ಯಾರಿಗಾದ್ರೂ ಹೊಡೆಯೋದಾ? ಸುಮ್ನೆ ಕೂತು ಅಳೋದಾ? ಈಗ ನಾನು ಏನು ಮಾಡ್ಲಿ?

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಟಾಲಿವುಡ್ ಮಾತ್ರವಲ್ಲೇ ಬಾಲಿವುಡ್ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಇದೀಗ ತಮಿಳು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಪುಷ್ಪ' ಹಾಗೂ 'ಅನಿಮಲ್' ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗಿ ಆಕೆಯ ಕ್ರೇಜ್ ಹೆಚ್ಚುವಂತೆ ಮಾಡಿವೆ.

ಮಹಿಳೆಯರು ಋತುಸ್ರಾವ ಅಥವಾ ಪೀರಿಯಡ್ಸ್ ಅವಧಿಯಲ್ಲಿ ಹೊಟ್ಟೆ, ಬೆನ್ನಿನ ಕೆಳಭಾಗದಲ್ಲಿ ನೋವು ಅನುಭವಿಸುತ್ತಾರೆ. ಪ್ರತಿ ತಿಂಗಳು ಅವರಿಗೆ ಈ ಸಮಸ್ಯೆ ತಪ್ಪಿದ್ದಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ನಟಿಯರು ಸಿನಿಮಾ ಚಿತ್ರೀಕರಣಕ್ಕೆ ಡೇಟ್ಸ್ ಕೊಡುತ್ತಾರೆ. ಆದರೂ ಕೆಲವೊಮ್ಮೆ ಶೂಟಿಂಗ್ ಸಮಯದಲ್ಲಿ ಪೀರಿಯಡ್ಸ್ ಆದಾಗ ನೋವು ನುಂಗಿಕೊಂಡು ನಟಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ.

Rashmika Mandanna instagram story goes viral

ನಟಿ ರಶ್ಮಿಕಾ ಮಂದಣ್ಣ ಸದ್ಯ ಇದೇ ಸಮಸ್ಯೆಯಿಂದ ಎದುರಿಸುತ್ತಿರುವಂತೆ ಕಾಣುತ್ತಿದೆ. ಆಕೆ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಾಕಿರುವ ಪೋಸ್ಟ್‌ ನೋಡಿ ಕೆಲವರು ಈ ರೀತಿ ಭಾವಿಸುತ್ತಿದ್ದಾರೆ. ತಮ್ಮ ಪೀರಿಯಡ್ಸ್ ಸಮಸ್ಯೆಯನ್ನು ಆಕೆ ಹೇಳಿಕೊಂಡಿದ್ದಾರೆ. ತನಗೆ ನೋವು, ಸಂಕಟ ಹೆಚ್ಚಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ. 4 ಆಪ್ಷನ್ ಕೊಟ್ಟು ಇದರಲ್ಲಿ ಈಗ ಏನು ಮಾಡಿದರೆ ಒಳ್ಳೆಯದು ಹೇಳಿ ಎಂದು ತಮ್ಮ ಫಾಲೋವರ್ಸ್‌ಗೆ ಕೇಳಿದ್ದಾರೆ.

1. ಐಸ್ ಕ್ರೀಂ, ಚಾಕಲೇಟ್ ತಿನ್ನಬೇಕಾ? 2. ಯಾರಿಗಾದರೂ ಹೊಡೆಯಬೇಕಾ? 3. ಯಾವುದಾದರೂ ಸಿನಿಮಾ ನೋಡುತ್ತಾ ಮನಸ್ಸನ್ನು ಬೇರೆಡೆಗೆ ತಿರುಗಿಸಬೇಕೇ? 4. ಸುಮ್ಮನೆ ಕೂತು ಅಳಬೇಕಾ? ಎಂದು ರಶ್ಮಿಕಾ ಮಂದಣ್ಣ ಕೇಳಿದ್ದಾರೆ. ಏನೇ ಮಾಡಿದರೂ ಅದು ಕೇವಲ ತಾತ್ಕಾಲಿಕ ಪರಿಹಾರ ಅಷ್ಟೆ. ಶಾಶ್ವತ ಪರಿಹಾರ ಸಿಗಲ್ಲ ಎಂದು ಕೆಲವರು ಹೇಳುತ್ತಿದ್ದಾರೆ.

