ಹೈದರಾಬಾದ್, ಮುಂಬೈ ಆಯ್ತು..ಇದೀಗ ಗೋವಾದಲ್ಲಿ ಮನೆ ಖರೀದಿಸಿದ ನಟಿ ರಶ್ಮಿಕಾ

By ಫಿಲ್ಮಿಬೀಟ್ ಕನ್ನಡ

ನಟಿ ರಶ್ಮಿಕಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಹೈದರಾಬಾದ್ ಮತ್ತು ಮುಂಬೈ ಅಂತ ಓಡಾಡುತ್ತಿರುತ್ತಾರೆ. ಕನ್ನಡದಿಂದ ಹೈದರಾಬಾದ್ ಗೆ ಹಾರಿದ್ದ ರಶ್ಮಿಕಾ ತೆಲುಗು ಸಿನಿಮಾರಂಗದಲ್ಲಿ ಅವಕಾಶಗಳು ಹೆಚ್ಚಾಗುತ್ತಿದ್ದಂತೆ ಹೈದರಾಬಾದ್ ನಲ್ಲಿ ಮನೆ ಖರೀದಿಸಿ ಅಲ್ಲಿಯೇ ನೆಲೆಸಿದರು.

ತೆಲುಗು ಸಿನಿಮಾರಂಗದಿಂದ ಮುಂಬೈ ಕಡೆ ಹಾರಿದ ರಶ್ಮಿಕಾ ಹಿಂದಿಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗೆ ಸಹಿ ಮಾಡುತ್ತಿದ್ದಂತೆ ಮುಂಬೈನಲ್ಲಿ ಮನೆ ಖರೀದಿ ಮಾಡಿದರು. ಹೈದರಾಬಾದ್, ಮುಂಬೈ ಬಳಿಕ ರಶ್ಮಿಕಾ ಇದೀಗ ಗೋವಾದಲ್ಲಿ ಮನೆ ಖರೀದಿ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಗೋವಾದಲ್ಲಿ ಮನೆ ಖರೀದಿ ಮಾಡಿದ ಬಗ್ಗೆ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಸುಳಿವು ನೀಡಿದ್ದಾರೆ.

ರಶ್ಮಿಕಾ ಸದ್ಯ ಗೋವಾದಲ್ಲಿ ಬೀಡುಬಿಟ್ಟಿದ್ದಾರೆ. ಸಿನಿಮಾ ಕೆಲಸಗಳಿಂದ ಕೊಂಚ ಬ್ರೇಕ್ ಪಡೆದಿರುವ ರಶ್ಮಿಕಾ ಗೋವಾ ಕಡೆ ಮುಖಮಾಡಿದ್ದಾರೆ. ಗೋವಾದ ಪ್ರಕೃತಿ ಸೌಂದರ್ಯ ಸವಿಯುತ್ತಿರುವ ರಶ್ಮಿಕಾ ಒಂದಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಮನೆಯ ಹೊರಾಂಗಣದ ಫೋಟೋವನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ.

Rashmika mandanna buys new house in Goa, shares photos

ಪ್ರಕೃತಿ ಸೌಂದರ್ಯದ ನಡುವೆ ಈ ಮನೆ ಇದೆ. ಈಜುಕೊಳದ ಪಕ್ಕದಲ್ಲೇ ಬುದ್ಧನ ಮೂರ್ತಿ ಇದೆ. ಬೃಹದಾದ ಮರವಿದೆ. ಫೋಟೋ ಶೇರ್ ಮಾಡಿ ರಶ್ಮಿಕಾ ನೀಡಿರುವ ಕ್ಯಾಪ್ಷನ್​ ಗಮನ ಸೆಳೆಯುತ್ತಿದೆ. "ಗೋವಾದಲ್ಲಿ ಹೊಸ ಮನೆ ಖರೀದಿಸಿದಾಗ... ಹೊಟ್ಟೆಕಿಚ್ಚು ಆಯ್ತಾ?" ಎಂದು ರಶ್ಮಿಕಾ ಪ್ರಶ್ನಿಸಿದ್ದಾರೆ. ಆದರೆ ಅವರು ಹೀಗೆ ಟಾಂಗ್​ ನೀಡಿರುವುದು ಯಾರಿಗೆ ಎಂಬುದು ಗೊತ್ತಾಗಿಲ್ಲ.

ರಶ್ಮಿಕಾ ಸದ್ಯ ಸಿನಿಮಾಗಳ ಜೊತೆಗೆ ಜಾಹೀರಾತು ಕ್ಷೇತ್ರಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಪ್ರತಿಷ್ಠಿತ ಬ್ರ್ಯಾಂಡ್ ಗಳಿಗೆ ರಶ್ಮಿಕಾ ರಾಯಬಾರಿಯಾಗಿದ್ದಾರೆ. ಸಿನಿಮಾ ಮತ್ತು ಜಾಹೀರಾತುಗಳಿಂದ ಭಾರಿ ಮೊತ್ತದ ಹಣ ಸಂಪಾದಿಸುತ್ತಿರುವ ರಶ್ಮಿಕಾ ಮೇಲಿಂದ ಮೇಲೆ ಮನೆ ಖರೀದಿಸುತ್ತಿದ್ದಾರೆ. ಸದ್ಯ ಗೋವಾದಲ್ಲಿರುವ ರಶ್ಮಿಕಾ ಜೊತೆ ವಿಜಯ್ ದೇವರಕೊಂಡ ಸಹ ಇದ್ದಾರೆ ಎನ್ನಲಾಗುತ್ತಿದೆ.

ಲೈಗರ್ ಸಿನಿಮಾದ ಚಿತ್ರೀಕರಣಕ್ಕೆ ಹೋಗಿದ್ದ ವಿಜಯ್ ಚಿತ್ರೀಕರಣ ಮುಗಿದ ಬಳಿಕವೂ ಅಲ್ಲೇ ಇದ್ದು ರಶ್ಮಿಕಾ ಜೊತೆ ಸಮಯ ಕಳೆಯುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ರಶ್ಮಿಕಾ ಸುಳಿವು ಬಿಟ್ಟುಕೊಟ್ಟಿಲ್ಲ. ರಶ್ಮಿಕಾ ಸದ್ಯ ಬಾಲಿವುಡ್ ನ ಎರಡು ಸಿನಿಮಾ ಮತ್ತು ಟಾಲಿವುಡ್ ನಲ್ಲಿ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಟಾಲಿವುಡ್ ನಲ್ಲಿ ಅಲ್ಲು ಅರ್ಜುನ್ ಜೊತೆ ನಟಿಸುತ್ತಿರುವ ಪುಷ್ಪ ಸಿನಿಮಾ ಈಗಾಗಲೇ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಇತ್ತೀಚಿಗಷ್ಟೆ ರಶ್ಮಿಕಾ ಮೊದಲ ಲುಕ್ ಬಿಡುಗಡೆಯಾಗಿದ್ದು, ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

More from Filmibeat

English summary
Actress Rashmika mandanna buys new house in Goa, shares photos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X