ಮುಂದಿನ ತಿಂಗಳೇ ರಾಜಸ್ಥಾನದಲ್ಲಿ ವಿಜಯ್ ದೇವರಕೊಂಡ ಜೊತೆ ಮದುವೆ? ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ

ಕನ್ನಡ ನಟಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್, ಕಾಲಿವುಡ್ ಮಾತ್ರವಲ್ಲ ಬಾಲಿವುಡ್ ಅಂಗಳದಲ್ಲಿ ಕೂಡ ಕಮಾಲ್ ಮಾಡ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಳ್ತಿದ್ದಾರೆ. ಇದೆಲ್ಲದರ ನಡುವೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ.

ಮುಂದಿನ ತಿಂಗಳು ರಾಜಸ್ಥಾನದಲ್ಲಿ ಇಬ್ಬರ ಮದುವೆ ನಡೆಯುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ. ಈಗಾಗಲೇ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಇತ್ತೀಚೆಗೆ ಇಬ್ಬರೂ ಒಟ್ಟಿಗೆ ಹೊಸ ವರ್ಷವನ್ನು ಸ್ವಾಗತಿಸಿದ್ದರು. ಇದೆಲ್ಲದರ ನಡುವೆ ಮದುವೆ ಬಗ್ಗೆ ರಶ್ಮಿಕಾಗೆ ನೇರಾನೇರ ಪ್ರಶ್ನೆ ಎದುರಾಗಿದೆ.

Rashmika Mandanna Breaks Silence on Vijay Deverakonda Marriage Rumours says will talk later

ಇತ್ತೀಚೆಗೆ ರಶ್ಮಿಕಾ ಮಂದಣ್ಣ ನಟನೆಯ 'ದಿ ಗರ್ಲ್‌ಫ್ರೆಂಡ್' ಸಿನಿಮಾ ತೆರೆಕಂಡು ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು. ಇದೇ ಖುಷಿಯಲ್ಲಿ ಪ್ರೇಮಾ ಜರ್ನಲಿಸ್ಟ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ರಶ್ಮಿಕಾ ಭಾಗಿ ಆಗಿದ್ದಾರೆ. ಕೆಲ ಅಭಿಮಾನಿಗಳು ಆಕೆಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ರಶ್ಮಿಕಾ ಮದುವೆ ಬಗ್ಗೆ ಹರಿದಾಡುತ್ತಿರುವ ವದಂತಿ ಬಗ್ಗೆ ನಿರೂಪಕಿ ಪ್ರೇಮಾ ಪ್ರಶ್ನಿಸಿದ್ದಾರೆ. ಹಾರಿಕೆ ಉತ್ತರ ಬೇಡ, ನೇರವಾದ ಉತ್ತರ ಬೇಕು ಎಂದು ಪಟ್ಟು ಹಿಡಿದಿದ್ದಾರೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಎಂಗೇಜ್ಡ್ ಆಗಿದ್ದಾರೆ. ಮುಂದಿನ ತಿಂಗಳು ಇಬ್ಬರ ಮದುವೆ. ಫೆಬ್ರವರಿ 26ರಂದು ಉದಯ್‌ಪುರದಲ್ಲಿ ಮದುವೆ ಎನ್ನುತ್ತಿದ್ದಾರೆ. ಆದರೆ ಪ್ರತಿಬಾರಿ ನೀವು ನುಣುಚಿಕೊಳ್ತಿದ್ದೀರಾ. ಇವತ್ತು ಸತ್ಯ ಹೇಳಲೆಬೇಕು ಎಂದು ನಿರೂಪಕಿ ಪಟ್ಟುಹಿಡಿದಿದ್ದಾರೆ. "ಸತ್ಯ ಏನಂದ್ರೆ, 4 ವರ್ಷಗಳಿಂದ ಇಂತಹ ವದಂತಿ ಹರಿದಾಡ್ತಿದೆ. ಆದರೆ ಯಾವಾಗ ಮಾತನಾಡಬೇಕೋ ಆಗ ನಾನು ಮಾತನಾಡುತ್ತೇನೆ" ಎಂದು ರಶ್ಮಿಕಾ ನಕ್ಕಿದ್ದಾರೆ.

