For Quick Alerts
  ALLOW NOTIFICATIONS  
  For Daily Alerts

  ಬೀಚ್ ನಲ್ಲಿ ನಟಿ ರಶ್ಮಿಕಾ ಮಂದಣ್ಣ ವರ್ಕೌಟ್: ವಿಡಿಯೋ ವೈರಲ್

  |

  ಕಿರಿಕ್ ಸುಂದರಿ ನಟಿ ರಶ್ಮಿಕಾ ಮಂದಣ್ಣ ತೆಲುಗು ಸಿನಿಮಾರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿದ್ದ ನಟಿ ರಶ್ಮಿಕಾ, ಇತ್ತೀಚಿಗೆ ವಿವಾದಗಳಿಂದ ಕೊಂಚ ದೂರ ಉಳಿದಿದ್ದಾರೆ. ಸಿನಿಮಾ ಕೆಲಸಗಳನ್ನು ಇನ್ನು ಪ್ರಾರಂಭಿಸದ ರಶ್ಮಿಕಾ ಸದ್ಯ ವರ್ಕೌಟ್ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

  ಫಿಟ್ನೆಸ್ ಫ್ರೀಕ್ ಆಗಿರುವ ರಶ್ಮಿಕಾ ಇತ್ತೀಚಿಗೆ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಾರೆ. ರಶ್ಮಿಕಾ ಜಿಮ್ ನಲ್ಲಿ ಬೆವರಿಳಿಸುತ್ತಿರುವ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತೆ. ಇದೀಗ ರಶ್ಮಿಕಾ ವರ್ಕೌಟ್ ಮಾಡಲು ಜಿಮ್ ಬಿಟ್ಟು ಬೀಚ್ ಕಡೆ ಬಂದಿದ್ದಾರೆ. ಹೌದು, ಬೀಚ್ ನಲ್ಲಿ ರಶ್ಮಿಕಾ ವರ್ಕೌಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

  ಕರ್ನಾಟಕ ತೊರೆದರೇ ರಶ್ಮಿಕಾ ಮಂದಣ್ಣ: ವಿಳಾಸ ಬದಲಿಸಿದ ನಟಿ!ಕರ್ನಾಟಕ ತೊರೆದರೇ ರಶ್ಮಿಕಾ ಮಂದಣ್ಣ: ವಿಳಾಸ ಬದಲಿಸಿದ ನಟಿ!

  ಸದ್ಯ ಹೈದರಾಬಾದ್ ನಲ್ಲಿರುವ ರಶ್ಮಿಕಾ ಫ್ರೀ ಟೈಂನಲ್ಲಿ ಬೀಚ್ ನಲ್ಲಿ ಕಾಲಕಳೆಯುತ್ತಿರುತ್ತಾರೆ. ಇತ್ತೀಚಿಗೆ ಬೀಚ್ ನಲ್ಲಿ ಜಾಲಿ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡುತ್ತಿದ್ದ ರಶ್ಮಿಕಾ ಇದೀಗ ಬೀಚ್ ವರ್ಕೌಟ್ ವಿಡಿಯೋ ಹಂಚಿಕೊಂಡಿದ್ದಾರೆ. ಇತ್ತೀಚಿಗಷ್ಟೆ ರಶ್ಮಿಕಾ ಬೆಳಗ್ಗೆಯ ತಿಂಡಿ ತಯಾರಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ರಶ್ಮಿಕಾ ಡಯಟ್ ಫುಡ್ ಗೆ ಅಭಿಮಾನಿಗಳು ಫಿದಾ ಆಗಿದ್ದರು.

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ರಶ್ಮಿಕಾ ಸದ್ಯ ಅಲ್ಲು ಅರ್ಜುನ್ ನಾಯಕನಾಗಿ ನಡೆಸುತ್ತಿರುವ 'ಪುಷ್ಪ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ವಿಬಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿರುವ ರಶ್ಮಿಕಾ ಚಿತ್ರೀಕರಣಕ್ಕೆ ಹೊರಡಲು ಸಿದ್ಧರಾಗಿದ್ದಾರೆ.

  ಜೊತೆ ಜೊತೆಯಲಿ ಮೇಘ ಶೆಟ್ಟಿಗೆ ಬಂತು ಬಂಪರ್ ಆಫರ್ | Filmibeat Kannada

  ಇನ್ನು ಕನ್ನಡದಲ್ಲಿ ರಶ್ಮಿಕಾ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 'ಯಜಮಾನ' ಸಿನಿಮಾದ ಬಳಿಕ ರಶ್ಮಿಕಾ 'ಪೊಗರು' ಸಿನಿಮಾ ಮೂಲಕ ಕನ್ನಡ ಸಿನಿಮಾ ಪ್ರಿಯರ ಮುಂದೆ ಬರ್ತಿದ್ದಾರೆ. ಈ ಸಿನಿಮಾ ಬಳಿಕ ರಶ್ಮಿಕಾ ಕನ್ನಡದಲ್ಲಿ ಇನ್ನೂ ಯಾವ ಸಿನಿಮಾಗೂ ಗ್ರೀನ್ ಸಿಗ್ನಲ್ ನೀಡಿಲ್ಲ.

  English summary
  Actress Rashmika mandanna beach workout video goes viral in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X