ಅವಕಾಶಕ್ಕಾಗಿ ಹುಟ್ಟೂರನ್ನೇ ಮರೆತ ರಶ್ಮಿಕಾ ಮಂದಣ್ಣ, ಇಂಥಾ ದುರ್ಗತಿ ಬರಬಾರದಿತ್ತು ಎಂದ ಕನ್ನಡಿಗರು..!
ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರೀಲಿ ಕೊಡೆ ಹಿಡಿದ - ಇದು ತೀರಾ ಓಲ್ಡ್ ಗಾದೆ. ಆದರೆ ಈ ರಶ್ಮಿಕಾ ಮಂದಣ್ಣ ಅವರಂತಾ ನಟಿಯರು ಈ ಮಾತನ್ನು ಇವತ್ತಿಗೂ ಜೀವಂತವಾಗಿಟ್ಟಿದ್ದಾರೆ. ಇದಕ್ಕೆ ರಶ್ಮಿಕಾ ಮಂದಣ್ಣ ಮೊನ್ನೆ ಮಾತನಾಡಿದ ಮಾತೇ ಸಾಕ್ಷಿ.
ಹೌದು, ಎಲ್ಲರಿಗೆ ಗೊತ್ತಿರುವಂತೆ ರಶ್ಮಿಕಾ ಮಂದಣ್ಣ ಅವರ ವೃತ್ತಿ ಜೀವನಕ್ಕೆ ಮೊದಲು ಅಡಿಪಾಯ ಹಾಕಿದ್ದೇ ಕನ್ನಡ ಚಿತ್ರರಂಗ. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆದು ರಾತ್ರೋ ರಾತ್ರಿ ಸ್ಟಾರ್ ಆದ ನಟಿ ರಶ್ಮಿಕಾ ಮಂದಣ್ಣ. ಅಭಿನಯಿಸಿದ ಚೊಚ್ಚಲ ಚಿತ್ರವನ್ನೇ ಟ್ರಂಪ್ ಕಾರ್ಡಾಗಿ ಇಟ್ಟುಕೊಂಡು ತೆಲುಗು ಚಿತ್ರರಂಗವನ್ನು ಪ್ರವೇಶಿಸಿದ ರಶ್ಮಿಕಾ ಬೆರಳೆಣಿಕೆಯ ದಿನಗಳಲ್ಲೇ ಬಹುಬೇಡಿಕೆಯ ನಟಿಯಾಗಿ ಬೆಳೆದದ್ದು ಕನ್ನಡಿಗರಿಗೆ ಹೆಮ್ಮೆ.

ಆದರೆ ರಶ್ಮಿಕಾಗೆ ಅದ್ಯಾವಾಗ ಪರ ಭಾಷೆಗಳಿಂದ ಅವಕಾಶಗಳು ದುಬಾರಿಯಾಗುತ್ತಾ ಹೋಯಿತೋ ಪಾಪ ರಶ್ಮಿಕಾ ಅಡ್ಡದಾರಿಯ ಮೇಲೆ ಅಡ್ಡದಾರಿಯನ್ನು ಹಿಡಿಯುಲು ಶುರು ಮಾಡಿದರು. ಆರಂಭದಲ್ಲಿ ಯಶ್ ಅವರನ್ನ ಅಲ್ಲಗಳೆದು ಮಾತನಾಡಿದ್ದ ರಶ್ಮಿಕಾ ತೆಲುಗಿನಲ್ಲಿ ಅವಕಾಶ ದೊರೆಯುತ್ತಿದ್ದಂತೆ ಎಂಗೇಜ್ ಆಗಿದ್ದ ರಕ್ಷಿತ್ ಶೆಟ್ಟಿಯವರನ್ನು ಎಡಗಾಲಲ್ಲಿ ಒದ್ದು ವಿಜಯ್ ದೇವರಕೊಂಡನ ಟೀಮು ಸೇರಿಬಿಟ್ಟರು. ಮಾಡಿದವರ ಪಾಪ ಆಡಿದವರ ಬಾಯಿಗೆ.. ಇರಲಿ.
