ರಶ್ಮಿಕಾ ಮಂದಣ್ಣ ಕಡೆ ತಿರುಗಿದ ಪೂಜಾ ಹೆಗ್ಡೆ ಅವಕಾಶಗಳು!

ಕರ್ನಾಟಕ ಮೂಲದ ಇಬ್ಬರು ನಟಿಯರು ತಮಿಳು, ತೆಲುಗು ಸೇರಿದಂತೆ ಬಾಲಿವುಡ್‌ನಲ್ಲೂ ಸಿಕ್ಕಾ ಪಟ್ಟೆ ಮಿಂಚುತ್ತಿದ್ದಾರೆ. ವಿಶೇಷ ಅಂದರೆ ಈ ನಟಿಯರ ನಡುವೆಯೇ ದೊಡ್ಡ ಮಟ್ಟಿನ ಸ್ಪರ್ಧೆ ಶುರುವಾಗಿದೆ. ಇವರಿಬ್ಬರ ನಡುವೆ ಕೋಲ್ಡ್‌ ವಾರ್‌ ನಡೆಯುತ್ತಿದೆ ಎನ್ನುವ ಗುಸುಗುಸು ಕೇಳಿ ಬರ್ತಿದೆ. ಆ ನಟಿಯರು ಮತ್ಯಾರೂ ಅಲ್ಲ ರಶ್ಮಿಕಾ ಮಂದಣ್ಣ ಮತ್ತು ಪುಜಾ ಹೆಗ್ಡೆ.

ಈ ಎರಡು ಹೆಸರನ್ನು ಕೇಳಿದಾಕ್ಷಣ ನಿಮಗೆ ಅವರ ನಡುವಿನ ವೈಮನಸ್ಸಿನ ಬಗ್ಗೆ ಹರಿದಾಡಿದ ಗಾಸಿಪ್‌ಗಳು ನೆನಪಾಗಬಹುದು. ಆದರೆ ಈಗ ಮತ್ತೆ ಇವರ ಬಗ್ಗೆ ಮಾತನಾಡಲು ಕಾರಣ. ಈ ಜೋಡಿ ಬಗ್ಗೆ ಹರಿದಾಡುತ್ತಿರುವ ಮತ್ತೊಂದು ದೊಡ್ಡ ಸುದ್ದಿ. ಇಲ್ಲಿ ಕೂಡ ಯಾರು ಹೆಚ್ಚು ಯಾರು ಕಡಿಮೆ ಎನ್ನುವ ಚರ್ಚೆ ಶುರುವಾಗಿದೆ.

ನಟಿ ರಶ್ಮಿಕಾ ಮಂದಣ್ಣ ನೋಡ ನೋಡುತ್ತಿದ್ದಂತೆಯೇ ಸಾಕಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಕನ್ನಡದಿಂದ ಶುರುವಾದ ಅವರ ಸಿನಿಮಾ ಪಯಣ ಸದ್ಯ ಬಾಲಿವುಡ್‌ ತನಕ ತಲುಪಿದೆ. ಈಗ ಬಹುತೇಕ ಎಲ್ಲಾ ಚಿತ್ರರಂಗದಲ್ಲೂ ರಶ್ಮಿಕಾ ಬ್ಯುಸಿಯಾಗಿದ್ದಾರೆ.

ಪೂಜಾ ಹೆಗ್ಡೆಯನ್ನು ಹಿಂದಿಕ್ಕಿದ ನಟಿ ರಶ್ಮಿಕಾ!

ಪೂಜಾ ಹೆಗ್ಡೆಯನ್ನು ಹಿಂದಿಕ್ಕಿದ ನಟಿ ರಶ್ಮಿಕಾ!

ನಟಿ ರಶ್ಮಿಕಾ ಮಂದಣ್ಣ ಮತ್ತು ಪೂಜಾ ಹೆಗ್ಡೆ ಚಿತ್ರಗಳ ವಿಚಾರದಲ್ಲಿ ಸದ್ದು ಮಾಡುತ್ತಾ ಇದ್ದರು. ಸ್ಟಾರ್ ನಟರ ಜೊತೆಗೆ ಚಿತ್ರಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಈ ಇಬ್ಬರ ನಡುವೆ ಕೋಲ್ಡ್‌ ವಾರ್‌ ಮೊದಲಿನಿಂದಲು ನಡೆಯುತ್ತಲೆ ಇದೆ. ಕೆಲವು ಚಿತ್ರಗಳಿಗೆ ರಶ್ಮಿಕಾ ಮತ್ತು ಪೂಜಾ ಹೆಗ್ಡೆ ಹೆಸರುಗಳ ನಡುವೆ ಪೈಪೋಟಿ ಇರುವುದು ಇಬ್ಬರ ನಡುವಿನ ಕೋಲ್ಡ್‌ವಾರ್‌ ಕೊಂಚ ಹೆಚ್ಚಾಗಲು ಕಾರಣವಾಗಿದೆಯಂತೆ. ಸದ್ಯ ಪೂಜಾ ಹೆಗ್ಡೆಗಿಂತಲೂ ರಶ್ಮಿಕಾ ತೆಲುಗು, ತಮಿಳು ಮತ್ತು ಬಾಲಿವುಡ್‌ನಲ್ಲಿ ಹೆಚ್ಚಾಗಿ ಸಿನಿಮಾಗಳನ್ನು ಮಾಡುತ್ತಿದ್ದಾರೆ.

ರಶ್ಮಿಕಾ ಕಡೆಗೆ ತಿರುಗಿದ ಪೂಜಾ ಹೆಗ್ಡೆ ಬ್ರ್ಯಾಂಡ್ಸ್!

ರಶ್ಮಿಕಾ ಕಡೆಗೆ ತಿರುಗಿದ ಪೂಜಾ ಹೆಗ್ಡೆ ಬ್ರ್ಯಾಂಡ್ಸ್!

