For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು ತೆಲುಗು ಸಿನಿಮಾಗೆ ಸಹಿ ಮಾಡಿದ ರಶ್ಮಿಕಾ: ಮುಹೂರ್ತ ಫೋಟೋ ವೈರಲ್

  |

  ಟಾಲಿವುಡ್ ನಲ್ಲಿ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ನಟ ರಶ್ಮಿಕಾ ಮಂದಣ್ಣ ಇದೀಗ ಮತ್ತೊಂದು ತೆಲುಗು ಸಿನಿಮಾಗೆ ಸಹಿ ಮಾಡಿದ್ದಾರೆ. ತೆಲುಗಿನ ಖ್ಯಾತ ನಟ ಶರ್ವಾನಂದ್ ಅಭಿನಯದ ಹೊಸ ಸಿನಿಮಾಗೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಸಿನಿಮಾದ ಮುಹೂರ್ತ ನೆರವೇರಿದ್ದು, ರಶ್ಮಿಕಾ ಒಂದಿಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  ಶರ್ವಾನಂದ್ ಮತ್ತು ರಶ್ಮಿಕಾ ಅಭಿನಯದ ಹೊಸ ಸಿನಿಮಾದ ಹೆಸರು 'ಆಡಲ್ಲೋ ಮೀಕು ಜೊಹಾರ್ಲು'. ಈ ಸಿನಿಮಾದ ಮುಹೂರ್ತ ತಿರುಪತಿಯಲ್ಲಿ ನೆರವೇರಿದೆ. ದಸರಾ ಪ್ರಯುಕ್ತ ಸಿನಿಮಾದ ಮುಹೂರ್ತ ಮಾಡಿ ಮುಗಿಸಿದ್ದು, ಚಿತ್ರಕ್ಕೆ ಕಿಶೋರ್ ತಿರುಮಲ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಸಾಯಿ ಪಲ್ಲವಿ ರಿಜೆಕ್ಟ್ ಮಾಡಿದ ಚಿತ್ರಕ್ಕೆ ರಶ್ಮಿಕಾ ನಾಯಕಿ: ಯಾವ ಸಿನಿಮಾ?

  ಅಂದ್ಹಾಗೆ ಈ ಸಿನಿಮಾಗೆ ಮೊದಲು ನಟಿ ಸಾಯಿ ಪಲ್ಲವಿ ಆಯ್ಕೆಯಾಗಿದ್ದರು. ಶರ್ವಾನಂದ್ ಜೊತೆ ಪ್ರೇಮಂ ಸುಂದರಿ ನಟಿಸುವುದು ಬಹುತೇಕ ಖಚಿತವಾಗಿತ್ತು. ಆದರೆ ಕೊನೆಕ್ಷಣದಲ್ಲಿ ಸಾಯಿ ಪಲ್ಲವಿ ಸಿನಿಮಾದಿಂದ ಹೊರನಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಸಾಯಿ ಪಲ್ಲವಿ ಜಾಗಕ್ಕೆ ನಟಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದಾರೆ.

  Shashi Kumar ಮಗನಿಗೆ ಸಾಥ್ ಕೊಟ್ಟ ಉಪೇಂದ್ರ | Filmibeat Kannada

  ಮೊದಲ ಬಾರಿಗೆ ರಶ್ಮಿಕಾ ಶರ್ವಾನಂದ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಹುನಿರೀಕ್ಷೆಯ ಸಿನಿಮಾದ ಚಿತ್ರೀಕರಣ ಮುಂದಿನ ವರ್ಷ ಪ್ರಾರಂಭವಾಗಲಿದ್ದು, ವರ್ಷದ ಕೊನೆಯಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ಅಂದ್ಹಾಗೆ ರಶ್ಮಿಕಾ ಸದ್ಯ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಶರ್ವಾನಂದ್ ಬಳಿಯೂ ಎರಡೂ ಸಿನಿಮಾಗಳಿವೆ. ಈ ಎಲ್ಲಾ ಸಿನಿಮಾ ಕೆಲಸಗಳು ಪೂರ್ಣಗೊಂಡ ಬಳಿಕ ಹೊಸ ಸಿನಿಮಾದಲ್ಲಿ ಇಬ್ಬರೂ ಬ್ಯುಸಿಯಾಗಲಿದ್ದಾರೆ.

  English summary
  Rashmika Mandanna and Sharwanand new movie Muhurtha held in Tirupati at the occasion of Dasara.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X