ಅಭಿಮಾನಿಗಳಿಗೆ ಗುಡ್ ನ್ಯೂಸ್; ವೀರನಾರಿಯಾಗಿ ಬಂದ ರಶ್ಮಿಕಾ ಮಂದಣ್ಣ

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಹವಾ ಮುಂದುವರೆದಿದೆ. ಇತ್ತ ತೆಲುಗು, ತಮಿಳು ಅತ್ತ ಬಾಲಿವುಡ್ ಅಂಗಳದಲ್ಲಿ ದರ್ಬಾರ್ ನಡೆಸುತ್ತಾರೆ. 'ಕುಬೇರ' ಮೂಲಕ ಮತ್ತೊಂದು 100 ಕೋಟಿ ಕ್ಲಬ್ ಸಿನಿಮಾ ರಶ್ಮಿಕಾ ಖಾತೆಗೆ ಜಮೆಯಾಗಿದೆ. ಆಕೆಯ ಕ್ರೇಜ್ ಹೆಚ್ಚುವಂತೆ ಮಾಡಿದೆ.

ರಶ್ಮಿಕಾ ನಟನೆಯ ಮತ್ತೊಂದು ಸಿನಿಮಾ ಘೋಷಣೆಯಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ. ಆದರೆ ಇದೊಂದು ಮಹಿಳಾ ಪ್ರಧಾನ ಸಿನಿಮಾ ಎನ್ನುವುದು ಗುತ್ತಾಗುತ್ತಿದೆ. ನೀವೆ ಟೈಟಲ್ ಗೆಸ್ ಮಾಡಿ ಎಂದು ರಶ್ಮಿಕಾ ಹೇಳಿದ್ದಾರೆ. ನಾಳೆ(ಜೂನ್ 27) ಸಿನಿಮಾ ಟೈಟಲ್ ನಾವು ರಿವೀಲ್ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

Rashmika Mandanna Hints at Women-Centric Warrior Film Title Reveal on June 27

ಸದ್ಯ ಬಿಡುಗಡೆ ಆಗಿರುವ ಪೋಸ್ಟ್ ಕುತೂಹಲ ಮೂಡಿಸುವಂತಿದೆ. ಕಚ್ಚೆ ಕಟ್ಟಿದ್ದ ರಶ್ಮಿಕಾ ವೀರಯೋಧೆಯಾಗಿ ಭರ್ಜಿ ಹಿಡಿದು ಕಾಡಿನಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಮಸುಕು ಮಸುಕಾಗಿ ಕಾಣುತ್ತಿರುವ ಚಿತ್ರದಲ್ಲಿ ಆಕೆಯ ಕಡೆಗೆ ಒಂದಷ್ಟು ಜನ ಆವೇಶದಿಂದ ಓಡಿ ಬರುತ್ತಿರುವುದನ್ನು ನೋಡಬಹುದು. ಆಕೆಯ ಬಲಭಾಗದಲ್ಲಿ ಮರವೊಂದು ಹೊತ್ತಿ ಉರಿಯುತ್ತದೆ. ಪೋಸ್ಟ್ ನೋಡಿದರೆ ಇದೊಂದು ಐತಿಹಾಸಿಕ ಸಿನಿಮಾ ಎನ್ನುವಂತೆ ಕಾಣುತ್ತಿದೆ.

ಅನ್‌ಫಾರ್ಮುಲಾ ಫಿಲ್ಮ್ಸ್ ಬ್ಯಾನರ್‌ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ನಿರ್ದೇಶಕರು ಯಾರು? ಯಾವಾಗ ಸಿನಿಮಾ ಶುರುವಾಗುತ್ತದೆ ಎನ್ನುವ ಬಗ್ಗೆ ಶೀಘ್ರದಲ್ಲೇ ಮಾಹಿತಿ ಸಿಗಲಿದೆ. ಈ ಸಿನಿಮಾ ಟೈಟಲ್ ಏನೆಂದು ಗೆಸ್ ಮಾಡಿ. ಯಾರಾದರೂ ಊಹಿಸಿದರೆ ನಾನು ಅವರನ್ನು ಭೇಟಿ ಆಗುತ್ತೇನೆ ಎಂದು ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇನ್ನು ರಶ್ಮಿಕಾ ನಟನೆಯ ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗುತ್ತಿವೆ. 'ಅನಿಮಲ್', 'ಪುಷ್ಪ-2', 'ಛಾವ' ಬಳಿಕ ಇದೀಗ 'ಕುಬೇರ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ನಡುವೆ ಬಂದ 'ಸಿಕಂದರ್' ಸಿನಿಮಾ ಹೀನಾಯವಾಗಿ ಸೋತಿತ್ತು. ಅದು ಸಲ್ಮಾನ್ ಖಾನ್ ಸಿನಿಮಾ. ಬರೀ ಗ್ಲಾಮರ್ ಬೊಂಬೆಯಾಗಿ ರಶ್ಮಿಕಾ ಮಿಂಚಿದ್ದರು. ಇನ್ನುಳಿದಂತೆ ಈ ನಾಲ್ಕು ಸಿನಿಮಾಗಳಲ್ಲಿ ಒಳ್ಳೆ ಪಾತ್ರಗಳು ಆಕೆಗೆ ಸಿಕ್ಕಿತ್ತು.

