ಅತ್ತ ಮುಂಬೈನಲ್ಲಿ ರಶ್ಮಿಕಾ ಮಂದಣ್ಣ, ಇತ್ತ ಹೈದರಾಬಾದ್‌ನಲ್ಲಿ ವಿಜಯ್ ದೇವರಕೊಂಡ 'ರೌಡಿ' ಹೂಡಿಯಲ್ಲಿ ಟ್ವಿನ್ನಿಂಗ್!
ದೇಶದ ಬಹುಬೇಡಿಕೆಯ ನಟಿಯರಲ್ಲಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರು. ಕನ್ನಡ ಸಿನಿಮಾಗಳಿಂದ ವೃತ್ತಿಜೀವನ ಆರಂಭಿಸಿದ ನಟಿ ರಶ್ಮಿಕಾ ಮಂದಣ್ಣ ಸುಮಾರು ಎಂಟು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಕನ್ನಡ, ತೆಲುಗು, ಹಿಂದಿ ಮತ್ತು ತಮಿಳು ಚಿತ್ರರಂಗಗಳಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ. ಮರಾಠಿ ಚಿತ್ರರಂಗದತ್ತ ಕಣ್ಣಿಟ್ಟಾರೆ ಎಂಬ ವದಂತಿಗಳು ಇವೆ.
ಇನ್ನು ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ನಟ ರಣಬೀರ್ ಕಪೂರ್ ಜೊತೆಗಿನ 'ಅನಿಮಲ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದು, ನವೆಂಬರ್ 30 ರಂದು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಅವರು ಧರಿಸಿದ್ದ ಹೂಡಿ ಎಲ್ಲರ ಗಮನ ಸೆಳೆಯುತ್ತಿದೆ. ಇದು ರಶ್ಮಿಕಾ ಡೇಟ್ ಮಾಡುತ್ತಿದ್ದಾರೆ ಎಂದು ವದಂತಿಯಲ್ಲಿರುವ ವಿಜಯ್ ದೇವರಕೊಂಡ ಅವರ ಬಟ್ಟೆ ಬ್ರಾಂಡ್ ರೌಡಿ.

ವಿಜಯ್ ದೇವರಕೊಂಡ ಬಟ್ಟೆ ಬ್ರಾಂಡ್ 'ರೌಡಿ'
ನಟಿ ರಶ್ಮಿಕಾ ಮಂದಣ್ಣ, ನಟ ರಕ್ಷಿತ್ ಶೆಟ್ಟಿ ಜೊತೆಗೆ ನಿಶ್ಚಿತಾರ್ಥ ಮುರಿದುಕೊಂಡ ಬಳಿಕ ತನ್ನ ಗೀತಾ ಗೋವಿಂದಂ ಸಹನಟ ವಿಜಯ್ ದೇವರಕೊಂಡ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಲವು ವರ್ಷಗಳಿಂದ ಇದೆ. ಇಂತಹ ವದಂತಿಗಳ ನಡುವೆಯೇ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ವಿಜಯ್ ದೇವರಕೊಂಡ ಅವರ ಬಟ್ಟೆ ಬ್ರಾಂಡ್ 'ರೌಡಿ'ಯ ಹೂಡಿ ಧರಿಸಿ ಪ್ರಚಾರ ನೀಡುತ್ತಿದ್ದಾರೆ.
ಹೂಡಿ ನೋಡಲು ಸಕತ್ ಆಗಿದ್ದು, ಅದರಲ್ಲಿ ಮೊಣಕೈಗಳು ಮತ್ತು ಪಾಕೆಟ್‌ಗಳ ಮೇಲೆ ಮೊಸಾಯಿಕ್ ಡಿಸೈನ್ ಇದ್ದ ಆಫ್ ವೈಟ್ ಹೂಡಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತ, ನಟ ವಿಜಯ್ ದೇವರಕೊಂಡ ಕೂಡ ಅಂತಹದ್ದೇ ಹೂಡಿ ಧರಿಸಿಕೊಂಡಿದ್ದು, ಹೈದರಾಬಾದ್‌ನಲ್ಲಿ ಮತದಾನ ಮಾಡಲು ತೆರಳಿದ್ದಾರೆ.
ಮುಂಬೈ, ಹೈದರಾಬಾದ್‌ನಲ್ಲಿ ಇಬ್ಬರ ಟ್ವಿನ್ನಿಂಗ್!
ತೆಲಂಗಾಣ ವಿಧಾನಸಭಾ ಚುನಾವಣೆಯ ಕಾರಣ ಮತದಾನ ಮಾಡಲು ವಿಜಯ್ ದೇವರಕೊಂಡ ಹೈದರಾಬಾದ್‌ನಲ್ಲಿ ಕಾಣಿಸಿಕೊಂಡಿದ್ದು, ಮುಂದಿನ ತಿಂಗಳು ಲಂಚ್ ಆಗುತ್ತಿರುವ ಅವರ ರೌಡಿ ಬ್ರ್ಯಾಂಡ್‌ನ, ರಶ್ಮಿಕಾ ಮಂದಣ್ಣ ಮಾದರಿಯ ಹೂಡಿ ಧರಿಸಿದ್ದರು. ಅಭಿಮಾನಿಗಳ ಜೊತೆಗೆ, ಮಾಧ್ಯಮಗಳಿಗೆ ಫೋಸ್ ನೀಡಿದ್ದಾರೆ.