ನೀವು ನನ್ನ ಆತ್ಮೀಯ ಸ್ನೇಹಿತೆ. ನನಗಾದರೂ ಉತ್ತರ ಹೇಳಿ ಎಂದಿದ್ದಕ್ಕೆ ಸಂದರ್ಶನ ಮುಗಿದ ಬಳಿದ ವೈಯಕ್ತಿಕವಾಗಿ ಮಾತಾಡೋಣ ಬಿಡಿ ಎಂದು ಜಾರಿಕೊಂಡಿದ್ದಾರೆ. ಮತ್ತೊಮ್ಮೆ ಗೋಡೆಯ ಮೇಲೆ ದೀಪ ಇಟ್ಟಂತೆ ಮಾತಾಡಿ ರಶ್ಮಿಕಾ ಕುತೂಹಲ ಕಾಯ್ದುಕೊಂಡಿದ್ದಾರೆ. ಇಬ್ಬರ ಮದುವೆ ಖಚಿತ. ಇಲ್ಲದಿದ್ದರೆ ಆಕೆ ಹೇಳುತ್ತಿದ್ದಳು. ಹೀಗೆ ನುಣುಚಿಕೊಳ್ಳುತ್ತಿರಲಿಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

'ದಿ ಗರ್ಲ್‌ಫ್ರೆಂಡ್' ಬಳಿಕ ಬಾಲಿವುಡ್ 'ಕಾಕ್‌ಟೇಲ್- 2' ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸಿದ್ದಾರೆ ಎನ್ನಲಾಗ್ತಿದೆ. 'ಮೈಸಾ' ಎಂಬ ಮಹಿಳಾ ಪ್ರಧಾನ ಚಿತ್ರದಲ್ಲಿ ಕೂಡ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ರಶ್ಮಿಕಾ ನಟಿಸಿದ ಸಿನಿಮಾಗಳೆಲ್ಲಾ ಹಿಟ್ ಲಿಸ್ಟ್ ಸೇರಿದೆ. 'ಸಿಕಂದರ್' ಸಿನಿಮಾ ಮಾತ್ರ ಕೈಹಿಡಿಯಲಿಲ್ಲ.

ದಿನದಿಂದ ದಿನಕ್ಕೆ ರಶ್ಮಿಕಾ ಕ್ರೇಜ್ ಹೆಚ್ಚುತ್ತಿದೆ. ಮುಖ್ಯವಾಗಿ ಬಾಲಿವುಡ್ ಅಂಗಳದಲ್ಲಿ ಹವಾ ಶುರುವಾಗಿದೆ. ಬಿಟೌನ್ ಟಾಪ್ ನಟಿಯರಿಗೆ ದಕ್ಷಿಣದ ರಶ್ಮಿಕಾ ಟಫ್ ಕಾಂಪಿಟೇಷನ್ ಕೊಡುತ್ತಿದ್ದಾರೆ. 'ಅನಿಮಲ್' ಹಾಗೂ 'ಛಾವ' ಗೆಲುವು ಬಾಲಿವುಡ್ ಅಂಗಳದಲ್ಲಿ ಆಕೆಯ ಕ್ರೇಜ್ ಹೆಚ್ಚಿಸಿದೆ. 'ಪೊಗರು' ಬಳಿಕ ಕನ್ನಡದ ಯಾವುದೇ ಚಿತ್ರದಲ್ಲಿ ರಶ್ಮಿಕಾ ನಟಿಸಲೇ ಇಲ್ಲ.

'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ರಶ್ಮಿಕಾ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ನಟ ರಕ್ಷಿತ್ ಶೆಟ್ಟಿ ಅವರನ್ನು ಪ್ರೀತಿಸಿ ಮದುವೆ ಆಗಲು ಮುಂದಾಗಿದ್ದಾರೆ. ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಕೂಡ ನಡೆದಿತ್ತು. ಬಳಿಕ ತೆಲುಗು ಚಿತ್ರರಂಗ ಪ್ರವೇಶಿಸಿ ಸಕ್ಸಸ್ ಕಂಡಿದ್ದರು. ಅಷ್ಟರಲ್ಲೇ ಇಬ್ಬರ ನಿಶ್ಚಿತಾರ್ಥ ಮುರಿದುಬಿದ್ದಿತ್ತು. ಬಳಿಕ ಬ್ರೇಕ್‌ಅಪ್ ಬಗ್ಗೆ ಇಬ್ಬರೂ ಬಹಿರಂಗವಾಗಿ ಮಾತನಾಡಲಿಲ್ಲ. 'ದಿ ಗರ್ಲ್‌ಫ್ರೆಂಡ್' ಸಿನಿಮಾ ಕಥೆ ನನ್ನದೇ ನಿಜ ಜೀವನದ ಕಥೆ ಎನ್ನುವಂತಿದೆ ಎಂದು ರಶ್ಮಿಕಾ ಹೇಳಿದ್ದು ವೈರಲ್ ಆಗಿತ್ತು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X