ವಿಜಯ್ ದೇವರಕೊಂಡ ಹೊಸ ಮನೆಯಲ್ಲಿ ರಶ್ಮಿಕಾ ಮಂದಣ್ಣ
Recommended Video
ತೆಲುಗು ನಟ ವಿಜಯ್ ದೇವರಕೊಂಡ ಇತ್ತೀಚಿಗಷ್ಟೆ ಹೊಸ ಮನೆಯ ಮಾಲೀಕ ಆಗಿದ್ದರು. ಈ ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ನಟಿ ರಶ್ಮಿಕಾ ಮಂದಣ್ಣ ಭಾಗಿಯಾಗಿದ್ದಾರೆ.
ಹೊಸ ಮನೆ ಖರೀದಿ ಮಾಡಿದ್ದ ವಿಜಯ್ ದೇವರಕೊಂಡ ಚಿತ್ರರಂಗದ ಸ್ನೇಹಿತರಿಗಾಗಿ ಕಾರ್ಯಕ್ರಮ ಏರ್ಪಾಡು ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ನಟಿ ರಶ್ಮಿಕಾ ಮಂದಣ್ಣ ಕೂಡ ಹಾಜರಿದ್ದರು. 'ಮಹರ್ಷಿ' ಸಿನಿಮಾದ ನಿರ್ದೇಶಕ ವಂಶಿ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮಕ್ಕೆ ಹೋಗಿ ವಿಜಯ್ ದೇವರಕೊಂಡಗೆ ಶುಭಾಶಯ ತಿಳಿಸಿದರು.
ವಿಜಯ್ ದೇವರಕೊಂಡ ಮನೆ ಗೃಹಪ್ರವೇಶ ಕಾರ್ಯಕ್ರಮ ಕೆಲ ದಿನಗಳ ಹಿಂದೆ ನಡೆದಿತ್ತು. ಕಾರ್ಯಕ್ರಮಕ್ಕೆ ಹೋದ ಗಣ್ಯರ ಫೋಟೋಗಳು ಈಗ ರಿವೀಲ್ ಆಗುತ್ತಿವೆ.

ಹೈದರಾಬಾದ್ ನ ಜುಬಿಲಿ ಹಿಲ್ಸ್ ನಲ್ಲಿ ವಿಜಯ್ ದೇವರಕೊಂಡ ಹೊಸ ಮನೆ ಇದೆ. 15 ಕೋಟಿ ಬೆಲೆಬಾಳುವ ಮನೆ ಇದಾಗಿದೆ. ಒಂದರ ನಂತರ ಒಂದು ಹಿಟ್ ಸಿನಿಮಾ ನೀಡುತ್ತಿರುವ ವಿಜಯ್ ದೇವರಕೊಂಡ ಅದೇ ಸಂತಸದಲ್ಲಿ ಹೊಸ ಮನೆ ಖರೀದಿ ಮಾಡಿದ್ದಾರೆ.
ಅಂದಹಾಗೆ, ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ 'ಗೀತಾ ಗೋವಿಂದಂ', 'ಡಿಯರ್ ಕಾಮ್ರೇಡ್' ಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.


Click it and Unblock the Notifications











