ಸಂದರ್ಶನದಲ್ಲಿ ತೆಲುಗು ನಟ ನಿತಿನ್ ಬಾಯಿಂದ ಬಂತು ಸತ್ಯ: ರಶ್ಮಿಕಾಗೆ ಮುಜುಗರ.!
Recommended Video
ಟಾಲಿವುಡ್ ನಲ್ಲಿ ಕನ್ನಡದ ಹುಡುಗಿ, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಬಿಜಿಯಾಗಿರುವುದು ನಿಮಗೆಲ್ಲಾ ಗೊತ್ತೇ ಇದೆ. ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ನಿತಿನ್ ಅಭಿನಯದ 'ಭೀಷ್ಮ' ಸಿನಿಮಾ ಇದೇ ತಿಂಗಳು ಬಿಡುಗಡೆ ಆಗಲಿದೆ.
ಫೆಬ್ರವರಿ 21 ರಂದು ವಿಶ್ವದಾದ್ಯಂತ 'ಭೀಷ್ಮ' ಸಿನಿಮಾ ರಿಲೀಸ್ ಆಗಲಿದೆ. ಹೀಗಾಗಿ, ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ನಿತಿನ್ ಮತ್ತು ರಶ್ಮಿಕಾ ತೊಡಗಿದ್ದಾರೆ. 'ಭೀಷ್ಮ' ಚಿತ್ರದ ಪ್ರಮೋಷನ್ ಸಲುವಾಗಿ ನಿತಿನ್ ಮತ್ತು ರಶ್ಮಿಕಾ ಸಂದರ್ಶನಗಳನ್ನು ನೀಡುವುದರಲ್ಲಿ ಬಿಜಿಯಾಗಿದ್ದಾರೆ.
ಹೀಗಿರುವಾಗಲೇ, ಸಂದರ್ಶನದ ಮಧ್ಯೆ ರಶ್ಮಿಕಾ ಬಗ್ಗೆ ನಿತಿನ್ ಒಂದು ಸತ್ಯ ಬಾಯ್ಬಿಟ್ಟಿದ್ದಾರೆ. ಇದರಿಂದ ನಟಿ ರಶ್ಮಿಕಾ ಮಂದಣ್ಣಗೆ ಮುಜುಗರ ಉಂಟಾಗಿದೆ. ಏನದು ಅಂತೀರಾ..? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ..

ಸಂದರ್ಶನದಲ್ಲಿ ನಿತಿನ್ ಹೇಳಿದ್ದೇನು.?
'ಭೀಷ್ಮ' ಪ್ರಮೋಷನ್ ನಿಮಿತ್ತ ನಿತಿನ್ ಸಂದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ, ''ರಶ್ಮಿಕಾ ಬಗ್ಗೆ ಯಾರಿಗೂ ತಿಳಿಯದ ಸಂಗತಿಯನ್ನ ಹೇಳಿ ಎಂದು ನನಗೆ ಕೇಳಿ.. ನಾನು ಉತ್ತರ ಕೊಡುತ್ತೇನೆ. ಹಾಗೇ, ನನ್ನ ಬಗ್ಗೆ ಯಾರಿಗೂ ಗೊತ್ತಿಲ್ಲದ ಸಂಗತಿಯನ್ನ ರಶ್ಮಿಕಾಗೆ ಕೇಳಿ'' ಎಂದು ನಿರೂಪಕಿಗೆ ನಿತಿನ್ ಸಲಹೆ ನೀಡಿದರು.

ರಶ್ಮಿಕಾಗೆ ಏನೂ ಹೊಳೆಯಲಿಲ್ಲ.!
ನಿತಿನ್ ಕೊಟ್ಟ ಸಲಹೆಯಂತೆ ''ನಿತಿನ್ ಬಗ್ಗೆ ಯಾರಿಗೂ ತಿಳಿಯದ ಸೀಕ್ರೆಟ್ ಹೇಳಿ'' ಎಂದು ರಶ್ಮಿಕಾಗೆ ನಿರೂಪಕಿ ಪ್ರಶ್ನೆ ಕೇಳಿದರು. ಆಗ ನಿತಿನ್ ಬಗ್ಗೆ ರಶ್ಮಿಕಾಗೆ ಏನೂ ಹೊಳೆಯಲಿಲ್ಲ. ಬಳಿಕ, ''ರಶ್ಮಿಕಾ ಬಗ್ಗೆ ಒಂದು ಸೀಕ್ರೆಟ್ ನಾನು ಹೇಳ್ತೇನೆ'' ಅಂತ ಒಂದು ಸತ್ಯವನ್ನ ನಿತಿನ್ ಬಾಯ್ಬಿಟ್ಟರು.

