ರಶ್ಮಿಕಾ ಮಂದಣ್ಣ ಅಭಿನಯದ ಮತ್ತೊಂದು ತೆಲುಗು ಚಿತ್ರ ರಿಲೀಸ್‌ಗೆ ಸಿದ್ಧ!
ನಟಿ ರಶ್ಮಿಕಾ ಮಂದಣ್ಣ ಅವರ ಬ್ಯಾಕ್, ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಪುಷ್ಪ ಸಿನಿಮಾದ ಬಳಿಕ ರಶ್ಮಿಕಾ ಅವರ ಮುಂದಿನ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಪುಷ್ಪ ಸಕ್ಸಸ್ ಬಳಿಕ ಮತ್ತೊಂದು ಸಕ್ಸಸ್ ಕಾಣೋಕೆ ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಶರ್ವಾನಂದ್ ಜೊತೆಗೆ ಬಣ್ಣ ಹಚ್ಚಿದ್ದಾರೆ.
Recommended Video
ಸಿನಿಮಾದಿಂದ ಸಿನಿಮಾಗೆ ರಶ್ಮಿಕಾ ಲುಕ್ ಮತ್ತು ಪಾತ್ರದ ನಡುವೆ ಭಿನ್ನತೆ ಕಾಣುತ್ತದೆ. "ಆಡವಾಳ್ಳು ಮೀಕು ಜೋಹರ್ಲು" ಚಿತ್ರದಲ್ಲಿ ರಶ್ಮಿಕಾ ಆಫೀಸ್ ಕೆಲಸಕ್ಕೆ ಹೋಗುವ ಸಿಟಿ ಹುಡುಗಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರ ಟೀಸರ್, ಹಾಡುಗಳು ಸದ್ದು ಮಾಡುತ್ತಿವೆ.
ರಶ್ಮಿಕಾ ಮಂದಣ್ಣ ಅವರ ಸಿನಿಮಾ ಇನ್ನೂ ಕೂಡ ಚಿತ್ರಮಂದಿರಗಳಲ್ಲಿ ಇದೆ. ಅದಾಗಲೇ ಮತ್ತೊಂದು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. "ಆಡವಾಳ್ಳು ಮೀಕು ಜೋಹರ್ಲು" ಸಿನಿಮಾ ಫೆಬ್ರವರಿ 25 ರಂದು ತೆರೆಗೆ ಬರಲಿದೆ.

ಹೀರೋ ಶರ್ವಾನಂದ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಈ ಚಿತ್ರ ಔಟ್ ಮತ್ತು ಔಟ್ ಫ್ಯಾಮಿಲಿ ಎಂಟರ್ಟೈನರ್. ತಿರುಮಲ ಕಿಶೋರ್ ನಿರ್ದೇಶನ ಚಿತ್ರಕ್ಕಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯಕ್ಕೆ ಚಿತ್ರ ತಂಡ ಮುಂದಾಗಿದೆ. ಫೆಬ್ರವರಿ 10 ರಂದು "ಆಡವಾಳ್ಳು ಮೀಕು ಜೋಹರ್ಲು" ಚಿತ್ರದ ಟೀಸರ್ ಬಿಡುಗಡೆ ಆಗಲಿದೆ. ಶರ್ವಾನಂದ್ ಮತ್ತು ರಶ್ಮಿಕಾ ದೇವಸ್ಥಾನದಿಂದ ಹೊರಬರುತ್ತಿರುವ ಪೋಸ್ಟರ್ ಹಂಚಿಕೊಂಡು ಚಿತ್ರತಂಡ ಟೀಸರ್ ರಿಲೀಸ್ ದಿನಾಂಕ ಪ್ರಕಟ ಮಾಡಿದೆ.
ಇನ್ನು ಚಿತ್ರದಲ್ಲಿ ನಟಿ ಖುಷ್ಬು, ರಾಧಿಕಾ ಶರತ್‌ಕುಮಾರ್ ಮತ್ತು ಊರ್ವಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಮೂವರು ಹಿರಿಯ ನಾಯಕಿಯರು ಮಹಿಳೆಯರ ಪ್ರಾಮುಖ್ಯತೆ ಸಾರುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ರಶ್ಮಿಕಾ, ಶರ್ವಾನಂದ್ ಇಬ್ಬರ ಪ್ರೇಮ್ ಕಹಾನಿ ಇರಲಿದೆ.
ಸದ್ಯ ರಶ್ಮಿಕಾ ಅಭಿಮಾನಿಗಳು ಅವರ ಮುಂದಿನ ಚಿತ್ರಕ್ಕಾಗಿ ಕಾಯುತ್ತಿದ್ದು, ಪುಷ್ಪ ಸಕ್ಸಸ್ ರಶ್ಮಿಕಾಳ ಮುಂದಿನ ಜರ್ನಿಗೆ ಹೇಗೆ ಸಹಾಯಕ ಆಗಲಿದೆ ಎನ್ನುವುದನ್ನು ನೋಡಬೇಕಿದೆ. ಇನ್ನೂ ಈ ಚಿತ್ರ ರಿಲೀಸ್ ಆದ ಬಳಿಕ, ರಶ್ಮಿಕಾಳ ಬಾಲಿವುಡ್ ಸಿನಿಮಾಗಳು ರಿಲೀಸ್‌ಗೆ ಸಿದ್ಧ ಆಗಲಿವೆ. ನಂತರ ರಶ್ಮಿಕ ಪುಷ್ಪ 2 ಚಿತ್ರದಲ್ಲಿ ಬ್ಯುಸಿ ಆಗಲಿದ್ದಾರೆ. ಒಟ್ಟಾರೆ ರಶ್ಮಿಕಾ ಬ್ರೇಕ್ ತೆಗೆದುಕೊಳ್ಳದೆ ಸಾಲು, ಸಾಲಾಗಿ ಸಿನಿಮಾಗಳನ್ನು ಒಪ್ಪಿಕೊಂಡು ಅಭಿನಯಿಸುತ್ತಿದ್ದಾರೆ.


Click it and Unblock the Notifications











