ವಿಜಯ್ ದೇವರಕೊಂಡ ಮನೆಯಲ್ಲಿ ದೀಪಾವಳಿ ಹಬ್ಬ ಆಚರಿಸಿದ ರಶ್ಮಿಕಾ ಮಂದಣ್ಣ ..!

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಸಂಬಂಧದ ಬಗ್ಗೆ ಅನೇಕರಿಗೆ ಅನುಮಾನ ಇದೆ. ಇಬ್ಬರ ನಡುವೆ ಇರುವುದು ಸ್ನೇಹ ಅಲ್ಲ ಬದಲಿಗೆ ಪ್ರೇಮ ಎನ್ನುವ ಮಾತು ಆಗಾಗ ಕೇಳಿ ಬರುತ್ತೆ. ಇದಕ್ಕೆ ಪೂರಕವಾಗಿ ಇಬ್ಬರ ನಡಾವಳಿ ಕೂಡ ಹಾಗೇ ಇದೆ. ಗೋವಾದಿಂದ ಹಿಡಿದು ಅಮೆರಿಕಾದವರೆಗೆ ಜೊತೆ ಜೊತೆಯಾಗಿಯೇ ಪ್ರವಾಸಕ್ಕೆ ತೆರಳುವ ಇಬ್ಬರು ಈಗ ಇನ್ನೊಮ್ಮೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ದೀಪಾವಳಿ ಹಬ್ಬದ ಸಂಭ್ರಮ ಸಡಗರ.

ಹೌದು, ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಮಂದಣ್ಣ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ನಿಜಾ .. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೊತೆಯಲ್ಲಿ ನಿಂತುಕೊಂಡು ಕ್ಯಾಮರಾ ಕಣ್ಣಿಗೆ ಫೋಸ್ ನೀಡಿಲ್ಲ. ಆದರೆ. ರಶ್ಮಿಕಾ ಹಂಚಿಕೊಂಡ ಫೋಟೋಗಳನ್ನು ನೋಡಿದ ಅನೇಕರು ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಮಂದಣ್ಣ ದೀಪಾವಳಿ ಹಬ್ಬ ಆಚರಿಸಿದ್ದಾರೆ ಎನ್ನುತ್ತಿದ್ದಾರೆ. ಸಾಕ್ಷಿ ಬೇಕಿದ್ದರೆ ಮನೆಯ ಗೋಡೆ ಬಣ್ಣವನ್ನು ಗಮನಿಸಿ ಎಂದು ಹೇಳುತ್ತಿದ್ದಾರೆ.

Rashmika Mandanna Celebrates Deepawali With Vijay Deverkonda At His Residence

ಇನ್ನೂ ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಮಂದಣ್ಣ ದೀಪಾವಳಿ ಹಬ್ಬವನ್ನಾಚರಿಸಿದ್ದು ಇದು ಮೊದಲೇನಲ್ಲ. ಕಳೆದ ವರ್ಷ ಕೂಡ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೊತೆ ಜೊತೆಯಾಗಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದರು. ಆಗ ಕೂಡ ಇವರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಚರ್ಚೆಯನ್ನು ಕೂಡ ಹುಟ್ಟು ಹಾಕಿದ್ದವು.

ಅಂದ್ಹಾಗೇ ಜೊತೆಯಲ್ಲಿಯೇ ಇದ್ದರೂ ಕೂಡ ಪ್ರತ್ಯೇಕವಾಗಿರುವಂತೆ ಬಿಂಬಿಸುವ ಪ್ರಯತ್ನವನ್ನು ಆಗಾಗ ಇಬ್ಬರು ಮಾಡುತ್ತಿರುತ್ತಾರೆ. ಆದರೆ. ಅಭಿಮಾನಿಗಳ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಇಬ್ಬರಿಗೂ ಕೂಡ ಸಾಧ್ಯವಾಗುತ್ತಿಲ್ಲ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮಾಲ್ಡೀವ್ಸ್‌ನಲ್ಲಿ ಸೆರೆಹಿಡಿಯಲಾದ ತಮ್ಮ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದರು.

