ದೇವರಕೊಂಡರನ್ನು ದೂರ ಇಟ್ಟರೇ ರಶ್ಮಿಕಾ: ವಿಜಯ್ ಬಗ್ಗೆ ಮಾತನಾಡಲು ಹಿಂದೇಟ್ಹಾಕಿದ್ದೇಕೆ ಕಿರಿಕ್ ನಟಿ?

ದಕ್ಷಿಣ ಭಾರತೀಯ ಚಿತ್ರರಂಗದ ಸೆನ್ಸೇಷನ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ. ಇಬ್ಬರು ಒಟ್ಟಿಗೆ ಅಭಿನಯಿಸಿದ್ದು ಎರಡೇ ಎರಡೂ ಸಿನಿಮಾಗಳು. ಆದರೆ ಈ ಜೋಡಿ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಸಖತ್ ಫೇಮಸ್. ಗೀತಾಗೋವಿಂದಂ ಸಿನಿಮಾ ನಂತರ ಡಿಯರ್ ಕಾಮ್ರೇಡ್ ಮೂಲಕ ಮೋಡಿ ಮಾಡಿದ್ದ ರಶ್ಮಿಕಾ ಮತ್ತು ವಿಜಯ್ ನಡುವೆ ಸಾಕಷ್ಟು ಸುದ್ದಿಗಳು ಹರಿದಾಡಲು ಪ್ರಾರಂಭವಾಗಿತ್ತು.

Recommended Video

ನಟಿ ಪ್ರಣೀತಾ ಸುಭಾಷ್ ಮತ್ತೊಮ್ಮೆ ಬಡವರ ಹಸಿವಿಗೆ ಸ್ಪಂದಿಸಿದ್ದು ಹೀಗೆ | Oneindia Kannada

ಇಬ್ಬರ ನಡುವೆ ಸ್ನೇಹಕ್ಕಿಂತ ಮಿಗಿಲಾದ ಸಂಬಂಧವಿದೆ ಎಂದು ಹೇಳಲಾಗುತ್ತಿದೆ. ಲಿಪ್ ಲಾಕ್ ದೃಶ್ಯದ ಮೂಲಕವೇ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಈ ಜೋಡಿ ಇತ್ತೀಚಿಗೆ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಅಲ್ಲದೆ ಒಬ್ಬರ ಬಗ್ಗೆ ಮತ್ತೊಬ್ಬರು ಮಾತನಾಡಲು ಹಿಂದೇಟು ಹಾಕುತ್ತಿದ್ದಾರೆ. ಇತ್ತೀಚಿಗೆ ಅಭಿಮಾನಿಗಳು ವಿಜಯ್ ಬಗ್ಗೆ ಕೇಳಿದ್ದಕ್ಕೆ ರಶ್ಮಿಕಾ ಆ ಪ್ರಶ್ನೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಮುಂದೆ ಓದಿ..

ವಿಜಯ್ ದೇವರಕೊಂಡರನ್ನು ದೂರ ಇಟ್ಟರ ರಶ್ಮಿಕಾ

ವಿಜಯ್ ದೇವರಕೊಂಡರನ್ನು ದೂರ ಇಟ್ಟರ ರಶ್ಮಿಕಾ

ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರ ಸಂಬಂಧ ಸ್ನೇಹಕ್ಕಿಂತ ಮಿಗಿಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೀಗ ಇಬ್ಬರ ನಡುವೆ ಯಾವುದು ಚೆನ್ನಾಗಿಲ್ಲ. ಇಬ್ಬರೂ ಒಬ್ಬರನ್ನೊಬ್ಬರು ಅವಾಯಿಡ್ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ.

