For Quick Alerts
  ALLOW NOTIFICATIONS  
  For Daily Alerts

  ಹೈದರಾಬಾದ್ ನಲ್ಲಿ ಫ್ಲ್ಯಾಟ್ ಖರೀದಿ ಮಾಡ್ತಾರಂತೆ ರಶ್ಮಿಕಾ: ಅಲ್ಲೇ ಸೆಟಲ್ ಆಗಲು ತಯಾರಿ.?

  |

  ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಹುಟ್ಟಿ ಬೆಳೆದಿದ್ದು ಕರ್ನಾಟಕದಲ್ಲಿ. ಕನ್ನಡದ 'ಕಿರಿಕ್ ಪಾರ್ಟಿ' ಚಿತ್ರದಿಂದ 'ಕರ್ನಾಟಕ ಕ್ರಶ್' ಅಂತಲೇ ಜನಪ್ರಿಯತೆ ಪಡೆದವರು ರಶ್ಮಿಕಾ ಮಂದಣ್ಣ. ಕನ್ನಡ ಚಿತ್ರರಂಗದಿಂದ ಬಣ್ಣದ ಪ್ರಪಂಚಕ್ಕೆ ಪರಿಚಿತರಾಗಿ, ಸ್ಯಾಂಡಲ್ ವುಡ್ ನಲ್ಲಿ ಬಹು ಬೇಡಿಕೆಯಿದ್ದರೂ, ನಟಿ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಬಿಜಿಯಾಗಿರುವುದು ಪಕ್ಕದ ತೆಲುಗು ಸಿನಿ ಅಂಗಳದಲ್ಲಿ.

  'ಚಲೋ', 'ಗೀತ ಗೋವಿಂದಂ', 'ದೇವದಾಸ್', 'ಡಿಯರ್ ಕಾಮ್ರೇಡ್', 'ಸರಿಲೇರು ನೀಕೆವ್ವರು', 'ಭೀಷ್ಮ' ಚಿತ್ರಗಳ ಮೂಲಕ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಾಯಕಿ ಆಗಿ ಮಿಂಚಿದ ರಶ್ಮಿಕಾ ಮಂದಣ್ಣಗೆ ಟಾಲಿವುಡ್ ನಲ್ಲಿ ಡಿಮ್ಯಾಂಡ್ ಸ್ವಲ್ಪ ಜಾಸ್ತಿನೇ ಇದೆ.

  ಸದ್ಯ ಅಲ್ಲು ಅರ್ಜುನ್ ಜೊತೆಗೆ ತೆರೆ ಹಂಚಿಕೊಳ್ಳುತ್ತಿರುವ ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್ ನಲ್ಲಿಯೇ ಗಟ್ಟಿಯಾಗಿ ನೆಲೆಯೂರಲು ಮನಸ್ಸು ಮಾಡಿರುವ ಹಾಗಿದೆ. ಹೀಗಾಗಿ, ಹೈದರಾಬಾದ್ ನಲ್ಲಿ ಮನೆ ಖರೀದಿ ಮಾಡಲು ನಿರ್ಧಾರ ಮಾಡಿದ್ದಾರೆ. ಮುಂದೆ ಓದಿರಿ...

  ಹೈದರಾಬಾದ್ ನಲ್ಲಿ ರಶ್ಮಿಕಾ ಫ್ಲ್ಯಾಟ್ ಖರೀದಿ

  ಹೈದರಾಬಾದ್ ನಲ್ಲಿ ರಶ್ಮಿಕಾ ಫ್ಲ್ಯಾಟ್ ಖರೀದಿ

  ತೆಲುಗು ಸಿನಿಮಾಗಳಲ್ಲೇ ಹೆಚ್ಚಾಗಿ ತೊಡಗಿರುವ ನಟಿ ರಶ್ಮಿಕಾ ಮಂದಣ್ಣ ಹೈದರಾಬಾದ್ ನಲ್ಲೇ ಸೆಟಲ್ ಆಗಲು ಪ್ಲಾನ್ ಮಾಡಿದ್ದಾರೆ. ಹೈದರಾಬಾದ್ ನಲ್ಲಿ ಒಂದು ಫ್ಲ್ಯಾಟ್ ಕೊಂಡುಕೊಳ್ಳಲು ರಶ್ಮಿಕಾ ಮಂದಣ್ಣ ಮುಂದಾಗಿದ್ದಾರೆ ಎಂಬ ಸುದ್ದಿ ಟಾಲಿವುಡ್ ನಿಂದ ಬಂದಿದೆ.

