For Quick Alerts
  ALLOW NOTIFICATIONS  
  For Daily Alerts

  ನಟಿ ಸಮಂತಾ ಹಾಕಿದ ಸವಾಲು ಸ್ವೀಕರಿಸಿದ ಕಿರಿಕ್ ಸುಂದರಿ ರಶ್ಮಿಕಾ ಮಂದಣ್ಣ

  By ಫಿಲ್ಮ್ ಡೆಸ್ಕ್
  |

  ಸೆಲೆಬ್ರಿಟಿಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಸವಾಲು ಹಾಕುತ್ತಿರುತ್ತಾರೆ. ಫಿಟ್ ನೆಸ್ ಚಾಲೆಂಜ್, ಬಾಟೆಲ್ ಕ್ಯಾಪ್ ಓಪನ್ ಚಾಲೆಂಜ್, ಮನೆ ಸ್ವಚ್ಛ ಮಾಡುವ ಚಾಲೆಂಜ್ ಹೀಗೆ ವಿವಿದ ಸವಾಲುಗಳನ್ನು ಸ್ವೀಕರಿಸುವಂತೆ ಸಹ ಕಲಾವಿದರಿಗೆ ಚಾಲೆಂಜ್ ಮಾಡುತ್ತಾರೆ. ಸವಾಲುಗಳ ವಿಡಿಯೋಗಳು ವೈರಲ್ ಆಗಿರುವುದನ್ನು ನೋಡಿರುತ್ತೀರಿ.

  KGF ಎಡಿಟರ್ ನಮ್ಮ ಸಿನಿಮಾ ಎಡಿಟ್ ಮಾಡಿದ್ರು | Raghu Samarth | Filmibeat Kannada

  ಇದೀಗ ಗ್ರೀನ್ ಇಂಡಿಯ ಚಾಲೆಂಜ್ ಟ್ರೆಂಡಿಂಗ್ ನಲ್ಲಿದೆ. ನಟಿ ಸಮಂತಾ ಸವಾಲು ಸ್ವೀಕರಿಸಿ ಮೂವರು ಸೆಲೆಬ್ರಿಟಿಗಳಿಗೆ ದಾಟಿಸಿದ್ದಾರೆ. ಗ್ರೀನ್ ಇಂಡಿಯಾ ಚಾಲೆಂಜ್ ಅಂದರೆ ಗಿಡನೆಡುವ ಸವಾಲು. ಸಮಂತಾ ಇತ್ತೀಚಿಗೆ ಮಾವ ನಾಗಾರ್ಜುನ ಜೊತೆಗೂಡಿ ಮನೆಯ ಅಂಗಳದಲ್ಲಿ ಗಿಡ ನೆಟ್ಟಿದ್ದಾರೆ. ಸಮಂತಾ ಅವರಿಗೆ ಹರಹಾಯ್ ಎಂಬುವವರು ಈ ಚಾಲೆಂಜ್ ಮಾಡಿದ್ದರು. ಸಮಂತಾ ಚಾಲೆಂಜ್ ಸ್ವೀಕಾರ ಮಾಡಿ ಗಿಡನೆಟ್ಟಿದ್ದಾರೆ. ಮುಂದೆ ಓದಿ...

  ಸಮಂತಾ ಅಂದ್ರೆ ಇಷ್ಟ ಎಂದ ಅರ್ಜುನ್ ಕಪೂರ್ ಗೆ ನಾಗಚೈತನ್ಯ ಪತ್ನಿ ಹೇಳಿದ್ದೇನು?ಸಮಂತಾ ಅಂದ್ರೆ ಇಷ್ಟ ಎಂದ ಅರ್ಜುನ್ ಕಪೂರ್ ಗೆ ನಾಗಚೈತನ್ಯ ಪತ್ನಿ ಹೇಳಿದ್ದೇನು?

  ಮಾವನ ಜೊತೆ ಗಿಡನೆಡುತ್ತಿರುವ ಸಮಂತಾ

  ಮಾವನ ಜೊತೆ ಗಿಡನೆಡುತ್ತಿರುವ ಸಮಂತಾ

  ಸಮಂತಾ ಈ ಸವಾಲು ಸ್ವೀಕರಿಸಿ ಮೂರು ಸಸಿಗಳನ್ನು ನೆಟ್ಟಿದ್ದಾರೆ. ಗಿಡನೆಡುತ್ತಿರುವ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಾವ ಸೊಸೆ ಇಬ್ಬರು ಗಿಡ ನೆಡುತ್ತಿರುವ ಫೋಟೋಗೆ ಅಭಿಮಾನಿಗಳಿಂದ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ವಿಶೇಷ ಅಂದರೆ ಸಮಂತಾ ಈ ಚಾಲೆಂಜ್ ಅನ್ನು ಮೂವರಿಗೆ ದಾಡಿಸಿದ್ದಾರೆ. ರಶ್ಮಿಕಾ ಮಂದಣ್ಣ, ಕೀರ್ತಿ ಸುರೇಶ್ ಮತ್ತು ಸೆಲೆಬ್ರಿಟಿ ಡಿಸೈನರ್ ಶಿಲ್ಪಾ ರೆಡ್ಡಿಗೆ ಸವಾಲು ಸ್ವೀಕರಿಸುವಂತೆ ಹೇಳಿದ್ದಾರೆ.