ಒಂದೇ ದಿನ ಮುಂಬೈ ಮತ್ತು ಹೈದರಾಬಾದ್‌ನಲ್ಲಿದ್ದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಸ್ವೆಟ್‌ಶರ್ಟ್‌ಗಳ ಕಾರಣದಿಂದ ಟ್ವಿನ್ನಿಂಗ್ ಮಾಡಿದ್ದಾರೆ. ಈ ಜೋಡಿಯ ಹಲವು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಬಟ್ಟೆ ಬ್ರಾಂಡ್ ರಿಲೀಸ್ ಆಗುವ ಮುನ್ನವೇ ಇಬ್ಬರು ಅದರ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ರಶ್ಮಿಕಾ ತನ್ ಬಾಯ್‌ಫ್ರೆಂಡ್ ಬಟ್ಟೆ ಬ್ರಾಂಡ್‌ಗೆ ಪ್ರಚಾರ ನೀಡುತ್ತಿದ್ದಾರೆ ಎಂಬ ಹೇಳಿಕೆಗಳೊಂದಿಗೆ ಫೋಟೋಗಳು ವೈರಲ್ ಆಗಿವೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಹಲವು ಬಾರಿ ಫೋಟೋಗಳನ್ನು ಹಂಚಿಕೊಳ್ಳುವಾಗ ಸಿಕ್ಕಿಬಿದ್ದಿದ್ದಾರೆ. ಒಂದೇ ಜಾಗದಲ್ಲಿನ ಫೋಟೋಗಳನ್ನು ಒಬ್ಬರು ಬೇಗ ಮತ್ತೊಬ್ಬರು ಲೇಟಾಗಿ ಹಂಚಿಕೊಳ್ಳುತ್ತಾರೆ. ಆದರೆ, ಫ್ಯಾನ್ಸ್ ಇದನ್ನು ಪತ್ತೆ ಹಚ್ಚುತ್ತಾರೆ. ಇಟಲಿಯ ಫೋಟೋಗಳು, ದೀಪಾವಳಿ ಹಬ್ಬದ ಫೋಟೋಗಳು, ಬಾಲಿಯ ಫೋಟೋಗಳನ್ನು ಹಂಚಿಕೊಂಡಾಗಲು ಹೀಗೆ ಆಗಿತ್ತು.
ಸದ್ಯ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ನಟ ರಣಬೀರ್ ಕಪೂರ್ ಜೊತೆಗೆ ನಟಿಸಿರುವ ಅನಿಮಲ್ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಹಿಂದಿ ಬಾಲಿವುಡ್‌ನಲ್ಲಿ ಅವರು ನಟಿಸಿದ ಸಿನಿಮಾಗಳು ಅಂತಹ ಹಿಟ್ ಆಗಿಲ್ಲ. ಅದೇ ಕಾರಣಕ್ಕೆ ಅನಿಮಲ್ ಮೇಲೆ ಹೆಚ್ಚು ಹೋಪ್ ಇಟ್ಟುಕೊಂಡಿದ್ದಾರೆ.


Click it and Unblock the Notifications










