫೆ' ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದಳು. ಮುಂದೆ ಲೇಡಿ ಶ್ರೀರಾಮ ಕಾಲೇಜಿನ ಈ ಬ್ಯೂಟಿ 2014 ರಲ್ಲಿ ಶ್ರೀನಿವಾಸ್ ಅವಸರಾಲ ನಿರ್ದೇಶನದ 'ಊಹಲು ಗುಸಾಗುಸಾಲಾಡೇ' ಸಿನಿಮಾದ ಮೂಲಕ ತೆಲುಗು ಸಿನಿಮಾ ಚಲನಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದಳು. ಮೊದಲ ಚಿತ್ರದಲ್ಲೇ ಸಿನಿರಸಿಕರ ಮನಗೆದ್ದ ರಾಶಿ ಇದುವರೆಗೆ ತೆಲುಗು ಮತ್ತು ತಮಿಳು ಸಿನಿಮಾ ರಂಗದಲ್ಲಿ ಸುಮಾರು 15 ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಈ ಸಹಜ ನಗುವಿನ ಸುಂದರಿ ಇತ್ತೀಚೆಗೆ ತಾನು ಮದುವೆ ಆಗಲು ಬಯಸಿರುವ ರಾಜಕುಮಾರನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

  ಕಿಚ್ಚನ ನಾಯಕಿಯ ವಿಚ್ಛೇದನದ ಬದುಕು ಮತ್ತು ಸಿನಿಮಾ ಪಯಣಕಿಚ್ಚನ ನಾಯಕಿಯ ವಿಚ್ಛೇದನದ ಬದುಕು ಮತ್ತು ಸಿನಿಮಾ ಪಯಣ

  ಆಧ್ಯಾತ್ಮ ಜೀವಿಯಾಗಿರಬೇಕು

  ಒಂದು ಕಾಲದಲ್ಲಿ ದಷ್ಟಪುಷ್ಟವಾಗಿ ಮೈ ತುಂಬಿಕೊಂಡಿದ್ದ ರಾಶಿ, ಈಗ ಸಣ್ಣಗೆ ಬಳುಕುವ ಬಳ್ಳಿಯಂತೆ ಆಗಿದ್ದಾಳೆ. ಈ ಸಹಜ ಸೌಂದರ್ಯದ ನಿಧಿಗೆ ಗಂಡನಾಗುವ ವ್ಯಕ್ತಿ ಹೇಗಿರಬೇಕೆಂಬ ಪ್ರಶ್ನೆಗೆ ಆಕೆಯ ಉತ್ತರ 'ನನ್ನನ್ನು ಮದುವೆಯಾಗುವ ವ್ಯಕ್ತಿ ದೊಡ್ಡ ಬಿಸಿನೆಸ್ ಮ್ಯಾನ್ ಆಗಬೇಕಾಗಿಲ್ಲ, ನಾಯಕ ನಟನಾಗಿರಬೇಕಿಲ್ಲ, ಬದಲಾಗಿ ಒಳ್ಳೆ ಆಧ್ಯಾತ್ಮಿಕ ಜೀವಿಯಾಗಿರಬೇಕು. ದೇವರಲ್ಲಿ ವಿಶೇಷವಾದ ಭಕ್ತಿ ಇರಬೇಕು. ದೇವರಲ್ಲಿ ಭಕ್ತಿ ಇರುವ ವ್ಯಕ್ತಿ ಜೀವನದಲ್ಲಿ ಖಂಡಿತ ಮತ್ತೊಬ್ಬರಿಗೆ ಕೇಡು ಬಯಸುವುದಿಲ್ಲ' ಅಂತ ಮನಬಿಚ್ಚಿ ಮಾತನಾಡಿದ್ದೆ ತಡ ಟಾಲಿವುಡ್ ಮಂದಿ ಇವಳನ್ನು ವರಿಸುವ ಅದೃಷ್ಟವಂತ ಯಾರು ಇರಬಹುದು ಅಂತ ತಲೆಕೆಡಿಸಿಕೊಳ್ಳುತ್ತಿದ್ದಾರೆ.

  ಸದ್ಯಕ್ಕೆ ತೆಲುಗು ಮತ್ತು ತಮಿಳಿನಲ್ಲಿ ಒಂಬತ್ತು ಚಿತ್ರಗಳಲ್ಲಿ ಬಿಜಿಯಾಗಿದ್ದು ಅವಳ ಕನಸಿನ ರಾಜಕುಮಾರನ ಜೊತೆ ಯಾವಾಗ ವಿವಾಹವಾಗುತ್ತಾರೆ ಅಂತ ಕಾದುನೋಡಬೇಕಿದೆ.

  English summary
  South indian famous actress Rashi Khanna opens up about her dream boy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X