ಕ್ಲಿವೇಜ್ ಶೋ, ಥೈಸ್ ಶೋ: ಬೋಲ್ಡ್ ಫೋಟೊಶೂಟ್‌ನಲ್ಲಿ ಕಿರಿಕ್ ಬೆಡಗಿ ಬಿಂದಾಸ್ ಪೋಸ್

By ಫಿಲ್ಮಿಬೀಟ್ ಡೆಸ್ಕ್

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಸದಾ ಲೈಮ್‌ಲೈಟ್‌ನಲ್ಲಿ ಇರೋಕೆ ಏನು ಬೇಕೋ ಅದೆಲ್ಲಾ ಮಾಡ್ತಿದ್ದಾರೆ. ಕ್ರೇಜ್‌ಗೆ ತಕ್ಕಂತೆ ಸಿನಿಮಾಗಳು, ಜಾಹೀರಾತು ಅವಕಾಶಗಳು ಕೊಡಗಿನ ಕುವರಿಯನ್ನು ಅರಸಿ ಬರುತ್ತಿದೆ. ಇನ್ನು ರಶ್ಮಿಕಾ ಗ್ಲಾಮರಸ್ ಫೋಟೊಶೂಟ್‌ಗಳಿಂದಲೂ ಸುದ್ದಿಯಲ್ಲಿರುತ್ತಾರೆ.

'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಚೆಲುವೆ ನೋಡ ನೋಡುತ್ತಲೇ ಬಾಲಿವುಡ್‌ಗೆ ಜಿಗಿದುಬಿಟ್ಟರು. ಅದು ಕೂಡ ಸಣ್ಣಪುಟ್ಟ ಪಾತ್ರ ಅಲ್ಲ. ಬಿಗ್‌ಬಿ ಅಮಿತಾಬ್ ಬಚ್ಚನ್ ಮಗಳಾಗಿ 'ಗುಡ್‌ಬೈ' ಸಿನಿಮಾದಲ್ಲಿ ನಟಿಸಿದ್ದರು. ರಣ್‌ಬೀರ್ ಕಪೂರ್ ಜೋಡಿಯಾಗಿ ನಟಿಸುತ್ತಿದ್ದಾರೆ. ಅಂದಚೆಂದ ಕಾಪಾಡಿಕೊಳ್ಳೋಕೆ ಡಯೆಟ್, ವರ್ಕೌಟ್‌ ಎಲ್ಲವನ್ನು ತಪ್ಪದೇ ಮಾಡುತ್ತಿರುತ್ತಾರೆ. ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಟಚ್‌ನಲ್ಲಿ ಇರ್ತಾರೆ.

Rashmika Mandanna Latest Photoshoot Making Video Goes viral

ಬರೀ ಸಿನಿಮಾಗಳಿಂದ ಮಾತ್ರವಲ್ಲ ತಮ್ಮ ಹೇಳಿಕೆಗಳಿಂದ ರಶ್ಮಿಕಾ ನೆಟ್ಟಿಗರ ಕೆಂಗಣ್ಣಿಗೆ ಗುರಿ ಆಗುತ್ತಿರುತ್ತಾರೆ. ಇದೇ ಕಾರಣಕ್ಕೆ ಪದೇ ಪದೇ ಟ್ರೋಲ್ ಆಗುತ್ತಿರುತ್ತಾರೆ. ಇನ್ನು ನಟ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಗುಸುಗುಸು ಕೂಡ ಕೇಳಿ ಬರ್ತಿದೆ. ಆದರೆ ಆಕೆ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ಹೇಳಿದ್ದಾರೆ. ಇಬ್ಬರು ಸ್ನೇಹಿತರ ಜೊತೆ ವಿದೇಶ ಪ್ರವಾಸಕ್ಕೂ ಹೋಗುತ್ತಿರುತ್ತಾರೆ. ಇತ್ತೀಚೆಗೆ ವಿಜಯ್ ಫ್ಯಾಮಿಲಿ ಜೊತೆ ರಶ್ಮಿಕಾ ದುಬೈಗೆ ಹೋಗಿ ಬಂದಿದ್ದರು.