ರಶ್ಮಿಕಾ, ಪೂಜಾ ನಡುವಿನ ವಾರ್‌ ಸುದ್ದಿ ಪ್ರಚಲಿತ ಆಗುವುದಕ್ಕೆ ಕಾರಣ ಬ್ರ್ಯಾಂಡ್‌ಗಳು. ಇಷ್ಟು ದಿನ ನಟಿ ಪೂಜಾ ಹೆಗ್ಡೆ ಬೇಕು ಅಂತ ಆಕೆಯ ಹಿಂದೆ ಬಿದ್ದಿದ್ದ ಹಲವಾರು ಬ್ರ್ಯಾಂಡ್‌ಗಳು ಈಗ ನಟಿ ರಶ್ಮಿಕಾ ಮಂದಣ್ಣ ಅವರ ಕಡೆಗೆ ಮುಖ ಮಾಡಿವೆಯಂತೆ. ಇದಕ್ಕೆ ಕಾರಣ ನಟಿ ಪೂಜಾ ಹೆಗ್ಡೆ ಜಾಹೀರಾತಿಗಾಗಿ, ಬ್ರ್ಯಾಂಡ್‌ ಪ್ರಚಾರಕ್ಕಾಗಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದರಂತೆ. ಆದರೆ ರಶ್ಮಿಕಾ ಪೂಜಾ ಅವರಿಗಿಂತ ಕಡಿಮೆ ಸಂಭಾವನೆ ಪಡೆಯುತ್ತಾರೆ ಎನ್ನುವ ಕಾರಣಕ್ಕೆ ಹಲವು ಬ್ರ್ಯಾಂಡ್‌ಗಳು ಪೂಜಾ ಹೆಗ್ಡೆಯನ್ನು ಬಿಟ್ಟು ರಶ್ಮಿಕಾ ಮಂದಣ್ಣ ಕಡೆಗೆ ಮುಖ ಮಾಡಿವೆ. ಇದು ಸದ್ಯ ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಬಿಸಿಬಿಸಿ ಸುದ್ದಿ.

ರಶ್ಮಿಕಾಗೂ ಮೊದಲು ಸಿನಿ ಪಯಣ ಆರಂಭಿಸಿದ ಪೂಜಾ!

ರಶ್ಮಿಕಾಗೂ ಮೊದಲು ಸಿನಿ ಪಯಣ ಆರಂಭಿಸಿದ ಪೂಜಾ!

ನಟಿ ಪೂಜಾ ಹೆಗ್ಡೆ 2010ರಲ್ಲಿ ಮಿಸ್ ಯೂನಿವರ್ಸ್ ರನ್ನರಪ್ ಆಗಿ ಕಿರಿಟ ಧರಿಸಿದರು. ನಂತರ 2012ರಲ್ಲಿ ತಮಿಳು ಚಿತ್ರದ ಮೂಲಕ ಸಿನಿಮಾ ಜರ್ನಿಯನ್ನು ಆರಂಭಿಸಿದರು. ರಶ್ಮಿಕಾಗೂ ಮೊದಲು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ ಪೂಜಾ ಹೆಗ್ಡೆ. ಹಾಗಾಗಿ ರಶ್ಮಿಕಾಗಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರಶ್ಮಿಕಾ 2016ರಲ್ಲಿ ಕಿರಿಕ್‌ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಕನ್ನಡದಲ್ಲಿ ಸಾಲು ಸಾಲು ಚಿತ್ರಗಳನ್ನು ಮಾಡಿದ ಬಳಿಕ ತೆಲುಗು, ತಮಿಳು ಮತ್ತು ಬಾಲಿವುಡ್‌ಗೆ ರಶ್ಮಿಕಾ ಎಂಟ್ರಿ ಕೊಟ್ಟರು.

ರಾಧೆ ಶ್ಯಾಮ್ ಚಿತ್ರದ ರಿಲೀಸ್‌ಗಾಗಿ ಕಾಯುತ್ತಿರುವ ಪೂಜಾ!

ರಾಧೆ ಶ್ಯಾಮ್ ಚಿತ್ರದ ರಿಲೀಸ್‌ಗಾಗಿ ಕಾಯುತ್ತಿರುವ ಪೂಜಾ!

ಸದ್ಯ ನಟಿ ರಶ್ಮಿಕಾ ಅಭಿನಯದ ಪುಷ್ಪ ಚಿತ್ರ ರಿಲೀಸ್‌ ಆಗಿದೆ. ಬಾಕ್ಸಾಫೀಸ್‌ನಲ್ಲಿ ಪುಷ್ಪ ದಾಖಲೆ ಮಾಡುತ್ತಿದೆ. ಇದು ರಶ್ಮಿಕಾಳ ಈ ಬಾರಿಯ ಬಿಗ್‌ ಹಿಟ್. ಆದರೆ ಪೂಜಾಹೆಗ್ಡೆ ಕೂಡ ದಾಖಲೆ ಮಾಡಲು ಸಿದ್ದವಾಗಿದ್ದಾರೆ. ಪ್ರಭಾಸ್ ಜೊತೆಗೆ ಪೂಜಾ ಅಭಿನಯದ 'ರಾಧೆ ಶ್ಯಾಮ್'‌ ರಿಲೀಸ್‌ ಆಗ್ಬೇಕಿದೆ. ಈ ಚಿತ್ರದ ರಿಲೀಸ್‌ಗಾಗಿ ಪೂಜಾ ಹೆಗ್ಡೆ ಕಾಯುತ್ತಿದ್ದಾರೆ.

More from Filmibeat

English summary
Rashmika Mandanna Grab All Brands Of Pooja Hegde By Charging Less
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X