'ಪುಷ್ಪ-2' ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ ಎಷ್ಟು?

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸದ್ಯ 'ಪುಷ್ಪ'-2 ಚಿತ್ರದಲ್ಲಿ ಶ್ರೀವಲ್ಲಿಯಾಗಿ ಮತ್ತೆ ಪ್ರೇಕ್ಷಕರನ್ನು ರಂಜಿಸಲು ರೋಶ್ ಸಿನಿರಸಿಕರ ಮುಂದೆ ಬರ್ತಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಚಿತ್ರದಲ್ಲಿ ರಶ್ಮಿಕಾಗೆ ಬಹಳ ತೂಕವಾದ ಪಾತ್ರವೇ ಸಿಕ್ಕಿರುವಂತೆ ಕಾಣುತ್ತಿದೆ.

3 ವರ್ಷಗಳ ಹಿಂದೆ ಬಂದಿದ್ದ ' ಪುಷ್ಪ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆದ್ದಿತ್ತು. ಅದರ ಸೀಕ್ವೆಲ್ ಎನ್ನುವ ಎನ್ನುವ ಬಲ ಎರಡನೇ ಭಾಗಕ್ಕೆ ಸಿಕ್ಕಿದೆ. ಅದೇ ಕಾರಣಕ್ಕೆ ನಿರೀಕ್ಷೆ ಹೆಚ್ಚಾಗಿದೆ. ಪಾರ್ಟ್‌-2 ಬಜೆಟ್, ಸ್ಕೇಲ್ ಎಲ್ಲವೂ ದೊಡ್ಡದಾಗಿದೆ. ಅದೇ ರೀತಿ ಕಲಾವಿದರು, ತಂತ್ರಜ್ಞರ ಸಂಭಾವನೆ ಕೂಡ ಹೆಚ್ಚಾಗಿದೆ. ಕ್ರೇಜ್‌ಗೆ ತಕ್ಕಂತೆ ಎಲ್ಲರೂ ಡಿಮ್ಯಾಂಡ್ ಮಾಡಿ ತಮ್ಮ ಪಾಲು ಪಡೆದಿದ್ದಾರೆ ಎನ್ನಲಾಗ್ತಿದೆ.

Rashmika Mandanna charges a whopping amount for Pushpa-2 the Rule

ಅಲ್ಲು ಅರ್ಜುನ್ ದಾಖಲೆ ಮೊತ್ತದ ಸಂಭಾವನೆಯನ್ನು 'ಪುಷ್ಪ'-2 ಚಿತ್ರಕ್ಕಾಗಿ ಪಡೆದಿರುವ ಅಂದಾಜಿದೆ. ಕಳೆದ 6 ವರ್ಷಗಳಿಂದ ಇದೊಂದು ಚಿತ್ರಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸದ್ಯ ಟ್ರೈಲರ್‌ನಲ್ಲಿ ಕೂಡ ಪುಷ್ಪರಾಜ್ ಆರ್ಭಟ ಅಭಿಮಾನಿಗಳ ಮನಗೆದ್ದಿದೆ. ಚಿತ್ರದ 1000 ಕೋಟಿ ರೂ. ಕಲೆಕ್ಷನ್ ಮಾಡುವ ಲೆಕ್ಕಾಚಾರವೂ ನಡೀತಿದೆ.

'ಪುಷ್ಪ'-2 ಪ್ರೀ ರಿಲೀಸ್ ಬ್ಯುಸಿನೆಸ್ 1000 ಕೋಟಿ ರೂ. ಗಡಿ ದಾಟಿದೆ. ಥ್ರಿಯೇಟ್ರಿಕಲ್ ರೈಟ್ಸ್ ಮಾತ್ರವಲ್ಲ, ಆಡಿಯೋ, ಡಿಜಿಟಲ್, ಸ್ಯಾಟಲೈಟ್ ರೈಟ್ಸ್ ಕೂಡ ಭಾರೀ ಮೊತ್ತಕ್ಕೆ ಬಿಕರಿಯಾಗಿದೆ. ಇನ್ನು 'ಪುಷ್ಪ' ಪ್ರೇಯಸಿ ಶ್ರೀವಲ್ಲಿಯಾಗಿ ರಶ್ಮಿಕಾ ಮೋಡಿ ಮಾಡಿದ್ದರು. ಹಾಗಾಗಿ ಸೀಕ್ವೆಲ್‌ನಲ್ಲಿ ಆಕೆಯ ಪಾತ್ರಕ್ಕೆ ಹೆಚ್ಚಿನ ಮಹತ್ವ ಇದೆ. ಟ್ರೈಲರ್‌ನಲ್ಲಿ ಕೂಡ ಅದನ್ನು ಗಮನಿಸಬಹುದು. ಹಾಗಾಗಿ ರಶ್ಮಿಕಾ ಭಾರೀ ಸಂಭಾವನೆಯನ್ನೇ ಪಡೆದಿರುವ ಅಂದಾಜಿದೆ.

