ಡಾರ್ಲಿಂಗ್ ಪಾರ್ಟಿ ಬೇಕು ಎಂದ ರಶ್ಮಿಕಾ; ಅದಕ್ಕೆ ದೇವರಕೊಂಡ ಪ್ರತಿಕ್ರಿಯೆ ಏನು?
ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಚರ್ಚೆ ಇಂದು ನಿನ್ನೆಯದಲ್ಲ. ಪದೇ ಪದೆ ಇಂತಹ ವದಂತಿ ಹರಿದಾಡುತ್ತಲೇ ಇರುತ್ತದೆ. ಆದರೆ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಇಬ್ಬರು ಹೇಳುತ್ತಾ ಬರುತ್ತಿದ್ದಾರೆ.
ಒಟ್ನಲ್ಲಿ ವಿಜಯ್ ಹಾಗೂ ರಶ್ಮಿಕಾ ನಡುವೆ ಆತ್ಮೀಯ ಒಡನಾಟ ಅಂತೂ ಇದೆ. ಇಬ್ಬರು ಆಗಾಗ್ಗೆ ಸ್ನೇಹಿತರ ಜೊತೆ ಪಾರ್ಟಿ, ಟ್ರಿಪ್ ಅಂತ ಹೋಗುತ್ತಿರುತ್ತಾರೆ. ದೇವರಕೊಂಡ ಫ್ಯಾಮಿಲಿಗೂ ಕೊಡಗಿನ ಕುವರಿ ಹತ್ತಿರವಾಗಿಬಿಟ್ಟಿದ್ದಾರೆ. ಅವರ ಮನೆಯಲ್ಲೇ ಹಬ್ಬ ಹರಿದಿನಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಕೆಲದಿನಗಳ ಹಿಂದೆ ದೇವರಕೊಂಡ ಫ್ಯಾಮಿಲಿ ಜೊತೆ ರಶ್ಮಿಕಾ ದುಬೈ ಪ್ರವಾಸ ಹೋಗಿ ಬಂದಿದ್ದರು.

'ಗೀತಾ ಗೋವಿಂದಂ' ಚಿತ್ರದಲ್ಲಿ ಮೊದಲಿಗೆ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಬಳಿಕ 'ಡಿಯರ್ ಕಾಮ್ರೇಡ್' ಚಿತ್ರದಲ್ಲಿ ಜೊತೆಯಾಗಿದ್ದರು. ಮತ್ತೆ ಇಬ್ಬರೂ ಒಟ್ಟಿಗೆ ನಟಿಸಬೇಕು ಎನ್ನುವುದು ಅಭಿಮಾನಿಗಳ ಕೋರಿಕೆ. ವಿಜಯ್, ರಶ್ಮಿಕಾ ಕೂಡ ಮತ್ತೆ ತೆರೆಮೇಲೆ ರೊಮ್ಯಾನ್ಸ್ ಮಾಡಲು ಸಿದ್ಧರಿದ್ದಾರೆ. ಆದರೆ ಅಂತಹ ಅವಕಾಶ ಸಿಗುತ್ತಿಲ್ಲ. ಸದ್ಯಕ್ಕೆ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಸದ್ಯ ವಿಜಯ್ ದೇವರಕೊಂಡ ನಟನೆಯ 'ಫ್ಯಾಮಿಲಿ ಸ್ಟಾರ್' ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ಮೆಚ್ಚಿ ರಶ್ಮಿಕಾ ಚಿತ್ರತಂಡಕ್ಕೆ ಬೆಸ್ಟ್ ವಿಶಸ್ ಹೇಳಿದ್ದಾರೆ. "ನನ್ನ ಡಾರ್ಲಿಂಗ್ಸ್, ವಿಜಯ್ ದೇವರಕೊಂಡ ಮತ್ತು ಪರಶುರಾಮ್ ಅವರಿಗೆ ಬೆಸ್ಟ್ ವಿಶಸ್. ಏಪ್ರಿಲ್ 5 ರಂದು 'ಫ್ಯಾಮಿಲಿ ಸ್ಟಾರ್' ಸಿನಿಮಾ ಬಿಡುಗಡೆ ಆಗುತ್ತಿದೆ. ನಾನು ಎದುರು ನೋಡುತ್ತಿದ್ದೇನೆ. ನಿಮಗೆ ಖಂಡಿತ ಸಕ್ಸಸ್ ಸಿಗುತ್ತದೆ. ನನಗೆ ಪಾರ್ಟಿ ಬೇಕು. ಆಲ್ ದಿ ಬೆಸ್ಟ್ ಮೈ ಲವ್ ಮೃಣಾಲ್ ಠಾಕೂರ್' ಎಂದು ಎಕ್ಸ್(ಟ್ವಿಟ್ಟರ್) ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ರಶ್ಮಿಕಾ ಟ್ವೀಟ್ ನೋಡಿ ನಟ ವಿಜಯ್ ದೇವರಕೊಂಡ ಕಾಮೆಂಟ್ ಮಾಡಿದ್ದಾರೆ. ರೀಟ್ವೀಟ್ ಮಾಡಿ 'ಕ್ಯೂಟೆಸ್ಟ್' ಎಂದು ಬರೆದು ಲವ್ ಎಮೋಜಿ ಹಾಕಿದ್ದಾರೆ. ವಿಜಯ್- ರಶ್ಮಿಕಾ ಟ್ವೀಟ್ ಸಂಭಾಷಣೆ ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ವಿಜಯ್ ದೇವರಕೊಂಡ ಸಿನಿಮಾ ಅಂದ್ರೆ ಕೊಂಚ ಮಟ್ಟಿಗೆ ನಿರೀಕ್ಷೆ ಇರುತ್ತದೆ. ಮೃಣಾಲ್ ಠಾಕೂರ್ ಜೊತೆಯಾಗಿದ್ದು ಕುತೂಹಲ ಮೂಡಿಸಿದೆ. 'ಫ್ಯಾಮಿಲಿ ಸ್ಟಾರ್' ಟ್ರೈಲರ್ ನೋಡಿದರೆ 'ಗೀತಾಗೋವಿಂದಂ' ಸಿನಿಮಾ ನೆನಪಾಗುತ್ತದೆ. ಆದರೆ ಆಕ್ಷನ್ ಕೊಂಚ ಜಾಸ್ತಿ ಇದೆ. ಇನ್ನು ವಿಜಯ್ ಪಾತ್ರ ಮತ್ತು ಮೃಣಾಲ್ ಜೊತೆಗಿನ ಲವ್ ಟ್ರ್ಯಾಕ್ ಹೊಸತಾಗಿರುವಂತೆ ಕಾಣುತ್ತಿದೆ. ಫ್ಯಾಮಿಲಿ ಬಾಂಡಿಂಗ್, ಲವ್ ಹಾಗೂ ಎಮೋಷನ್ಸ್ ಹೈಲೆಟ್ ಮಾಡಿ ಕಥೆ ಹೇಳಿರುವುದು ಗೊತ್ತಾಗುತ್ತಿದೆ.
ಬಹಳ ಹಿಂದೆಯೇ ಬಿಡುಗಡೆಯಾಗಬೇಕಿದ್ದ 'ಫ್ಯಾಮಿಲಿ ಸ್ಟಾರ್' ಸಿನಿಮಾ ಕಾರಣಾಂತರಗಳಿಂದ ತಡವಾಗುತ್ತಿದೆ. ಅಂತೂ ಇಂತೂ ಏಪ್ರಿಲ್ 5ರಂದು ಸಿನಿಮಾ ತೆರೆಗೆ ಬರಲಿದೆ. ಪರಶುರಾಮ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 'ಲೈಗರ್' ಸೋಲಿನಿಂದ ವಿಜಯ್ ದೇವರಕೊಂಡ ಕ್ರೇಜ್ ಕಮ್ಮಿ ಆಗಿದೆ. 'ಫ್ಯಾಮಿಲಿ ಸ್ಟಾರ್' ಆಗಿ ಈ ಬಾರಿ ಗೆಲ್ತಾರಾ ಕಾದು ನೋಡಬೇಕಿದೆ.


Click it and Unblock the Notifications