ಇತ್ತೀಚಿಗೆ ರಶ್ಮಿಕಾ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಮೊದ್ಲು ಕೈಯಲ್ಲಿರೋ 'ಪುಷ್ಪ'- 2, 'ಅನಿಮಲ್' ಸಿನಿಮಾಗಳನ್ನು ಮಾಡಿ ಮುಗಿಸುವ ಲೆಕ್ಕಾಚಾರದಲ್ಲಿದ್ದಾರೆ. ಇನ್ನು ಪದೇ ಪದೇ ಫೋಟೊಶೂಟ್‌ಗಳಿಂದಲೂ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಆಗಿಂದಾಗ್ಗೆ ಬಿಂದಾಸ್ ಫೋಟೊಶೂಟ್‌ಗಳಲ್ಲಿ ಮಿಂಚುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ವೆರೈಟಿ ವೆರೈಟಿ ಕಾಸ್ಟ್ಯೂಮ್‌ಗಳಲ್ಲಿ ಕಿರಿಕ್ ಬೆಡಗಿ ಕ್ಯಾಮರಾ ಮುಂದೆ ಕಣ್ಣರಳಿಸಿದ್ದಾರೆ.

Rashmika Mandanna Latest Photoshoot Making Video Goes viral

ಹೊಸ ಫೋಟೊಶೂಟ್ ಮೇಕಿಂಗ್ ಝಲಕ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ರಶ್ಮಿಕಾ ಮಂದಣ್ಣ ಫೋಸ್ಟ್ ಮಾಡಿದ್ದಾರೆ. ರಶ್ಮಿಕಾಗೆ ಬಾಲಿವುಡ್ ನೀರು ಮೈಗತ್ತಿದಂತೆ ಕಾಣುತ್ತಿದೆ. ಅದಕ್ಕೆ ತಕ್ಕಂತೆ ಗ್ಲಾಮರ್ ಡೋಸ್ ಹೆಚ್ಚಿಸುತ್ತಾ ಹೋಗುತ್ತಿದ್ದಾರೆ. ಫೋಟೊಶೂಟ್‌ಗಳಲ್ಲಿ ಅದು ಗೊತ್ತಾಗುತ್ತಿದೆ. ರಶ್ಮಿಕಾ ಈಗ ಬಾಲಿವುಡ್ ಹೀರೋಯಿನ್ನೇ ಆಗಿಬಿಟ್ಟಿದ್ದಾರೆ. ಹಿಂದಿ ಸಿನಿಮಾ ಈವೆಂಟ್‌ಗಳಲ್ಲಿ ತುಂಡು ಬಟ್ಟೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಟ್ರೋಲ್ ಕೂಡ ಆಗಿದ್ದಿದೆ.

ಸದ್ಯ ಹೊಸ ಫೋಟೊಶೂಟ್‌ನಲ್ಲಿ ಕಿರಿಕ್ ಬೆಡಗಿ ಹಾಟ್ ಹಾಟ್ ಪೋಸ್ ಕೊಟ್ಟಿದ್ದಾರೆ. ಕ್ಲಿವೇಜ್ ಶೋ, ಥೈಸ್ ಶೋ ಮಾಡುತ್ತಾ ಪಡ್ಡೆ ಹುಡುಗರ ಎದೆಬಡಿತ ಹೆಚ್ಚಿಸಿದ್ದಾರೆ. ಬ್ಲ್ಯಾಕ್‌ ಡ್ರೆಸ್‌ನಲ್ಲಿ ಕೊಂಚ ಬೋಲ್ಡ್ ಆಗಿಯೇ ದರ್ಶನ ಕೊಟ್ಟಿದ್ದಾರೆ. ಅಡಿಯಿಂದ ಮುಡಿವರೆಗೆ ಅಂದ ಚೆಂದ ಪ್ರದರ್ಶಿಸುತ್ತಾ ರಂಗೇರಿಸಿದ್ದಾರೆ. ಈ ವಿಡಿಯೋ ಲಕ್ಷಗಟ್ಟಲೆ ವೀವ್ಸ್ ಗಿಟ್ಟಿಸಿಕೊಂಡಿದ್ದು, ಲೈಕ್ಸ್‌, ಕಾಮೆಂಟ್ಸ್ ಮೂಲಕ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ವಿರಹ ವೇದನೆ ಅನುಭವಿಸುತ್ತಿರುವಂತಹ ಕೆಲ ಪೋಸ್ ಅಂತೂ ಅಭಿಮಾನಿಗಳ ಮನಗೆದ್ದಿದೆ. ಕಾಸ್ಟ್ಯೂಮ್‌ಗೆ ತಕ್ಕಂತೆ ಮೇಕಪ್‌ನಲ್ಲಿ ಮಿಂಚಿದ್ದಾರೆ. ಫೋಟೊಶೂಟ್‌ನ ಸಿಕ್ಕಾಪಟ್ಟೆ ಎಂಜಾಯ್ ಮಾಡಿರೋದು ವಿಡಿಯೋದಲ್ಲಿ ಗೊತ್ತಾಗುತ್ತಿದೆ.

More from Filmibeat

English summary
Rashmika Mandanna Latest Photoshoot Making Video Goes viral. She is sharing the screen with Ranbir Kapoor in the upcoming action entertainer Animal. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X