Rashmika Mandanna charges a whopping amount for Pushpa-2 the Rule

ಬಾಲಿವುಡ್‌ನಲ್ಲಿ ಕೂಡ ರಶ್ಮಿಕಾ ಮಂದಣ್ಣ ಹವಾ ಜೋರಾಗಿದೆ. ಈಗಾಗಲೇ ಹಿಂದಿ ಸಿನಿಮಾಗಳಲ್ಲಿ ನಟಿಸಿ ಅಲ್ಲಿನ ಪ್ರೇಕ್ಷಕರ ಮನಗೆದ್ದಿದ್ದಾರೆ. 'ಪುಷ್ಪ'-2 ರಿಲೀಸ್ ಮರುದಿನವೇ 'ಚಾವ' ಚಿತ್ರದ ಮೂಲಕ ರಶ್ಮಿಕಾ ಹಿಂದಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಹೀಗೆ ಕೊಡಗಿನ ಬೆಡಗಿನ ದರ್ಬಾರ್ ಜೋರಾಗಿದೆ. 'ಪುಷ್ಪ'-2 ಚಿತ್ರಕ್ಕಾಗಿ ಆಕೆ 10 ರಿಂದ 12 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ. ಅಂದಹಾಗೆ ರಶ್ಮಿಕಾ ಕರಿಯರ್‌ನಲ್ಲೇ ಇದು ಅಧಿಕ ಎನ್ನುವ ಮಾತುಗಳು ಕೇಳಿಬರ್ತಿದೆ.

ಪಾಟ್ನಾದಲ್ಲಿ ಇತ್ತೀಚೆಗೆ 'ಪುಷ್ಪ-2' ಟ್ರೈಲರ್ ಲಾಂಚ್ ಈವೆಂಟ್ ನಡೀತು. ಅಲ್ಲೂ ರಶ್ಮಿಕಾಗೆ ಭವ್ಯ ಸ್ವಾಗತವೇ ಸಿಕ್ಕಿತ್ತು. ಇನ್ನು 'ಪುಷ್ಪ'-2 ಸಾಂಗ್ಸ್ ಹಿಟ್ ಆಗಿದೆ. ಕಪಲ್ ಸಾಂಗ್‌ನಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ಮೊದಲ ಭಾಗದಲ್ಲಿ ಪುಷ್ಪರಾಜ್ ಪ್ರೇಯಸಿಯಾಗಿದ್ದ ಶ್ರೀವಲ್ಲಿ ಕೊನೆಗೆ ಆತನ ಜೊತೆ ಹಸೆಮಣೆ ಏರಿದ್ದಳು. ಅಲ್ಲಿಂದ ಸೀಕ್ವೆಲ್ ಕಥೆ ಮುಂದುವರೆಯಲಿದೆ.

"ಶ್ರೀವಲ್ಲಿ ನನ್ನ ಪ್ರಾಣ, ಹೆಂಡ್ತಿ ಮಾತು ಗಂಡ ಕೇಳಿದ್ರೆ ಹೆಂಗಿರ್ತಾದೋ ಪ್ರಪಂಚಕ್ಕೆಲ್ಲಾ ತೋರಿಸ್ತೀನಿ" ಎನ್ನುವ ಪುಷ್ಪರಾಜ್ ಡೈಲಾಗ್ ಟ್ರೈಲರ್‌ನಲ್ಲಿ ಹೈಲೆಟ್ ಆಗಿದೆ. ಅಂದರೆ ಹೆಂಡ್ತಿ ಮಾತಿನಂತೆ ಪುಷ್ಪ ಈ ಬಾರಿ ತಮ್ಮ ಸಾಮ್ರಾಜ್ಯವನ್ನು ದೇಶ, ವಿದೇಶಕ್ಕೆ ವಿಸ್ತರಿಸುತ್ತಾನೆ ಎನ್ನುವುದನ್ನು ಸುಕುಮಾರ್ ಹೇಳುವುದಕ್ಕೆ ಹೊರಟಿದ್ದಾರೆ ಎನ್ನುವ ಕುತೂಹಳ ಮೂಡಿದೆ. ಕನ್ನಡದಲ್ಲಿ ತಮ್ಮ ಪಾತ್ರಕ್ಕೆ ರಶ್ಮಿಕಾ ಡಬ್ಬಿಂಗ್ ಮಾಡಿಲ್ಲ ಎನ್ನುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ.

ಡಿಸೆಂಬರ್ 5ಕ್ಕೆ 'ಪುಷ್ಪ'-2 ಸಿನಿಮಾ ತೆರೆಗೆ ಬರಲಿದೆ. ಅದಕ್ಕೂ ಮುನ್ನ 6 ನಗರಗಳಲ್ಲಿ ಪ್ರೀ ರಿಲೀಸ್ ಈವೆಂಟ್‌ ಪ್ಲ್ಯಾನ್ ನಡೀತಿದೆ. ಇನ್ನು ಶ್ರೀಲೀಲಾ ಹೆಜ್ಜ ಹಾಕಿರುವ ಸ್ಪೆಷಲ್ ಸಾಂಗ್ ಲಿರಿಕಲ್ ವೀಡಿಯೋ ಸಹ ಬಿಡುಗಡೆ ಆಗಬೇಕಿದೆ. ಒಟ್ಟಾರೆ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.

More from Filmibeat

English summary
Rashmika Mandanna's Remuneration For Pushpa-2 the rule Will Blow Your Minds Away;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X