twitter
    For Quick Alerts
    ALLOW NOTIFICATIONS  
    For Daily Alerts

    ನಿರ್ಮಾಪಕರ ತಲೆನೋವು ಹೆಚ್ಚಿಸಿದ ನ್ಯಾಶನಲ್​ ಕ್ರಶ್ ಸಂಭಾವನೆ..!

    |

    ಚಂದನವನದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ರಶ್ಮಿಕಾ ಮಂದಣ್ಣ, ಈಗ ನ್ಯಾಶನಲ್​ ಕ್ರಶ್​ ಆಗಿ ಹೊರ ಹೊಮ್ಮಿದ್ದಾರೆ. ಇದೀಗ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿರುವ ರಶ್ಮಿಕಾ ಮಂದಣ್ಣ ಮತ್ತೆ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ.

    ಸ್ಯಾಂಡಲ್​ವುಡ್​ನ 'ಕಿರಿಕ್​ ಪಾರ್ಟಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ, ಕರ್ನಾಟಕದ ಕ್ರಶ್​ ಎಂದು ಬಹುಬೇಗ ಖ್ಯಾತಿ ಗಳಿಸಿದರು. 'ಕಿರಿಕ್​ ಪಾರ್ಟಿ' ಯಶಸ್ಸಿನ ಬೆನ್ನಲ್ಲೇ ಇತರ ಭಾಷೆಯ ಚಿತ್ರಗಳಲ್ಲಿ ನಟಿಸಿ ಜನ ಮನ್ನಣೆ ಪಡೆದ ರಶ್ಮಿಕಾ, ನ್ಯಾಶನ್​ಕ್ರಶ್​ ಆಗಿ ಸ್ಟಾರ್​ ನಟರೊಡನೆ ನಟಿಸಿ ಸೈ ಎನಿಸಿಕೊಂಡರು.

    'ಪುಷ್ಪ'ರಾಜ್ ಪ್ರೇಯಸಿ ಶ್ರೀವಲ್ಲಿ ಸೀರೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್!'ಪುಷ್ಪ'ರಾಜ್ ಪ್ರೇಯಸಿ ಶ್ರೀವಲ್ಲಿ ಸೀರೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್!

    ಟಾಲಿವುಡ್​ನ ಸ್ಟೈಲ್​ ಐಕಾನ್​ ಅಲ್ಲು ಅರ್ಜುನ್​ ಜೊತೆಗೆ ನಟಿಸಿದ ಪುಷ್ಪ ಚಿತ್ರ 100 ಕೋಟಿಗೂ ಅಧಿಕ ಬಾಕ್ಸ್​ ಆಫೀಸ್​ ಕಲೆಕ್ಷನ್​ ಬಾಚಿಕೊಳ್ಳುವ ಮೂಲಕ ನಿರೀಕ್ಷೆಗೂ ಮೀರಿ ಹಿಟ್​ ಆಗಿದೆ. ಈ ಚಿತ್ರದ ಬಳಿಕ ರಶ್ಮಿಕಾ ಮಂದಣ್ಣ ಖ್ಯಾತಿ ಇನ್ನಷ್ಟು ಹೆಚ್ಚಿದ್ದು, 'ಪುಷ್ಪ-2' ಚಿತ್ರಕ್ಕೂ ಇವರೇ ನಾಯಕಿ ನಟಿಯಾಗಿ ನಟಿಸಲಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ರಶ್ಮಿಕಾ ತಮ್ಮ ಸಂಭಾವನೆಯನ್ನು ಹೆಚ್ಚಿಸಿದ್ದಾರೆ ಎಂದು ವರದಿಯಾಗಿದೆ.

     ಪುಪ್ಪ-2ಗೆ 4 ಕೋಟಿ..ಹಾಗಾದ್ರೆ ಈಗೆಷ್ಟು..?

    ಪುಪ್ಪ-2ಗೆ 4 ಕೋಟಿ..ಹಾಗಾದ್ರೆ ಈಗೆಷ್ಟು..?

