"ನೀನು ನನ್ನ ಫ್ಯಾಮಿಲಿ ಕಣೋ.. ಯಾಕೋ ಹಿಂಗೆ ತಗ್ಲಾಕ್ತೀಯಾ? ನನ್ನ ಫೇವರಿಟ್ ರೌಡಿ"

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ತೆಲುಗು, ಹಿಂದಿ ಹಾಗೂ ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ವಿಜಯ್‌ ದೇವರಕೊಂಡ ಜೊತೆಗಿನ ಡೇಟಿಂಗ್ ವದಂತಿ ಬಗ್ಗೆ ಕೂಡ ತಲೆ ಕೆಡಿಸಿಕೊಳ್ಳುತ್ತಿಲ್ಲ. ತಾನಾಯ್ತು ತನ್ನ ಕೆಲಸವಾಯ್ತು ಎಂದು ಸುಮ್ಮನಿದ್ದಾರೆ. ದೇವರಕೊಂಡ ಫ್ಯಾಮಿಲಿಗೆ ಬಹಳ ಹತ್ತಿರವಾಗಿಬಿಟ್ಟಿದ್ದಾರೆ.

ರಶ್ಮಿಕಾ ಇತ್ತೀಚೆಗೆ ಹುಟ್ಟೂರಿಗೆ ಬರೋದು ಕಮ್ಮಿ ಆಗಿಬಿಟ್ಟಿದೆ. ಮುಂಬೈ, ಹೈದರಾಬಾದ್‌ನಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ. ಇನ್ನು ದೇವರಕೊಂಡ ಫ್ಯಾಮಿಲಿ ಜೊತೆ ಸೇರಿ ಹಬ್ಬ ಹರಿದಿನಗಳಲ್ಲಿ ಭಾಗಿ ಆಗುತ್ತಾರೆ. ನಾನು- ವಿಜಯ್ ಕ್ಲೋಸ್ ಫ್ರೆಂಡ್ ಎಂದು ಹೇಳುತ್ತಿದ್ದಾರೆ. ಇನ್ನು ವಿಜಯ್ ಸಹೋದರ ಆನಂದ್ ದೇವರಕೊಂಡ ಸಿನಿಮಾಗಳಿಗೂ ಬೆಂಬಲವಾಗಿ ನಿಲ್ಲುತ್ತಾರೆ.

Rashmika Mandanna and anand Devarakonda funny conversation goes viral

ಆನಂದ್ ದೇವರಕೊಂಡ ಹೊಸ ಚಿತ್ರ 'ಗಂ ಗಂ ಗಣೇಶ' ಪ್ರೀ ರಿಲೀಸ್ ಕಾರ್ಯಕ್ರಮ ಸೋಮವಾರ(ಮೇ 27) ರಾತ್ರಿ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ರಶ್ಮಿಕಾ ಮಂದಣ್ಣ ಅತಿಥಿಯಾಗಿ ಹೋಗಿದ್ದರು. ಇನ್ನು ಈ ವೇಳೆ ಆನಂದ್ ಕೆಲ ಇಂಟ್ರೆಸ್ಟಿಂಗ್ ಪ್ರಶ್ನೆಗಳನ್ನು ರಶ್ಮಿಕಾ ಮುಂದೆ ಇಟ್ಟರು. ಈ ವೇಳೆ ನಿಮ್ಮ ಫೇವರಿಟ್ ನಟ ಯಾರು ಎಂದು ಕೇಳಿದಾಗ ರಶ್ಮಿಕಾ ಉತ್ತರಿಸಲು ಹಿಂದು ಮುಂದು ನೋಡುತ್ತಿದ್ದರು.

ಅಭಿಮಾನಿಗಳು ರೌಡಿ.. ರೌಡಿ.. ರೌಡಿ(ವಿಜಯ್‌ ದೇರವಕೊಂಡ) ಕೂಗಲು ಆರಂಭಿಸಿದರು. ಆಗ ರಶ್ಮಿಕಾ "ನೀನು ನನ್ನ ಫ್ಯಾಮಿಲಿ ಕಣೋ ಆನಂದ್.. ಯಾಕೋ ಹಿಂಗೆ ತಗ್ಲಾಕ್ತೀಯಾ? ಸರಿ ಬಿಡಪ್ಪಾ ನನ್ನ ಫೇವರಿಟ್ ಹೀರೊ ರೌಡಿನೇ ಎಂದಿದ್ದಾರೆ. ಚಿಕ್ಕ ರೌಡಿ(ಆನಂದ್ ದೇವರಕೊಂಡ) ಅಂತ ಕೂಡ ಹೇಳಬಹುದು ಎಂದು ಹೇಳಿದ್ದಾರೆ. ಹೌದು ಚಿಕ್ಕ ರೌಡಿ ಕೂಡ ಎಂದು ನಕ್ಕಿದ್ದಾರೆ.