ಈ ನಟಿ ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ತಮ್ಮ ಪೀರಿಯಡ್ಸ್ ವಿಚಾರದ ಬಗ್ಗೆ ಮಾತನಾಡಿದ್ದರು. "ಶ್ಯಾಮ್ ಸಿಂಗ್ ರಾಯ್ ಚಿತ್ರದ ಹಾಡೊಂದನ್ನು ಬಿಟ್ಟು ನಾನು ಸಿನಿಮಾಗಳಲ್ಲಿ ಹೆಜ್ಜೆ ಹಾಕುವಾಗ ಬಹುತೇಕ ಸಂದರ್ಭದಲ್ಲಿ ಪೀರಿಯಡ್ಸ್ ಆಗಿರುತ್ತಿತ್ತು. ಆ ನೋವನ್ನು ನುಂಗಿಕೊಂಡೇ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದೆ. ಅದು ಅಭ್ಯಾಸವಾಗಿಬಿಟ್ಟಿದೆ"

Rashmika Mandanna instagram story goes viral

"ಮನಸ್ಸು ಬೇರೆ ಒಂದನ್ನು ಅಷ್ಟು ಬೇಡುವಾಗ ದೇಹ ಅದಕ್ಕೆ ಸಹಕರಿಸುತ್ತದೆ. ಚಿತ್ರೀಕರಣವೆಲ್ಲಾ ಮುಗಿದ ಬಳಿಕ ಎರಡು ಮೂರು ದಿನ ಮಲಗಿ ವಿಶ್ರಾಂತಿ ಪಡೆಯುತ್ತೇನೆ. ಆಗ ಅಪ್ಪ ಬಂದು ಕಾಲು ಒತ್ತುತ್ತಾರೆ. ರೌಡಿ ಬೇಬಿ ಸಾಂಗ್ ಶೂಟಿಂಗ್ ವೇಳೆ ಇದೇ ರೀತಿ ಆಗಿತ್ತು" ಎಂದು ಸಾಯಿ ಪಲ್ಲವಿ ಹೇಳಿದ್ದರು. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಅಂದಹಾಗೆ ಇತ್ತೀಚೆಗೆ ರಶ್ಮಿಕಾ ಮಂದಣ್ಣ ಜಪಾನ್‌ಗೆ ಭೇಟಿ ನೀಡಿದ್ದರು. ಅಲ್ಲಿನ ಅಭಿಮಾನಿಗಳ ಪ್ರೀತಿಯ ಸ್ವಾಗತ ಕಂಡು ಖುಷಿಯಾಗಿದ್ದರು. ಜಪಾನ್ ದೇಶಕ್ಕೆ ಚಿಕ್ಕಂದಿನಿಂದಲೂ ಹೋಗಬೇಕು ಎಂದುಕೊಂಡಿದ್ದ ವಿಚಾರವನ್ನು ಹಂಚಿಕೊಂಡಿದ್ದರು.

"ನಾನು ಬಹಳ ವರ್ಷಗಳಿಂದ ಹೋಗಬೇಕೆಂದು ಕನಸು ಕಂಡ ಸ್ಥಳ ಜಪಾನ್. ಬಾಲ್ಯದಿಂದಲೂ ಇದು ಸಾಧ್ಯ ಎಂದು ಎಂದಿಗೂ ಯೋಚಿಸಿರಲಿಲ್ಲ. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೋಗುತ್ತೇನೆ ಎಂದುಕೊಂಡಿರಲಿಲ್ಲ. ಆದರೆ ಅದು ಈಗ ನಿಜವಾಗಿದೆ"

"ಇಲ್ಲಿ ಎಲ್ಲರನ್ನು ಭೇಟಿಯಾಗಲು ಸಾಧ್ಯವಾಯಿತು, ಇಲ್ಲಿನ ಜನರ ಪ್ರೀತಿಯನ್ನು ಪಡೆಯುವುದು, ಅಂತಹ ಬೆಚ್ಚಗಿನ ಸ್ವಾಗತವನ್ನು ಪಡೆಯುವುದು. ಜಪಾನ್ ಆಹಾರ, ಹವಾಮಾನ, ಜಾಗ ಬಹಳ ಸ್ವಚ್ಛತೆಯಿಂದ ಕೂಡಿದೆ. ಒಳ್ಳೆ ಜನ ಇದ್ದಾರೆ. ನಿಜಕ್ಕೂ ಇದು ಅದ್ಭುತ. ನಾನು ಇನ್ನು ಮುಂದೆ ಪ್ರತಿ ವರ್ಷ ಇಲ್ಲಿಗೆ ಬರುತ್ತೇನೆ, ಥ್ಯಾಂಕ್ಯೂ" ಎಂದು ಬರೆದುಕೊಂಡಿದ್ದರು.

More from Filmibeat

English summary
Rashmika Mandanna's interesting post in instagram story;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X