"ಒಳ್ಳೆ ಗಂಡಸರು ಬಹಳ ಜನ ಇದ್ದಾರೆ, ಅಂತಹರನ್ನು ನಂಬಬೇಕು, ಅವಿವೇಕಿಗಳನ್ನಲ್ಲ"; ರಶ್ಮಿಕಾ ಹೀಗಂದಿದ್ಯಾಕೆ?

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್, ಬಾಲಿವುಡ್‌ನಲ್ಲಿ ಫುಲ್ ಬ್ಯುಸಿ ಆಗಿಬಿಟ್ಟಿದ್ದಾರೆ. 'ಅನಿಮಲ್' ಸಿನಿಮಾ ಸಕ್ಸಸ್ ಬಿಟೌನ್‌ನಲ್ಲಿ ಆಕೆಯ ಕ್ರೇಜ್‌ ಹೆಚ್ಚುವಂತೆ ಮಾಡಿದೆ. ಮತ್ತಷ್ಟು ಬಾಲಿವುಡ್ ಅವಕಾಶಗಳು ಅರಸಿ ಬರುತ್ತಿವೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಕೂಡ ರಶ್ಮಿಕಾ ಸಖತ್ ಆಕ್ಟೀವ್ ಆಗಿದ್ದಾರೆ.

ಇನ್‌ಸ್ಟಾಗ್ರಾಂ, ಟ್ವಿಟರ್‌ನಲ್ಲಿ ಸಾಕಷ್ಟು ರಶ್ಮಿಕಾ ಮಂದಣ್ಣ ಫ್ಯಾನ್ಸ್ ಪೇಜ್ ಇವೆ. ಅಭಿಮಾನಿಗಳ ಪೋಸ್ಟ್‌ಗಳಿಗೆ ಕಿರಿಕ್ ಬೆಡಗಿ ರಿಪ್ಲೇ ಮಾಡುತ್ತಿರುತ್ತಾರೆ. ಇನ್ನು ಹೊಸ ಹೊಸ ಫೋಟೊಶೂಟ್‌ ಮಾಡಿಸಿ ಫೋಟೊಗಳನ್ನು ಶೇರ್ ಮಾಡುತ್ತಾರೆ. ಅದಕ್ಕೆ ಅಭಿಮಾನಿಗಳಿಂದ ಸಾಕಷ್ಟು ಲೈಕ್ಸ್, ಕಾಮೆಂಟ್ಸ್ ಸಿಗುತ್ತದೆ. ಸದ್ಯ ನೆಟ್ಟಿಗರೊಬ್ಬರು ಪೋಸ್ಟ್ ಬಗ್ಗೆ ರಶ್ಮಿಕಾ ಮಂದಣ್ಣ ರಿಪ್ಲೇ ಮಾಡಿದ್ದರು ಅದು ವೈರಲ್ ಆಗಿದೆ.

Rashmika Mandanna interesting comment on netizen post goes viral

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್' ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಚಿತ್ರದಲ್ಲಿ ರಣ್‌ಬೀರ್ ಕಪೂರ್ ಮಡದಿ ಪಾತ್ರದಲ್ಲಿ ಕೊಡಗಿನ ಬೆಡಗಿ ನಟಿಸಿದ್ದರು. ಚಿತ್ರದಲ್ಲಿ ನಾಯಕ ರಣ್‌ವಿಜಯ್ ಸಿಂಗ್ ಪತ್ನಿ ಗೀತಾಂಜಲಿ ಆಗಿ ರಶ್ಮಿಕಾ ಮಿಂಚಿದ್ದರು. ಇನ್ನು ರಣ್‌ವಿಜಯ್ ಸಿಂಗ್ ಮದುವೆ ಬಳಿಕ ಜೊಯಾ ರಿಯಾಜ್ ಜೊತೆ ಅಕ್ರಮ ಸಂಬಂಧ ಕೂಡ ಇಟ್ಟುಕೊಂಡಿರುತ್ತಾರೆ. ಇದಕ್ಕೆ ಸಂಬಂಧಿಸಿ ವೀಡಿಯೋವೊಂದನ್ನು ನೆಟ್ಟಿಗರೊಬ್ಬರು ಹಂಚಿಕೊಂಡಿದ್ದು "ಒಬ್ಬ ಗಂಡಸನ್ನು ನಂಬುವುದಕ್ಕಿಂತ ಭಯಂಕರವಾದದ್ದು ಮತ್ತೊಂದಿಲ್ಲ" ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