ನಿತಿನ್ ಬಾಯ್ಬಿಟ್ಟ ಸತ್ಯ ಏನು.?
''ಸಾಮಾನ್ಯವಾಗಿ ಸಂಜೆ ಹೊತ್ತಲ್ಲಿ ಬ್ರೆಡ್, ದೋಸೆ, ಸ್ವೀಟ್.. ಹೀಗೆ ಏನಾದರೂ ಸ್ನ್ಯಾಕ್ಸ್ ತಿಂತೀವಿ ಅಲ್ವಾ.? ಆದ್ರೆ, ರಶ್ಮಿಕಾ ಮಂದಣ್ಣ ಏನು ತಿಂತಾರೆ ಗೊತ್ತಾ.? ಸಂಜೆ ಹೊತ್ತು ಸ್ನ್ಯಾಕ್ಸ್ ಆಗಿ ರಶ್ಮಿಕಾ ನಾಯಿ ಬಿಸ್ಕೆಟ್ ಗಳನ್ನು ತಿಂತಾರೆ'' ಅಂತ ನಿತಿನ್ ಹೇಳಿಬಿಟ್ಟರು.

ರಶ್ಮಿಕಾಗೆ ಮುಜುಗರ.!
ಅಷ್ಟೊತ್ತಿಗೆ ನಾಯಿ ಬಿಸ್ಕೆಟ್ ವಿಚಾರವನ್ನ ಹೇಳಬೇಡಿ ಅಂತ ರಶ್ಮಿಕಾ ಎಷ್ಟೇ ತಡೆದರೂ, ನಿತಿನ್ ಸುಮ್ಮನಾಗಲಿಲ್ಲ. ''ರಶ್ಮಿಕಾ ನಾಯಿ ಬಿಸ್ಕೆಟ್ ತಿನ್ನುತ್ತಾರೆ'' ಅಂತ ಹೇಳೇಬಿಟ್ಟರು. ಅದು ರಶ್ಮಿಕಾಗೆ ಮುಜುಗರ ಉಂಟು ಮಾಡಿತು. ಕಡೆಗೆ ನಾಯಿ ಬಿಸ್ಕೆಟ್ ತಿಂದ ಬಗ್ಗೆ ರಶ್ಮಿಕಾ ಕ್ಲಾರಿಟಿ ಕೊಡಲು ಆರಂಭಿಸಿದರು.

ಒಮ್ಮೆ ಟೇಸ್ಟ್ ಮಾಡಿದ್ದೆ.!
''ನಾನು ಒಂದು ಬಾರಿ ಮಾತ್ರ ನಾಯಿ ಬಿಸ್ಕೆಟ್ ತಿಂದಿದ್ದೆ. ಅದರ ರುಚಿ ನೋಡಿದ್ದೆ ಅಷ್ಟೇ. ನಮ್ಮ ಮನೆಯಲ್ಲಿ ನಾಯಿ ಮರಿ ಇದೆ. ಅದು ಪೆಡಿಗ್ರೀ ಬಿಸ್ಕೆಟ್ ಇಷ್ಟ ಪಡುತ್ತದೆ. ಹೀಗಾಗಿ, ಅದರ ರುಚಿಯನ್ನ ಒಮ್ಮೆ ನೋಡಿದ್ದೆ. ಅದನ್ನ ನಿತಿನ್ ಬಳಿ ಹೇಳಿಕೊಂಡಿದ್ದೆ. ಆಗ ನಿತಿನ್ ಶಾಕ್ ಆಗಿದ್ದರು'' ಅಂತ ರಶ್ಮಿಕಾ ಹೇಳಿದರು.

ವೈರಲ್ ಆದ ವಿಡಿಯೋ
ಸದ್ಯ ಎಲ್ಲೆಡೆ ರಶ್ಮಿಕಾ ನಾಯಿ ಬಿಸ್ಕೆಟ್ ವಿಚಾರವೇ ಸದ್ದು ಮಾಡುತ್ತಿದೆ. ನಾಯಿ ಬಿಸ್ಕೆಟ್ ಕುರಿತು ನಿತಿನ್-ರಶ್ಮಿಕಾ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.


Click it and Unblock the Notifications