ಇಂಥಾ ರಶ್ಮಿಕಾ ಈಗ ಇನ್ನೊಮ್ಮೆ ಕನ್ನಡಿಗರನ್ನು ಕೆರಳಿಸಿದ್ದಾರೆ. ಹೌದು,ರಶ್ಮಿಕಾ ಮಂದಣ್ಣ ಕೊಡಗಿನವರು. ಇವರು ಅಭಿನಯಿಸಿದ ಮೊದಲ ಚಿತ್ರ ಕನ್ನಡದ್ದು ಎಂಬ ವಿಚಾರ ಜಗತ್ತಿಗೆ ಗೊತ್ತು. ಆದರೆ ರಶ್ಮಿಕಾ ಮಾತ್ರ ಈ ವಿಚಾರವನ್ನು ಒಪ್ಪಲು ಸುತಾರಾಂ ತಯಾರಿಲ್ಲ. ಯಾಕೆಂದರೆ ಹೆತ್ತ ತಾಯಿಯನ್ನು ಅಮ್ಮ ಎನ್ನುವ ಬದಲು ಪರದೇಶಿ ತಾಯಿಯನ್ನು ಮಮ್ಮಿ ಎಂದು ಕರೆಯುವ ಹುಚ್ಚು ರಶ್ಮಿಕಾಗೆ ಹಿಡಿದಿದೆ. ಇದಕ್ಕೆ ಇನ್ನೊಂದು ಕೈಗನ್ನಡಿ ಎನ್ನುವಂತೆ ರಶ್ಮಿಕಾ ಮಂದಣ್ಣ ಈಗ 'ನಾನು ಹೈದರಾಬಾದ್'ನವಳು ಎಂದು ತುಂಬಾ ಹೆಮ್ಮೆಯಿಂದ ಹೇಳಿದ್ದಾರೆ.
ಹೌದು, ರಶ್ಮಿಕಾ ಮಂದಣ್ಣ ಅಭಿನಯದ ಛಾವಾ ಎಂಬ ಹೆಸರಿನ ಹಿಂದಿ ಚಿತ್ರವೊಂದು ಇಂದು ತೆರೆಗೆ ಬಂದಿದೆ. ಈ ಹಿನ್ನೆಲೆ ಕಾಲು ಮುರಿದಿದ್ದರೂ ಕೂಡ ವೀಲ್‌ಚೇರ್‌ನಲ್ಲಿಯೇ ಕುಳಿತು ಚಿತ್ರದ ಪ್ರಚಾರ ಮಾಡುತ್ತಿದ್ದ ರಶ್ಮಿಕಾ ಚಿತ್ರದ ಪ್ರಚಾರ ಮಾಡುವ ಸಮಯದಲ್ಲಿ ನಾನು ಹೈದರಾಬಾದ್‌ನವಳು ನಾನು ಅಲ್ಲಿಂದ ಒಬ್ಬಂಟಿಯಾಗಿ ಬಂದಿದ್ದೇನೆ, ಆದರೆ ಈಗ ನಾನು ನಿಮ್ಮ ಕುಟುಂಬದ ಭಾಗ ಆಗಿದ್ದೇನೆ ಎಂದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ರಶ್ಮಿಕಾ ಅವರ ಈ ಮಾತು ಈಗ ಅನೇಕ ಕನ್ನಡಿಗರನ್ನು ಕೆರಳಿಸಿದೆ.
ಹೀಗಾಗಿಯೇ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಆಕ್ರೋಶ ಹೊರ ಹಾಕುತ್ತಿರುವ ನೀವು ಯಾವಾಗ ಹೈದರಾಬಾದ್‌ನವರಾದ್ರೀ ? ನಿಮ್ಮ ಜನ್ಮ ಪ್ರಮಾಣ ಪತ್ರವನ್ನು ಬದಲಿಸಿಕೊಂಡಿದ್ದೀರಾ ಹೇಗೆ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಮದುವೆಯಾಗುವ ಮುನ್ನವೇ ರಶ್ಮಿಕಾಗೆ ಹೈದರಾಬಾದ್ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ ಎನ್ನುತ್ತಿದ್ದಾರೆ. ಪ್ರೀತಿಗಾಗಿ ಊರನ್ನೇ ಮರೆತ ರಶ್ಮಿಕಾ, ನಿಮ್ಮನ್ನು ದ್ಬೇಷಿಸಲು ನಿತ್ಯ ಹೊಸ ಕಾರಣವನ್ನು ನಮಗೆ ಕೊಡುವುದಕ್ಕೆ ನಿಮಗೆ ಧನ್ಯವಾದ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ರಶ್ಮಿಕಾ ಮಂದಣ್ಣಗಿಂತ ದೀಪಿಕಾ ಪಡುಕೋಣೆ, ಶಿಲ್ಪಾ ಶೆಟ್ಟಿ ಎಷ್ಟೋ ವಾಸಿ ಅವರು ಕೊನೆ ಪಕ್ಷ ನಾವು ಕರ್ನಾಟಕದವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಎಂದಿದ್ದಾರೆ.


Click it and Unblock the Notifications