ರಶ್ಮಿಕಾ ಮಂದಣ್ಣ ಈಗಾಗಲೇ ಒಂದೆರಡು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದೇ ಸಾಲಿಗೆ ಈ ಸಿನಿಮಾ ಕೂಡ ಸೇರಿಕೊಳ್ತಿದೆ. 'ದಿ ಗರ್ಲ್ ಫ್ರೆಂಡ್' ಎಂಬ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. 'ಥಮ' ಎಂಬ ಮತ್ತೊಂದು ಸಿನಿಮಾ ಆಕೆಯ ಕೈಯಲ್ಲಿದೆ. 'ಕಾಕ್‌ಟೇಲ್'-2 ಚಿತ್ರಕ್ಕೂ ಕೊಡಗಿನ ಬೆಡಗಿಯೇ ನಾಯಕಿ ಎನ್ನಲಾಗ್ತಿದೆ. 2012ರಲ್ಲಿ ಬಂದಿದ್ದ 'ಕಾಕ್‌ಟೇಲ್' ಸೀಕ್ವೆಲ್ ಇದಾಗಿದ್ದು ಶಾಹಿದ್ ಕಪೂರ್ ಜೊತೆ ಕೃತಿ ಸನೂನ್ ಹಾಗೂ ರಶ್ಮಿಕಾ ನಟಿಸುತ್ತಾರೆ ಎನ್ನಲಾಗ್ತಿದೆ.

ದಿನದಿಂದ ದಿನಕ್ಕೆ ರಶ್ಮಿಕಾ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ತೆಲುಗು ನಟರಾದ ಚಿರಂಜೀವಿ ಹಾಗೂ ನಾಗಾರ್ಜುನ ಆಕೆಯನ್ನು ನ್ಯಾಷನಲ್ ಕ್ರಶ್ ಎಂದು ಹೇಳಿ ಕೊಂಡಾಡಿದ್ದರು. ಈ ವರ್ಷ ರಶ್ಮಿಕಾ ಮಂದಣ್ಣ ನಟಿಸಿದ 3 ಸಿನಿಮಾಗಳು ತೆರೆಗೆ ಬಂದಿದೆ. ಕೈಯಲ್ಲಿರುವ ಪ್ರಾಜೆಕ್ಟ್‌ಗಳು ಒಂದೊಂದಾಗಿ ಖಾಲಿ ಆಗುತ್ತಿದ್ದಂತೆ ಹೊಸ ಹೊಸ ಸಿನಿಮಾಗಳನ್ನು ಆಕೆ ಒಪ್ಪಿಕೊಳ್ಳುತ್ತಿದ್ದಾರೆ.

ಶೇಖರ್ ಕಮ್ಮುಲ ನಿರ್ದೇಶನದ 'ಕುಬೇರ' ಸಿನಿಮಾ 100 ಕೋಟಿ ರೂ. ಕ್ಲಬ್ ಸೇರಿದೆ. ತಮಿಳು ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗಿತ್ತು. ಬಳಿಕ ಹಿಂದಿ, ಮಲಯಾಳಂ ಹಾಗೂ ಕನ್ನಡ ಭಾಷೆಗಳಿಗೆ ಡಬ್ ಆಗಿತ್ತು. ತಮಿಳು ವರ್ಷನ್ ಅಷ್ಟೇನು ಸದ್ದು ಮಾಡ್ತಿಲ್ಲ. ಆದರೆ ತೆಲುಗು ವರ್ಷನ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಧನುಷ್ ನಟನೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

More from Filmibeat

English summary
Rashmika Mandanna teases her next women-centric film with a powerful poster showing her as a warrior
Read more about: rashmika mandanna tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X