ಸದ್ಯ ರಶ್ಮಿಕಾ ಹಾಗೂ ಆನಂದ್ ದೇವರಕೊಂಡ ಕ್ಯೂಟ್ ಸಂಭಾಷಣೆಯ ವೀಡಿಯೋ ವೈರಲ್ ಆಗುತ್ತಿದೆ. ವಿಜಯ್-ರಶ್ಮಿಕಾ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ವದಂತಿ ಪದೇ ಪದೇ ಕೇಳಿಬರ್ತಿದೆ. ಈ ವಿಡಿಯೋ ನೋಡಿ ಆ ಸುದ್ದಿ ಮತ್ತಷ್ಟು ಸದ್ದು ಮಾಡ್ತಿದೆ. ಆನಂದ್ ದೇವರಕೊಂಡ ನಟನೆಯ 'ಬೇಬಿ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಸಿನಿಮಾ ನಿರ್ದೇಶಕರು, ನಿರ್ಮಾಪಕರು ಕಾರ್ಯಕ್ರಮಕ್ಕೆ ಬಂದಿದ್ದರು.

Rashmika Mandanna and anand Devarakonda funny conversation goes viral

ವೇದಿಕೆ ಏರಿ ಮಾತನಾಡಿದ ರಶ್ಮಿಕಾ 'ಬೇಬಿ' ಚಿತ್ರತಂಡದ ಬಗ್ಗೆ ಮೆಚ್ಚಿಗೆ ಮಾತುಗಳನ್ನಾಡಿದರು. "ಸಾಯಿ ರಾಜೇಶ್ ನಿಮ್ಮ 'ಬೇಬಿ' ಸಿನಿಮಾ ನೋಡಿದ್ದೇನೆ. ನಾನು ಕೆಲಸ ಮಾಡಲು ಇಷ್ಟಪಡುವ ನಿರ್ದೇಶಕರಲ್ಲಿ ನೀವೂ ಒಬ್ಬರು. ನಿಮ್ಮ ನಿರ್ದೇಶನ ಮತ್ತು ಸಮರ್ಪಣೆ ಭಾವ ನನಗೆ ತುಂಬಾ ಇಷ್ಟ. ಫಸ್ಟ್ ಟೈಮ್ ಬೇಬಿ ಸಿನಿಮಾ ನೋಡುವಾಗ ನನಗೂ ಅಳು ಬಂತು. ಒಬ್ಬ ನಟಿಯಾಗಿ ನಿಮ್ಮೊಂದಿಗೆ ಕೆಲಸ ಮಾಡಬೇಕು ಎಂದು ನನಗೂ ಅನಿಸಿತು. ನಿಮ್ಮೊಟ್ಟಿಗೆ ಕೆಲಸ ಮಾಡಬೇಕು, ಒಂದು ಮೆಂಟಲ್ ಕ್ಯಾರೆಕ್ಟರ್ ಮಾಡಬೇಕು ಅನ್ನಿಸಿತು" ಎಂದಿದ್ದಾರೆ.

ರಶ್ಮಿಕಾ ಮಂದಣ್ಣ ಸಿನಿಮಾಗಳ ವಿಚಾರಕ್ಕೆ ಬಂದರೆ 'ಪುಷ್ಪ'-2 ನಿರೀಕ್ಷೆ ಮೂಡಿಸಿದೆ. ಶೀಘ್ರದಲ್ಲೇ ಚಿತ್ರದ ಮತ್ತೊಂದು ಹಾಡು ಬಿಡುಗಡೆಗೆ ಸಜ್ಜಾಗಿದೆ. ಈ ಬಾರಿ 'ಸಾಮಿ ಸಾಮಿ' ಹೊಸ ವರ್ಷನ್ ಬರಲಿದೆ. ಇನ್ನು 'ಅನಿಮಲ್' ಬಳಿಕ ಬಾಲಿವುಡ್‌ನಲ್ಲಿ ಕೂಡ ರೋಶ್ ಕ್ರೇಜ್ ಹೆಚ್ಚಾಗಿದೆ. ಸಲ್ಮಾನ್ ಖಾನ್ ಜೊತೆ 'ಸಿಖಂದರ್' ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ.

'ದಿ ಗರ್ಲ್‌ಫ್ರೆಂಡ್' ಹಾಗೂ 'ರೈನ್‌ಬೋ' ಎನ್ನುವ ಮಹಿಳಾ ಪ್ರಧಾನ ಸಿನಿಮಾಗಳು ಆಕೆಯ ಕೈಯಲ್ಲಿವೆ. ತಮಿಳಿನಲ್ಲಿ 'ಕುಬೇರ' ಚಿತ್ರಕ್ಕೆ ಧನುಷ್ ಜೊತೆಯಾಗಿದ್ದಾರೆ. ಪ್ರಶಾಂತ್ ನೀಲ್ ಹಾಗೂ ಜ್ಯೂ. ಎನ್‌ಟಿಆರ್ ಕಾಂಬಿನೇಷನ್‌ ಚಿತ್ರಕ್ಕೂ ಕೊಡಗಿನ ಕುವರಿ ನಾಯಕಿ ಎನ್ನುವ ಗುಸುಗುಸು ಕೇಳಿಬರ್ತಿದೆ.

More from Filmibeat

English summary
Rashmika Mandanna says her favorite co-star Rowdy boy;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X