ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಲವ್ ಸ್ಟೋರಿಗೆ ಸಿಕ್ತು ಸಾಕ್ಷಿ ? ವಿಡಿಯೋ ವೈರಲ್...!
2024 ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಹಿನ್ನೆಲೆ ಎಲ್ಲೆಡೆ ಸಂಭ್ರಮದ ವಾತಾವರಣ ಮನೆ ಮಾಡಿದೆ. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಈಗಾಗಲೇ ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಅನೇಕರು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಕ್ರಿಸ್ಮಸ್ ಹಬ್ಬವನ್ನೂ ಆಚರಿಸಿ ಹೊಸ ವರ್ಷಕ್ಕೆ ಪಾರ್ಟಿ ಮಾಡಲು ಅಣಿಯಾಗುತ್ತಿದ್ದಾರೆ.ಇನ್ನು ಪ್ರೀತಿ-ಪ್ರೇಮದ ಅಮಲನ್ನೇರಿಸಿಕೊಂಡವರು ಸಪ್ತಸಾಗರದಾಚೆ ತೆರಳುತ್ತಿದ್ದಾರೆ. ಜೊತೆಯಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಸಾಲಿನಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇದ್ದಾರೆ ಎನ್ನುವುದೇ ಸದ್ಯದ ನ್ಯೂಸು.
ಹೌದು, ಕಳೆದ ಕೆಲ ದಿನಗಳಿಂದ ಅಲ್ಲ ಅನೇಕ ವರ್ಷಗಳಿಂದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಸಂಬಂಧದ ಬಗ್ಗೆ ಅನೇಕರಿಗೆ ಅನುಮಾನ ಇದೆ. ಈ ಕುರಿತು ಕಾಲ ಕಾಲಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಾನೇ ಇದೆ.

ಇನ್ನು, ಇತ್ತೀಚಿನ ದಿನಗಳಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಪ್ರೀತಿಯ ವಿಚಾರವನ್ನು ಅಧಿಕೃತವಾಗಿ ಹೇಳಿಕೊಳ್ಳದಿದ್ದರೂ ಕೂಡ ಅಡ್ಡ ಗೋಡೆಯ ಮೇಲೆ ದೀಪ ಇಡುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಹೇಳದೇ, ನಿಜಾ ಎಂದು ಒಪ್ಪಿಕೊಳ್ಳದೇ, ಎಲ್ಲ ವಿಚಾರ ಎಲ್ಲರಿಗೆ ಗೊತ್ತು ಎನ್ನುತ್ತಿದ್ದಾರೆ. ಸಂಬಂಧದ ಕುರಿತು ಪ್ರಶ್ನೆ ಕೇಳಿದಾಗ ನಸು ನಕ್ಕು ನಾಚಿಕೊಳ್ಳುತ್ತಿದ್ಧಾರೆ. ಈ ಕಾರಣಕ್ಕೆ ಖ್ಯಾತಿಯ ತುತ್ತ ತುದಿಯನ್ನು ತಲುಪಿರುವ ರಶ್ಮಿಕಾ ಮಂದಣ್ಣ, ಮುಂದಿನ ವರ್ಷ ವಿಜಯ್ ದೇವರಕೊಂಡ ಜೊತೆ ಮದ್ವೆಯಾಗಲಿದ್ದಾರೆ ಎನ್ನುವ ಪುಕಾರು ಹಬ್ಬಿದೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದ್ವೆ ಮಾಡಿಸಲು ತೆಲುಗು ಮತ್ತು ಹಿಂದಿ ಮಾಧ್ಯಮಗಳು ಕೂಡ ತುದಿಗಾಲಿನಲ್ಲಿ ನಿಂತಿವೆ.
ಹೀಗಿರುವಾಗ ಇದೀಗ ರಶ್ಮಿಕಾ ಮಂದಣ್ಣ ಮುಂಬೈನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದರೆ ರಶ್ಮಿಕಾ ಮಂದಣ್ಣ ಹಿಂದೆ ಹಿಂದೆಯೇ ವಿಜಯ್ ದೇವರಕೊಂಡ ಕೂಡ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ. ಹೀಗಾಗಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇಬ್ಬರು ಜೊತೆಯಲ್ಲಿ ಪ್ರವಾಸಕ್ಕೆ ತೆರಳಿದ್ದಾರೆ ಎಂದು ಎಲ್ಲರು ಅಂದುಕೊಂಡಿದ್ದಾರೆ. ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಇಬ್ಬರು ವಿದೇಶಕ್ಕೆ ತೆರಳಿರಬಹುದು ಎಂದು ಚರ್ಚೆಯನ್ನು ಮಾಡುತ್ತಿದ್ದಾರೆ.
ಅಂದ್ಹಾಗೇ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೊತೆಯಾಗಿ ಪ್ರವಾಸಕ್ಕೆ ತೆರಳುತ್ತಿರುವುದು ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಕೂಡ ಅನೇಕ ಬಾರಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೊತೆಯಾಗಿ ಪ್ರವಾಸಕ್ಕೆ ತೆರಳಿದ್ದಾರೆ. ಮಾಲ್ಡೀವ್ಸ್‌ದಿಂದ ಗೋವಾದವರೆಗೆ ಒಟ್ಟಿಗೆ ಸುತ್ತಾಡಿದ್ದಾರೆ. ತಮ್ಮ ಈ ಪ್ರವಾಸದ ಫೋಟೊಗಳನ್ನು ಜೊತೆಯಾಗಿ ಇಬ್ಹಂಬರು ಚಿಕೊಳ್ಳದಿದ್ದರೂ ಪ್ರತೈಕವಾಗಿ ಫೋಟೊಗಳನ್ನು ಹಂಚಿಕೊಳ್ಳುವುದರ ಮೂಲಕ ಅಭಿಮಾನಿಗಳಲ್ಲಿರುವ ಅನುಮಾನವನ್ನು ಹೆಚ್ಚಿಸುತ್ತಾ ಬಂದಿದ್ದಾರೆ. ಇನ್ನು ಈ ವರ್ಷದ ದೀಪಾವಳಿ ಹಬ್ಬವನ್ನು ರಶ್ಮಿಕಾ ಮಂದಣ್ಣ ಆಚರಿಸಿದ್ದು ಬೇರೆ ಎಲ್ಲಿಯೂ ಅಲ್ಲ ಬದಲಿಗೆ ವಿಜಯ್ ದೇವರಕೊಂಡ ಅವರ ಮನೆಯಲ್ಲಿಯೇ. ಇದಲ್ಲದೇ ಮೊನ್ನೆಯಷ್ಟೇ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಅವರ ಕುಟುಂಬದ ಜೊತೆ ಕುಳಿತು ತಮ್ಮ ಪುಷ್ಪ 2 ಚಿತ್ರವನ್ನು ನೋಡಿದ್ದರು. ಈ ಎಲ್ಲ ಕಾರಣಗಳಿಂದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದ್ವೆಯಾಗುವುದು ಖಚಿತವೆನ್ನುವ ಮಾತು ಕೇಳಿ ಬರುತ್ತಿವೆ. ಇದಕ್ಕೆ ಪೂರಕವಾಗಿ ಈಗ ಇಬ್ಬರು ವಿಮಾನ ನಿಲ್ದಾಣದಲ್ಲಿ ಒಂದೇ ಸಮಯಕ್ಕೆ ಕಾಣಿಸಿಕೊಂಡಿದ್ಧಾರೆ.


Click it and Unblock the Notifications