  ವರ್ಷದ ಹಿಂದೆ ಮಾಡಿದ ತಪ್ಪಿಗೆ ನಿರ್ದೇಶಕಿಯ ಕ್ಷಮೆ ಕೋರಿದ ಸಮಂತಾವರ್ಷದ ಹಿಂದೆ ಮಾಡಿದ ತಪ್ಪಿಗೆ ನಿರ್ದೇಶಕಿಯ ಕ್ಷಮೆ ಕೋರಿದ ಸಮಂತಾ

  ಸಮಂತಾ ಟೆರೇಸ್ ಗಾರ್ಡನಿಂಗ್

  ಸಮಂತಾ ಟೆರೇಸ್ ಗಾರ್ಡನಿಂಗ್

  ನಟಿ ಸಮಂತಾ ಲಾಕ್ ಡೌನ್ ನಲ್ಲಿ ಮನೆಯಲ್ಲಿಯೆ ಕಾಲಕಳೆಯುತ್ತಿದ್ದಾರೆ. ಈ ಸಮಯದಲ್ಲಿ ಅನೇಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಅಡುಗೆ ಕಲಿಯುವುದು, ಟೆರೇಸ್ ಗಾರ್ಡನಿಂಗ್, ಯೋಗ ಮುಂತಾದ ಚಟುವಟಿಕೆಯಲ್ಲಿ ಬ್ಯುಸಿಯಾಗಿದ್ದಾರೆ. ತಾವೆ ಬೆಳೆದ ತರಕಾರಿಗಳಿಂದ ರುಚಿಕರವಾದ ಖಾದ್ಯಗಳನ್ನು ತಯಾರಿಸುತ್ತಿರುತ್ತಾರೆ. ಆಗಾಗ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

  ಸವಾಲು ಸ್ವೀಕರಿಸಿದ ರಶ್ಮಿಕಾ

  ಸವಾಲು ಸ್ವೀಕರಿಸಿದ ರಶ್ಮಿಕಾ

  ಸಮಂತಾ ಎಸೆದಿರುವ ಚಾಲೆಂಜ್ ಸ್ವೀಕರಿಸಿರುವ ನಟಿ ರಶ್ಮಿಕಾ ಮನೆಯ ಅಂಗಳದಲ್ಲಿ 3 ಸಸಿಗಳನ್ನು ನೆಟ್ಟಿದ್ದಾರೆ. ಗಿಡನೆಡುತ್ತಿರುವ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಸಮಂತಾ ಹಾಕಿರುವ ಸವಾಲನ್ನು ಸ್ವೀಕಾರ ಮಾಡಿದ್ದೇನೆ. ಎಂದು ಮತ್ತೆ ಮೂವರಿಗೆ ದಾಟಿಸಿದ್ದಾರೆ. ನಟಿ ರಾಸಿ ಖನ್ನಾ, ಕಲ್ಯಾಣಿ ಪ್ರಿಯದರ್ಶನ್ ಮತ್ತು ಆಶಿಕಾ ರಂಗನಾಥ್ ಅವರಿಗೆ ಚಾಲೆಂಜ್ ಮಾಡಿದ್ದಾರೆ. ಎಲ್ಲಾ ಅಭಿಮಾನಿಗಳಿಗೂ ಗಿಡನೆಡುವಂತೆ ಹೇಳಿದ್ದಾರೆ.

  ಗ್ರೀನ್ ಇಂಡಿಯಾ ಚಾಲೆಂಜ್ ಪ್ರಾರಂಭವಾಗಿದ್ದೆಲ್ಲಿ?

  ಗ್ರೀನ್ ಇಂಡಿಯಾ ಚಾಲೆಂಜ್ ಪ್ರಾರಂಭವಾಗಿದ್ದೆಲ್ಲಿ?

  ಗ್ರೀನ್ ಇಂಡಿಯಾ ಅಭಿಯಾನ ತೆಲಂಗಾಣ ಸಂಸದ ಸಂತೋಷ್ ಕುಮಾರ್ ಆರಂಭಿಸಿದ್ದಾರೆ. ಈ ಚಾಲೆಂಜ್ ಸ್ವೀಕರಿಸುವವರು ಮನೆ ಸುತ್ತ ಯಾವುದಾದರು ಪ್ರದೇಶದಲ್ಲಿ 3 ಗಿಡಗಳನ್ನು ನೆಟ್ಟು ಬೆಳೆಸಬೇಕು. ಗಿಡ ನೆಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಇನ್ನೂ ಮೂವರಿಗೆ ಸವಾಲು ಹಾಕಬೇಕು. ಈಗಾಗಲೆ ಈ ಸವಾಲನ್ನು ನಟ ಪ್ರಭಾಸ್, ಸಾಯಿ ಪಲ್ಲಿ, ಕಾರ್ತಿಕ್ ಆರ್ಯನ್ ಸೇರಿದ್ದಂತೆ ಅನೇಕರು ಸ್ವೀಕರಿಸಿದ್ದಾರೆ.

  English summary
  Actress Rashmika Mandanna Accept Samantha's Green India challenge. Rashmika Plants 3 saplings in her garden.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X