  ಬುರ್ಕಾ ಹಾಕ್ಕೊಂಡಾದರೂ ಆ ಸ್ಥಳಕ್ಕೆ ಹೋಗ್ತಾರಂತೆ ರಶ್ಮಿಕಾ ಮಂದಣ್ಣಬುರ್ಕಾ ಹಾಕ್ಕೊಂಡಾದರೂ ಆ ಸ್ಥಳಕ್ಕೆ ಹೋಗ್ತಾರಂತೆ ರಶ್ಮಿಕಾ ಮಂದಣ್ಣ

  ಹೈದರಾಬಾದ್ ಅಂದ್ರೆ ತುಂಬಾ ಇಷ್ಟ

  ಹೈದರಾಬಾದ್ ಅಂದ್ರೆ ತುಂಬಾ ಇಷ್ಟ

  ''ನನಗೆ ಹೈದರಾಬಾದ್ ಅಂದ್ರೆ ಎಷ್ಟು ಇಷ್ಟ ಅಂದ್ರೆ ಇಲ್ಲೇ ಮನೆ ಮಾಡಲು ಮನಸ್ಸಾಗಿದೆ'' ಎಂದು ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

  'ಭೀಷ್ಮ' ಭರ್ಜರಿ ಕಲೆಕ್ಷನ್: ರಶ್ಮಿಕಾ ಮಂದಣ್ಣ ಪಾಲಿಗೆ ಮತ್ತೊಂದು ಬ್ಲಾಕ್ ಬಸ್ಟರ್.!'ಭೀಷ್ಮ' ಭರ್ಜರಿ ಕಲೆಕ್ಷನ್: ರಶ್ಮಿಕಾ ಮಂದಣ್ಣ ಪಾಲಿಗೆ ಮತ್ತೊಂದು ಬ್ಲಾಕ್ ಬಸ್ಟರ್.!

  ಫ್ಲ್ಯಾಟ್ ಖರೀದಿ ಯಾವಾಗ.?

  ಫ್ಲ್ಯಾಟ್ ಖರೀದಿ ಯಾವಾಗ.?

  ಇನ್ನೆರಡು ಚಿತ್ರಗಳು ಕಂಪ್ಲೀಟ್ ಆಗುತ್ತಿದ್ದಂತೆಯೇ ಹೈದರಾಬಾದ್ ನಲ್ಲಿ ಒಂದು ಐಷಾರಾಮಿ ಫ್ಲ್ಯಾಟ್ ಕೊಳ್ಳುತ್ತಾರಂತೆ ನಟಿ ರಶ್ಮಿಕಾ ಮಂದಣ್ಣ.

  ಬಿಗ್ ಸ್ಟಾರ್ ಗಳ ಜೊತೆಗೆ ನಟಿ ರಶ್ಮಿಕಾ ಅಭಿನಯ.?

  ಬಿಗ್ ಸ್ಟಾರ್ ಗಳ ಜೊತೆಗೆ ನಟಿ ರಶ್ಮಿಕಾ ಅಭಿನಯ.?

  ಮಹೇಶ್ ಬಾಬು ಜೊತೆಗೆ 'ಸರಿಲೇರು ನೀಕೆವ್ವರು' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದ ರಶ್ಮಿಕಾ ಮಂದಣ್ಣಗೆ ಜ್ಯೂನಿಯರ್ ಎನ್.ಟಿ.ಆರ್ ಜೊತೆಗೂ ರೊಮ್ಯಾನ್ಸ್ ಮಾಡುವ ಅವಕಾಶ ಸಿಕ್ಕಿದ್ಯಂತೆ. ಜೊತೆಗೆ ಅಲ್ಲು ಅರ್ಜುನ್ ರವರೊಂದಿಗೂ ಸ್ಕ್ರೀನ್ ಶೇರ್ ಮಾಡುತ್ತಿರುವ ರಶ್ಮಿಕಾ ಮಂದಣ್ಣ ಸದ್ಯ 'ಭೀಷ್ಮ' ಯಶಸ್ಸಿನ ಖುಷಿಯಲ್ಲಿ ತೇಲುತ್ತಿದ್ದಾರೆ.

  English summary
  Rashmika Mandanna is planning to buy a flat in Hyderabad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X