ಈ ಟ್ವೀಟ್ ನೋಡಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿದ್ದಾರೆ. "ನೀವು ಹೇಳಿದ್ದಕ್ಕೆ ಸಣ್ಣ ಕರೆಕ್ಷನ್. ಒಬ್ಬ ಅವಿವೇಕಿ ಗಂಡಸನ್ನು ನಂಬಲು ಭಯವಾಗಬೇಕು. ಆದರೆ ಇಲ್ಲಿ ಸಾಕಷ್ಟು ಜನ ಒಳ್ಳೆ ಗಂಡಸರು ಕೂಡ ಇದ್ದಾರೆ. ಅಂತಹವರನ್ನು ನಂಬಿದರೆ ಅದು ಬಹಳ ಸ್ಪೆಷಲ್" ಎಂದು ರಶ್ಮಿಕಾ ಮಂದಣ್ಣ ರಿಪ್ಲೇ ಮಾಡಿದ್ದಾರೆ. ಸದ್ಯ ರಶ್ಮಿಕಾ ಕಾಮೆಂಟ್ ವೈರಲ್ ಆಗುತ್ತಿದೆ.

ಸದ್ಯ ರಶ್ಮಿಕಾ ಮಂದಣ್ಣ ಕೈಯಲ್ಲಿ ನಾಲ್ಕೈದು ಸಿನಿಮಾಗಳಿವೆ. 'ಪುಷ್ಪ'-2 ಬಿಡುಗಡೆಗೆ ಸಿನಿರಸಿಕರು ಹೆಚ್ಚು ಕಾಯುತ್ತಿದ್ದಾರೆ. ಆಗಸ್ಟ್ 15ಕ್ಕೆ ಸಿನಿಮಾ ರಿಲೀಸ್ ಎಂದು ಚಿತ್ರತಂಡ ಘೋಷಿಸಿದೆ. ಆದರೆ ಶೂಟಿಂಗ್ ತಡವಾಗುತ್ತಿದ್ದು ರಿಲೀಸ್ ಪೋಸ್ಟ್‌ಪೋನ್ ಆಗುತ್ತದೆ ಎನ್ನುವ ಗುಸುಗುಸು ಶುರುವಾಗಿದೆ. ಚಿತ್ರದಲ್ಲಿ ಮತ್ತೆ ಪುಷ್ಪರಾಜ್ ಮಡದಿ ಶ್ರೀವಲ್ಲಿಯಾಗಿ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದಾರೆ.

ತಮಿಳಿನಲ್ಲಿ 'ಕುಬೇರ' ಎನ್ನುವ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಧನುಷ್ ಚಿತ್ರದ ನಾಯಕರಾಗಿ ಕಾಣಿಸಿಕೊಂಡಿದ್ದು ತೆಲುಗು ನಟ ನಾಗಾರ್ಜುನ ಸಹ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ರೈನ್‌ಬೋ', 'ಗರ್ಲ್‌ ಫ್ರೆಂಡ್' ಎನ್ನುವ ಎರಡು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಕೂಡ ರೋಶ್ ನಟಿಸುತ್ತಿದ್ದಾರೆ.

'ಚಾವ' ಎನ್ನುವ ಐತಿಹಾಸಿಕ ಚಿತ್ರಕ್ಕೂ ರಶ್ಮಿಕಾ ಮಂದಣ್ಣ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಮರಾಠ ಚಕ್ರವರ್ತಿ ಸಾಂಬಾಜಿ ಪತ್ನಿ ಯೇಸುಬಾಯಿ ಭೋನ್ಸಾಲೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಮತ್ತೆ ಬಾಲಿವುಡ್‌ನಲ್ಲಿ ಕಮಾಲ್ ಮಾಡಲು ಸಿದ್ಧರಾಗಿದ್ದಾರೆ.

'ಅನಿಮಲ್' ಸೀಕ್ವೆಲ್ ಬಗ್ಗೆ ಕೂಡ ಈ ಹಿಂದೆ ಚರ್ಚೆ ನಡೆದಿತ್ತು. 'ಅನಿಮಲ್ ಪಾರ್ಕ್' ಹೆಸರಿನಲ್ಲಿ ಸಿನಿಮಾ ಬರುತ್ತದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಸದ್ಯ ಸಂದೀಪ್ ರೆಡ್ಡಿ ವಂಗಾ ಟಾಲಿವುಡ್ ಕಡೆ ಮುಖ ಮಾಡಿದ್ದಾರೆ. ಪ್ರಭಾಸ್ ಕಾಂಬಿನೇಷನ್‌ನಲ್ಲಿ 'ಸ್ಪಿರಿಟ್' ಸಿನಿಮಾ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಆ ಬಳಿಕವೇ 'ಅನಿಮಲ್' ಕಥೆ ಮುಂದುವರೆಯಲಿದೆ. ಮತ್ತೆ ಗೀತಾಂಜಲಿ ಆಗಿ ನಟಿಸುತ್ತಾರಾ ಕಾದು ನೋಡಬೇಕಿದೆ.

More from Filmibeat

English summary
Rashmika Mandanna replied netizen Animal movie video post;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X