ಅಲ್ಲು ಅರ್ಜುನ್ ಬಳಿ ಗಿಫ್ಟ್ ಬೇಕೆಂದು ಕೇಳಿದ ರಶ್ಮಿಕಾ; ಸ್ಟೈಲಿಶ್ ಸ್ಟಾರ್ ಹೇಳಿದ್ದೇನು?
ನಟಿ ರಶ್ಮಿಕಾ ಮಂದಣ್ಣಗೆ ನಿನ್ನೆ (ಏಪ್ರಿಲ್ 5) ಹುಟ್ಟುಹಬ್ಬದ ಸಂಭ್ರಮ. ತೆಲುಗು ಮತ್ತು ಹಿಂದಿ ಸಿನಿಮಾರಂಗದಲ್ಲಿ ಮಿಂಚುತ್ತಿರುವ ರಶ್ಮಿಕಾಗೆ ಅಭಿಮಾನಿಗಳ ಜೊತೆಗೆ ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ನಟಿಯರಾದ ರಾಶಿ ಖನ್ನಾ, ಕೀರ್ತಿ ಸುರೇಶ್ ಮತ್ತು ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರ, ಅಲ್ಲು ಅರ್ಜುನ್ ಸೇರಿದಂತೆ ಅನೇಕರು ರಶ್ಮಿಕಾಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡಿರುವ ಗಣ್ಯರಿಗೆ ರಶ್ಮಿಕಾ ಧನ್ಯವಾದ ತಿಳಿಸಿದ್ದಾರೆ.
ಆದರೆ ಅಲ್ಲು ಅರ್ಜುನ್‌ಗೆ ಕೇವಲ ಧನ್ಯವಾದ ಹೇಳಿ ಸುಮ್ಮನಾಗಿಲ್ಲ. ತನಗೆ ಗಿಫ್ಟ್ ಬೇಕೆಂದು ಬೇಡಿಕೆ ಇಟ್ಟಿದ್ದಾರೆ. ನಟ ಅಲ್ಲು ಅರ್ಜುನ್, ರಶ್ಮಿಕಾ ಹುಟ್ಟುಹಬ್ಬಕ್ಕೆ, 'ಹುಟ್ಟುಹಬ್ಬದ ಶುಭಾಶಯಗಳು ರಶ್ಮಿಕಾ ಮಂದಣ್ಣ. ಉತ್ತಮ ದಿನ ನಿನ್ನದಾಗಲಿ' ಎಂದು ಹಾರೈಸಿದ್ದರು.

ಅಲ್ಲು ಅರ್ಜುನ್ ಟ್ವೀಟ್ ಗೆ ರಶ್ಮಿಕಾ, 'ತುಂಬಾ ಧನ್ಯವಾದಗಳು ಸರ್. ನನಗೆ ನನ್ನ ಉಡುಗೊರೆ ಬೇಕು' ಎಂದು ಕೇಳಿದ್ದಾರೆ. ರಶ್ಮಿಕಾ ಕೋರಿಕೆಗೆ ಇಲ್ಲ ಎನ್ನದ ಅಲ್ಲು ಅರ್ಜನ್ ಗಿಫ್ಟ್‌ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. 'ಖಂಡಿತವಾಗಿ..ಚಿತ್ರೀಕರಣ ಸೆಟ್‌ನಲ್ಲಿ ಭೇಟಿಯಾಗೋಣ' ಎಂದಿದ್ದಾರೆ.
ಅಲ್ಲು ಅರ್ಜುನ್ ಸದ್ಯ ಮಾಲ್ಡೀವ್ಸ್‌ನಲ್ಲಿ ರಜೆ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಚಿತ್ರೀಕರಣದಿಂದ ಸ್ವಲ್ಪ ಬ್ರೇಕ್ ಪಡೆದಿರುವ ಅಲ್ಲು ಕುಟುಂಬದ ಜೊತೆ ಪ್ರವಾಸದ ಸಂತಸದಲ್ಲಿದ್ದಾರೆ. ಅಲ್ಲು ಅರ್ಜುನ್ ಸದ್ಯ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ.
ರಶ್ಮಿಕಾ ತೆಲುಗು ಸಿನಿಮಾಗಳ ಜೊತೆಗೆ ಹಿಂದಿ ಚಿತ್ರಗಳಲ್ಲೂ ಬ್ಯುಸಿಯಾಗಿದ್ದಾರೆ. ಮಿಷನ್ ಮಜ್ನು ಮತ್ತು ಗುಡ್ ಬಾಯ್ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ತನ್ನ ಹುಟ್ಟುಹಬ್ಬವನ್ನು ಅಮಿತಾಬ್ ಬಚ್ಚನ್ ಜೊತೆ ಆಚರಿಸಿಕೊಂಡಿರುವ ರಶ್ಮಿಕಾ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.


Click it and Unblock the Notifications