ವಿಜಯ್ ಬಗ್ಗೆ ಕೇಳಿದ್ರೆ ತಪ್ಪಿಸಿಕೊಳ್ಳುತ್ತಿದ್ದಾರೆ ರಶ್ಮಿಕಾ

ವಿಜಯ್ ಬಗ್ಗೆ ಕೇಳಿದ್ರೆ ತಪ್ಪಿಸಿಕೊಳ್ಳುತ್ತಿದ್ದಾರೆ ರಶ್ಮಿಕಾ

ಇತ್ತೀಚಿಗೆ ಇನ್ಸ್ಟಾಗ್ರಾಮ್ ಲೈವ್ ಬಂದಿದ್ದ ರಶ್ಮಿಕಾ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಲೈವ್ ನಲ್ಲಿ ಅಭಿಮಾನಿಗಳು ವಿಜಯ್ ದೇವರಕೊಂಡ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆದರೆ ಅದ್ಯಾವುದಕ್ಕು ರಶ್ಮಿಕಾ ಉತ್ತರ ನೀಡಿಲ್ಲ. ನಿತಿನ್ ಮತ್ತು ವಿಜಯ್ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಎಂದು ಅಭಿಮಾನಿಗಳು ಕೇಳಿದ್ರೂ ರಶ್ಮಿಕಾ ಪ್ರಶ್ನೆಯಿಂದ ತಪ್ಪಿಸಿಕೊಂಡಿದ್ದಾರೆ.

ವಿಜಯ್ ಬಗ್ಗೆ ಯಾವಾಗಲು ಮಾತನಾಡುತ್ತಿದ್ದರು

ವಿಜಯ್ ಬಗ್ಗೆ ಯಾವಾಗಲು ಮಾತನಾಡುತ್ತಿದ್ದರು

ವಿಜಯ್ ಬಗ್ಗೆ ಸದಾ ಮಾತನಾಡುತ್ತಿದ್ದ ರಶ್ಮಿಕ ಈ ಬಾರಿ ತಪ್ಪಿಸಿಕೊಂಡಿದ್ದು ನೋಡಿ ಅಭಿಮಾನಿಗಳಿಗೆ ಅನುಮಾನ ಮೂಡಿದೆ. ಮಾತನಾಡಿದ್ರೆ ಏನಾದರು ವಿವಾದವಾಗಿ ಮತ್ತೆ ಟ್ರೋಲ್ ಆಗುತ್ತೀನಿ ಎನ್ನುವ ಭಯನಾ ಅಥವಾ ನಿಜಕ್ಕೂ ವಿಜಯ್ ದೇವರಕೊಂಡ ಜೊತೆಗಿನ ಸ್ನೇಹ ಹಳಸಿದೆಯಾ ಎನ್ನವ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ.

ಪುಷ್ಪ ಸಿನಿಮಾದಲ್ಲಿ ರಶ್ಮಿಕಾ, ಫೈಟರ್ ನಲ್ಲಿ ದೇವರಕೊಂಡ

ಪುಷ್ಪ ಸಿನಿಮಾದಲ್ಲಿ ರಶ್ಮಿಕಾ, ಫೈಟರ್ ನಲ್ಲಿ ದೇವರಕೊಂಡ

ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್ ನ ಟಾಪ್ ನಟಿಯಾಗಿ ಹೊರಹೊಮ್ಮಿದ್ದಾರೆ. ಸ್ಟಾರ್ ನಟರ ಜೊತೆ ತೆರೆಹಂಚಿಕೊಳ್ಳುತ್ತಿರುವ ರಶ್ಮಿಕಾ ಈಗ ಅಲ್ಲು ಅರ್ಜುನ್ ಜೊತೆ ಪುಷ್ಪ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ವಿಜಯ್ ದೇವರಕೊಂಡ ಫೈಟರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇಬ್ಬರು ಮತ್ತೆ ಒಟ್ಟಿಗೆ ಸಿನಿಮಾ ಮಾಡುವ ಮಾತುಗಳು ಸಹ ಕೇಳಿ ಬರುತ್ತಿಲ್ಲ. ಹಾಗಾಗಿ ಇಬ್ಬರ ಸ್ನೇಹ ಸಂಬಂಧದ ಬಗ್ಗೆ ಅನುಮಾನ ಮತ್ತಷ್ಟು ಗಟ್ಟಿಮಾಡಿದೆ.

More from Filmibeat

English summary
Actress Rashmika Mandanna Avoid talking about Vijay Devarakonda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X