ಆದರೆ. ಆಗ ಕೂಡ ಆ ಫೋಟೋಗಳನ್ನು ನೋಡಿದ ಅನೇಕರು ಇಬ್ಬರು ಜೊತೆಯಲ್ಲಿರುವುದನ್ನು ಕಂಡು ಹಿಡಿದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಸಂಬಂಧದ ಕುರಿತು ವ್ಯಾಪಕವಾದ ಚರ್ಚೆಯನ್ನು ಕೂಡ ಮಾಡಿದ್ದರು. ಇವರಿಬ್ಬರ ಈ ಪ್ರವಾಸದ ಬಗ್ಗೆ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಅವರಿಗೆ ಕೇಳಿದಾಗ ತುಂಬಾ ದೂರ ಇದ್ದ ಕಾರಣ ವಿಮಾನದಲ್ಲಿ ತೆರಳಿದ್ದಾರೆ ಎಂದು ಹೇಳಿದ್ದರು. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಡುವೆ ನಡೆಯುತ್ತಿರುವುದು ಏನು..? ಎಂಬ ಪ್ರಶ್ನೆಗೆ ಮುಂದಿನ ಸಿನಿಮಾಗೆ ಸ್ಕ್ರಿಪ್ಟ್ ಡಿಸ್ಕಶನ್ ನಡೆಯುತ್ತಿದೆ ಎಂದು ಆನಂದ್ ದೇವರಕೊಂಡ ಫನ್ನಿ ಉತ್ತರವನ್ನ ಕೊಟ್ಟು ಕೈತೊಳೆದುಕೊಂಡಿದ್ದರು. ಮುಂದುವರೆದು ರೆಸಾರ್ಟ್ ವಾಸ್ತವ್ಯ ಕೇವಲ ಕಾಕತಾಳೀಯ ಅಷ್ಟೇ ಎಂದು ಹೇಳಿದ್ದರು ಆನಂದ್ ದೇವರಕೊಂಡ.

ಇದಲ್ಲದೇ ಗೋವಾದಲ್ಲಿ ಕೂಡ ಇಬ್ಬರು ಓಡಾಡಿದ್ದರು. ಲೈಗರ್ ಚಿತ್ರದ ಬಿಡುಗಡೆಯ ಆಚೀಚೆ ವಿಜಯ್ ದೇವರಕೊಂಡ ಮತ್ತು ಅವರ ಕುಟುಂಬದ ಜೊತೆ ಕುಳಿತು ರಶ್ಮಿಕಾ ಮಂದಣ್ಣ ಭೋಜನ ಸವೆದಿದ್ದರು. ಇದಕ್ಕೂ ಮುನ್ನ ಗೋವಾದಲ್ಲಿಯೇ ಹೊಸ ವರ್ಷವನ್ನು ಸ್ವಾಗತಿಸಿ ಪ್ರತೈಕವಾಗಿ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳ ಕೈಗೆ ಇನ್ನೊಮ್ಮೆ ಸಿಕ್ಕಿ ಬಿದ್ದಿದ್ದರು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ.

ಇನ್ನುಳಿದಂತೆ ಸದ್ಯಕ್ಕೆ ರಶ್ಮಿಕಾ ಮಂದಣ್ಣ ಪುಷ್ಪ 3 ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಚಿತ್ರದಲ್ಲಿ ಕೂಡ ರಶ್ಮಿಕಾ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆಯುಷ್ಮಾನ್ ಖುರಾನ ಜೊತೆ ಥಾಮಾ ಚಿತ್ರದಲ್ಲಿ ಕೂಡ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಅತ್ತ ವಿಜಯ್ ದೇವರಕೊಂಡ ಕೂಡ ಚಿತ್ರವೊಂದನ್ನು ಒಪ್ಪಿಕೊಂಡಿದ್ದು ಇನ್ನು ಹೆಸರಿಡದ ಈ ಚಿತ್ರ ಮುಂದಿನ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X