    ರಶ್ಮಿಕಾ ಮಂದಣ್ಣ ಭಾರತೀಯ ಚಿತ್ರರಂಗದಲ್ಲೇ ಬಹುಬೇಡಿಕೆಯ ನಟಿಯಾಗಿದ್ದಾರೆ. ಅನೇಕ ಬಿಗ್ ಬಜೆಟ್​ ಚಿತ್ರಗಳು ಇವರನ್ನು ಅರಸಿ ಬರುತ್ತಿದ್ದು, ರಶ್ಮಿಕಾ ಮಾತ್ರ ಕೆಲವೇ ಸಿನಿಮಾಗಳನ್ನಷ್ಟೇ ಆಯ್ಕೆ ಮಾಡುತ್ತಿದ್ದಾರೆ. 'ಪುಷ್ಪ' ಚಿತ್ರದಲ್ಲಿ ಅಲ್ಲು ಅರ್ಜುನ್​ ಹಾಗೂ ರಶ್ಮಿಕಾ ಜೋಡಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದು, ಹೀಗಾಗಿ 'ಪುಷ್ಪ-2' ಚಿತ್ರಕ್ಕೂ ರಶ್ಮಿಕಾ ಓಕೆ ಎಂದಿದ್ದಾರೆ. ಜೊತೆಗೆ ತಮ್ಮ ಸಂಭಾವನೆಯನ್ನು ಕೂಡ ಹೆಚ್ಚಿಸಿದ್ದಾರೆ. ಪುಷ್ಪ-2 ಚಿತ್ರಕ್ಕೆ 4 ಕೋಟಿ ಚಾರ್ಜ್​ ಮಾಡಿದ್ದ ರಶ್ಮಿಕಾ, ತಮ್ಮ ಮುಂದಿನ ಚಿತ್ರಗಳಿಗೆ 5 ಕೋಟಿ ರೂಪಾಯಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿದೆ.

    ವಿಡಿಯೋ: ರಶ್ಮಿಕಾ ಮಂದಣ್ಣ ಭೇಟಿ ಆಗಬೇಕೆಂದ ಈ ಪುಟಾಣಿ ಕ್ಯೂಟಿ ಯಾರು..?ವಿಡಿಯೋ: ರಶ್ಮಿಕಾ ಮಂದಣ್ಣ ಭೇಟಿ ಆಗಬೇಕೆಂದ ಈ ಪುಟಾಣಿ ಕ್ಯೂಟಿ ಯಾರು..?

     ಮತ್ತೆ ಟಾಲಿವುಡ್​ನಲ್ಲಿ ಫೈರ್​ 'ಪುಷ್ಪ' ಹವಾ

    ಮತ್ತೆ ಟಾಲಿವುಡ್​ನಲ್ಲಿ ಫೈರ್​ 'ಪುಷ್ಪ' ಹವಾ

    'ಪುಷ್ಪ' ಮೊದಲ ಚಾಪ್ಟರ್​ ಯಶಸ್ಸಿನ ಬೆನ್ನಲ್ಲೇ 'ಪುಷ್ಪ-2' ಚಿತ್ರಕ್ಕಾಗಿ ಭರ್ಜರಿ ತಯಾರಿ ಆರಂಭವಾಗಿದೆ. ಕಳೆದ ತಿಂಗಳಿನಿಂದ ಚಿತ್ರದ ಮೊದಲ ಹಂತದ ಕೆಲಸಗಳು ಪಾರಂಭವಾಗಿದ್ದು, ಈ ತಿಂಗಳ ಅಂತ್ಯದಲ್ಲಿ ಚಿತ್ರ ಸೆಟ್ಟೇರುವ ನಿರೀಕ್ಷೆಯಿದೆ. 'ಪುಷ್ಪ-2' ಚಿತ್ರಕ್ಕೆ ಸುಕುಮಾರ್​ ಆ್ಯಕ್ಷನ್ ಕಟ್​ ಹೇಳಲಿದ್ದು, ಮೈತ್ರಿ ಮೂವಿ ಮೇಕರ್ಸ್​ ಚಿತ್ರಕ್ಕೆ ಬಂಡವಾಳ ಹಾಕಿದೆ. ಇನ್ನು ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ, ಜೊತೆಗೆ ಫಹಾದ್ ಫಾಜಿಲ್​, ಸುನಿಲ್​, ಅನುಸೂಯ ಭಾರಧ್ವಜ್​, ಡಾಲಿ ಧನಂಜಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

