ಒಟ್ಟಿಗೆ ಬರ್ತಿದ್ದಾರೆ ಸಾಯಿ ಪಲ್ಲವಿ, ಕೀರ್ತಿ ಸುರೇಶ್, ರಶ್ಮಿಕಾ ಮಂದಣ್ಣ!
ಸಿನಿತಾರೆಯರಲ್ಲಿ ಹಲವರ ಮಧ್ಯೆ ಕೋಲ್ಡ್ ವಾರ್ ಇದ್ದೇ ಇರುತ್ತದೆ. ಆದರೆ ನಟಿಯರ ಮಧ್ಯೆ ಇದು ಕೊಂಚ ಹೆಚ್ಚಾಗಿಯೇ ಕಂಡುಬರುತ್ತದೆ. ಹಾಗಾಗಿ ಹೆಚ್ಚಾಗಿ ನಟಿಯರಯ ಜೊತೆಯಾಗಿ ಕಾಣಿಸಿಕೊಳ್ಳುವುದಿಲ್ಲ ಮತ್ತು ಕೆಲಸ ಮಾಡುವುದಿಲ್ಲ ಎನ್ನುವ ಊಹಾ ಪೋಹಗಳು ಆಗಾಗ ಹರಿದಾಡುತ್ತಲೇ ಇರುತ್ತವೆ. ಆದರೆ ಈ ಮಾತನ್ನು ಈಗ ಸುಳ್ಳು ಮಾಡುತ್ತಿದ್ದಾರೆ ತೆಲುಗಿನ ಟಾಪ್ ನಟಿಯರು.
ಇಲ್ಲಿ ಹೇಳಲು ಹೊರಟಿರುವುದು ನಟಿ ರಶ್ಮಿಕಾ ಮಂದಣ್ಣ, ಕೀರ್ತಿ ಸುರೇಶ್ ಮತ್ತು ಸಾಯಿ ಪಲ್ಲವಿ ಬಗ್ಗೆ. ಹೌದು ಈ ಮೂವರು ನಟಿಯರು ಟಾಲಿವುಡ್ ನ ಟಾಪ್ ನಟಿಯರು. ಈ ಮೂವರೂ ಇದುವರೆಗೆ ಒಟ್ಟಿಗೆ ಬಂದ ಉದಾಹರಣೆಗಳು ಇಲ್ಲ. ಈಗ ಈ ನಟಿಯರು ಒಟ್ಟಿಗೆ ಬರ್ತಿದ್ದಾರೆ.
ರಶ್ಮಿಕಾ, ಸಾಯಿ ಪಲ್ಲವಿ ಮತ್ತು ಕೀರ್ತಿ ಸುರೇಶ್ ಒಟ್ಟಿಗೆ ಬರುತ್ತಿದ್ದಾರೆ ಆದರೆ ಅದು ಚಿತ್ರಕ್ಕಾಗಿ ಅಲ್ಲ, ಚಿತ್ರದ ಪ್ರಚಾರ ಕಾರ್ಯಕ್ಕಾಗಿ. ಶರ್ವಾನಂದ್ ಮತ್ತು ರಶ್ಮಿಕಾ ಅಭಿನಯದ 'ಆಡವಸಳ್ಳು ಮೀಕು ಜೋಹರ್ಲು' ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಈ ನಟಿಯರು ಅಥಿತಿಗಳಾಗಿ ಬರ್ತಿದ್ದಾರೆ.

'ಆಡವಸಳ್ಳು ಮೀಕು ಜೋಹರ್ಲು' ಚಿತ್ರ ಇದೇ ತಿಂಗಳ 25 ರಂದು ಬಿಡುಗಡೆಯಾಗುತ್ತಿದ್ದು, ಚಿತ್ರದ ಪ್ರಚಾರದಲ್ಲಿ ತೊಡಗಿದೆ ಚಿತ್ರತಂಡ. ಇಲ್ಲಿಯವರೆಗೆ ಬಿಡುಗಡೆಯಾದ ಚಿತ್ರದ ಟೀಸರ್, ಹಾಡುಗಳು ಗಮನ ಸೆಳೆದಿವೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ , ಶರ್ವಾನಂದ್ ಜೊತೆಗೆ ದೊಡ್ಡ ಕಲಾವಿದರ ದಂಡೇ ಇದೆ. ರಾಧಿಕಾ, ಖುಷ್ಬು ಸೇರಿದಂತೆ ಹಲವು ಹಿರಿಯ ಕಲಾವಿದರು ಕೂಡ ಚಿತ್ರದಲ್ಲಿ ಇದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಅವರು ಪುಷ್ಪ ಚಿತ್ರದ ಬಳಿಕ ಈ ಚಿತ್ರ ತೆರೆಕಾಣುತ್ತಿದೆ. ಶರ್ವಾನಂದ್ ಈ ಚಿತ್ರದ ಮೂಲಕ ದೊಡ್ಡ ಯಶಸ್ಸಿನ ನಿರೀಕ್ಷೆಯಲ್ಲಿ ಇದ್ದಾರೆ. ಇನ್ನು ಚಿತ್ರದ ಟ್ರೇಲರ್ ಕೂಡ ಚಿತ್ರದ ಮೇಲೆ ಭರವಸೆ ಹುಟ್ಟಿಸುತ್ತಾ?, ಕೀರ್ತಿ ಸುರೇಶ್, ಸಾಯಿ ಪಲ್ಲವಿ ಚಿತ್ರದ ಕುರಿತು ಏನು ಹೇಳುತ್ತಾರೆ ಅಂತ ನೋಡ್ಬೇಕು.


Click it and Unblock the Notifications











