ವಿಜಯ್ ದೇವರಕೊಂಡ ತಮ್ಮನ ಹೊಸ ಸಿನಿಮಾ ನೋಡಿ ಕಣ್ಣೀರಿಟ್ಟ ರಶ್ಮಿಕಾ!

ಸದ್ಯ ಟಾಲಿವುಡ್‌ನಲ್ಲಿ ಪ್ರಸ್ತುತ ಅತಿಹೆಚ್ಚು ಸದ್ದು ಮಾಡುತ್ತಿರುವ ಚಿತ್ರವೆಂದರೆ ಬೇಬಿ. ಆನಂದ್ ದೇವರಕೊಂಡ, ವೈಷ್ಣವಿ ಚೈತನ್ಯ ಹಾಗೂ ವಿರಾಜ್ ಅಶ್ವಿನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರಕ್ಕೆ ಶ್ರೀ ರಾಜೇಶ್ ನೀಲಮ್ ಆಕ್ಷನ್ ಕಟ್ ಹೇಳಿದ್ದಾರೆ.

ಬಿಡುಗಡೆಗೂ ಮುನ್ನ ತನ್ನ ಹಾಡುಗಳಿಂದ ಹಾಗೂ ಟ್ರೈಲರ್‌ನಿಂದ ಸದ್ದು ಮಾಡಿದ್ದ ಈ ಚಿತ್ರ ವಿವಾದಾತ್ಮಕ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಟಾಕ್ ಕ್ರಿಯೇಟ್ ಮಾಡಿತಾದರೂ ಇದೆಲ್ಲಾ ಪಬ್ಲಿಸಿಟಿ ಸ್ಟಂಟ್, ಇದರಿಂದ ಜನರು ಥಿಯೇಟರ್‌ಗೆ ಬರಲಾರರು ಎಂಬ ಮಾತುಗಳು ಕೇಳಿ ಬಂದಿದ್ದವು.

ಆದರೆ ಚಿತ್ರ ಬಿಡುಗಡೆಯಾದ ಬಳಿಕ ಕಥೆ ವಿಚಾರವಾಗಿ ಜನರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಶಾಲಾ ದಿನಗಳಿಂದ ಓರ್ವನನ್ನು ಪ್ರೀತಿಸುವ ಸ್ಲಂನಲ್ಲಿ ಬೆಳೆದ ಹುಡುಗಿ ಕಾಲೇಜು, ಶ್ರೀಮಂತ ಸ್ನೇಹಿತರು ಸಿಕ್ಕಾಗ ಕಾಲಕ್ಕೆ ತಕ್ಕ ಹಾಗೆ ಹೇಗೆ ಬದಲಾಗ್ತಾಳೆ ಎಂಬ ಒಂದು ಸರಳ ಎಳೆಯ ಮೇಲೆ ರಚಿಸಲಾಗಿರುವ ಈ ಚಿತ್ರವನ್ನು ನೋಡಲು ಸಿನಿ ರಸಿಕರ ದಂಡೇ ಚಿತ್ರಮಂದಿರದತ್ತ ಬರುತ್ತಿದೆ.

ಮೊನ್ನೆ ಶುಕ್ರವಾರ ( ಜುಲೈ 14 ) ಬಿಡುಗಡೆಗೊಂಡ ಈ ಚಿತ್ರ ಮೊದಲ ಎರಡು ದಿನಗಳಲ್ಲಿ ಬರೋಬ್ಬರಿ 14.3 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. 10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಎರಡೇ ದಿನಗಳಲ್ಲಿ ಬ್ರೇಕ್ ಈವನ್ ಮಾಡಿ ಮುಗಿಸಿದ್ದು, ಲಾಭ ಗಳಿಸಲು ಆರಂಭಿಸಿದೆ.

ಹೀಗೆ ಭರ್ಜರಿ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿರುವ ಬೇಬಿ ಚಿತ್ರವನ್ನು ಸೆಲೆಬ್ರಿಟಿಗಳೂ ಸಹ ವೀಕ್ಷಿಸುತ್ತಿದ್ದು, ಚಿತ್ರ ವೀಕ್ಷಿಸಿದ ಬಳಿಕ ಚಿತ್ರದ ಬಗೆಗಿನ ತಮ್ಮ ವಿಮರ್ಶೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಅದೇ ರೀತಿ ವಿಜಯ್ ದೇವರಕೊಂಡಗೆ ಆಪ್ತ ಸ್ನೇಹಿತೆಯಾಗಿರುವ ರಶ್ಮಿಕಾ ಮಂದಣ್ಣ ಸಹ ಬೇಬಿ ಚಿತ್ರವನ್ನು ವೀಕ್ಷಿಸಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಚಿತ್ರದ ಬಗ್ಗೆ ಟ್ವೀಟ್ ಮಾಡಿ ಬರೆದುಕೊಂಡಿದ್ದಾರೆ.

rashmika about baby

"ನಾನು ಬೇಬಿ ಚಿತ್ರವನ್ನು ವೀಕ್ಷಿಸಿದೆ. ಚಿತ್ರದಲ್ಲಿ ಕಲಾವಿದರು ಮಾಡಿರುವ ನಟನೆಯನ್ನು ನೋಡಿ ಕಣ್ಣಲ್ಲಿ ನೀರು ತುಂಬಿ ಬಂತು ಹಾಗೂ ಚಿತ್ರದ ದೃಶ್ಯಗಳು ನನ್ನ ಹೃದಯದಲ್ಲಿ ತುಂಬಾ ಸಮಯದವರೆಗೂ ಕೆತ್ತಿರಲಿದೆ ಎನಿಸುತ್ತದೆ. ಚಿತ್ರತಂಡಕ್ಕೆ ಕಂಗ್ರಾಜುಲೇಷನ್ಸ್" ಎಂದು ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ.

More from Filmibeat

English summary
Rashmika Mandanna cried after watching Anand Deverakonda's Baby movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X