     ಬಿಗ್​ ಬಿ ಜೊತೆ ನಟಿಸಿ ಸೈ ಎನಿಸಿಕೊಂಡ ರಶ್ಮಿಕಾ

    ಬಿಗ್​ ಬಿ ಜೊತೆ ನಟಿಸಿ ಸೈ ಎನಿಸಿಕೊಂಡ ರಶ್ಮಿಕಾ

    ದಕ್ಷಿಣ ಭಾರತದ ಚಿತ್ರಗಳಲ್ಲಿ ಖ್ಯಾತಿ ಪಡೆದಿದ್ದ ರಶ್ಮಿಕಾ ಮಂದಣ್ಣ ವೃತ್ತಿ ಜೀವನದಲ್ಲಿ ಬಹುಬೇಗ ಬಾಲಿವುಡ್​ಗೆ ಕಾಲಿಟ್ಟರು. ಸದ್ಯ ಬಾಲಿವುಡ್​ನಲ್ಲೂ ಸೆನ್ಸೇಷನಲ್​ ಹಿರೋಯಿನ್ ಆಗಿರುವ ರಶ್ಮಿಕಾ, ಕಾಲ್​ ಶೀಟ್​ಗಾಗಿ ಅನೇಕ ನಿರ್ಮಾಪಕರು ಕಾದು ಕುಳಿತಿದ್ದಾರೆ. ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ ಜೊತೆ ಕೂಡ ನಟಿಸಿ ರಶ್ಮಿಕಾ ಸೈ ಎಸಿನಿಸಕೊಂಡಿದ್ದು, ಇವರಿಬ್ಬರ ಕಾಂಬಿನೇಷನ್​ನಲ್ಲಿ ಮೂಡಿ ಬಂದಿರುವ 'ಗುಡ್​ ಬೈ' ಚಿತ್ರ ಹಾಗೂ ಸಿದ್ದಾರ್ಥ್​ ಮಲ್ಹೋತ್ರಾ ಜೊತೆ ರಶ್ಮಿಕಾ ನಟಿಸಿರುವ ಮಿಷನ್​ ಮಜ್ನು​ ಚಿತ್ರ ತೆರೆ ಕಾಣಲು ಸಿದ್ಧವಾಗಿದೆ.

     ರಶ್ಮಿಕಾ ಆಶಿಕಿ-3ನಲ್ಲಿ ನಟಿಸಿಸೋದು ಪಕ್ಕಾನಾ..?

    ರಶ್ಮಿಕಾ ಆಶಿಕಿ-3ನಲ್ಲಿ ನಟಿಸಿಸೋದು ಪಕ್ಕಾನಾ..?

    ರಶ್ಮಿಕಾ ಮಂದಣ್ಣ ಬಳಿ ಸಾಲು ಸಾಲು ಬಿಗ್​ ಬಜೆಟ್​ ಚಿತ್ರಗಳೇ ಇದ್ದು, ಬಾಲಿವುಡ್​ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದ 'ಆಶಿಕಿ' ಚಿತ್ರದ ಸಿಕ್ವೇಲ್​ 'ಆಶಿಕಿ-3' ಚಿತ್ರಕ್ಕೆ ರಶ್ಮಿಕಾ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ. 'ಆಶಿಕಿ-3' ಚಿತ್ರದಲ್ಲಿ ಕಾರ್ತಿಕ್ ಆರ್ಯನ್​ ಜೊತೆ ರಶ್ಮಿಕಾ ಸ್ಕ್ರೀನ್​ ಶೇರ್​ ಮಾಡಲಿದ್ದಾರೆ. ಹಿಂದಿ ಚಿತ್ರರಂಗದಲ್ಲಿ 'ಆಶಿಕಿ' ಸಿನಿಮಾ ಎಂದೂ ಮರೆಯದ ಸಿನಿಮಾಗಳ ಪಟ್ಟಿಗೆ ಸೇರಿತ್ತು. ಇನ್ನು 'ಆಶಿಕಿ-2' ಚಿತ್ರ ಕೂಡ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​ ಗಳಿಸಿ ಹೊಸ ಇತಿಹಾಸ ಸೃಷ್ಟಿಸಿತ್ತು.

    English summary
    Rashmika Mandanna Hikes Her Remuneration even before Pushpa 2 movie release.
    Friday, September 16, 2022, 11:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X