ರಾಮ್ ಚರಣ್ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕಿಯಾದ ಕನ್ನಡತಿ?

ಟಾಲಿವುಡ್ ನ ಸ್ಟಾರ್ ನಟ ರಾಮ್ ಚರಣ್ ಮುಂದಿನ ಸಿನಿಮಾಗೆ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶಂಕರ್ ಮತ್ತು ರಾಮ್ ಚರಣ್ ಸಿನಿಮಾದ ಅನೌನ್ಸ್ ಆಗುತ್ತಿದ್ದಂತೆ ಅಭಿಮಾನಿಗಳ ಕುತೂಹಲ, ನಿರೀಕ್ಷೆ ದುಪ್ಪಟ್ಟಾಗಿದೆ.

ಇನ್ನು ಟೈಟಲ್ ಫಿಕ್ಸ ಆಗದ ಪ್ಯಾನ್ ಇಂಡಿಯಾ 3ಡಿ ಸಿನಿಮಾದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ವಿಶೇಷ ಎಂದರೆ ರಾಮ್ ಚರಣ್ ಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಚರ್ಚೆ ಜೋರಾಗಿದೆ. ಘಟಾನುಘಟಿಗಳ ಸಿನಿಮಾ ಅಂದ್ಮೇಲೆ ನಾಯಕಿಯ ಪಾತ್ರಕ್ಕೆ ದೊಡ್ಡ ಸ್ಟಾರ್ ನಟಿಯರ ಹೆಸರುಗಳು ಕೇಳಿಬರುವುದು ಸಹಜ. ಸದ್ಯ ರಾಮ್ ಚರಣ್ ಪ್ಯಾನ್ ಇಂಡಿಯಾ ಸಿನಿಮಾದ ನಾಯಕಿ ಸ್ಥಾನಕ್ಕೆ ಕನ್ನಡದ ನಟಿಯ ಹೆಸರು ಕೇಳಿ ಬರುತ್ತಿರುವುದು ಅಚ್ಚರಿ ಮೂಡಿಸಿದೆ.

ರಾಮ್ ಚರಣ್ ಗೆ ರಶ್ಮಿಕಾ ನಾಯಕಿ

ರಾಮ್ ಚರಣ್ ಗೆ ರಶ್ಮಿಕಾ ನಾಯಕಿ

ರಾಮ್ ಚರಣ್ ನಟನೆಯ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಾಯಕಿಯಾಗಿ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ. ರಶ್ಮಿಕಾ ಈಗಾಗಲೇ ಅನೇಕ ಟಾಲಿವುಡ್ ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ಆದರೆ ರಾಮ್ ಚರಣ್ ಗೆ ನಾಯಕಿಯಾಗುವ ಅವಕಾಶ ಇನ್ನು ಸಿಕ್ಕಿರಲಿಲ್ಲ. ಇದೀಗ ಅವಕಾಶ ಒದಗಿಬಂದಿದೆ ಎನ್ನಲಾಗಿದೆ. ಒಂದು ವೇಳೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾದರೆ ಪ್ಯಾನ್ ಇಂಡಿಯಾ ನಾಯಕಿಯಾಗಿ ಗುರುತಿಸಿಕೊಳ್ಳಲಿದ್ದಾರೆ.

ರಶ್ಮಿಕಾನೆ ನಾಯಕಿ ಆಗಲಿ ಅಂದ್ರಾ ರಾಮ್ ಚರಣ್?

ರಶ್ಮಿಕಾನೆ ನಾಯಕಿ ಆಗಲಿ ಅಂದ್ರಾ ರಾಮ್ ಚರಣ್?

ಟಾಲಿವುಡ್ ನಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಈ ಸಿನಿಮಾಗೆ ರಶ್ಮಿಕಾನೆ ನಾಯಕಿಯಾಗಲಿ ಎಂದು ಸ್ವತಃ ರಾಮ್ ಚರಣ್ ಅವರೇ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ರಶ್ಮಿಕಾ ಈ ಸಿನಿಮಾದ ನಾಯಕಿ ಆಗಬೇಕು ಎನ್ನುವುದು ರಾಮ್ ಚರಣ್ ಅವರ ಆಸೆಯಂತೆ. ಹಾಗಾಗಿ ರಾಮ್ ಚರಣ್ ಆಸೆಯಂತೆ ಚಿತ್ರತಂಡ ರಶ್ಮಿಕಾ ಜೊತೆ ಮಾತುಕತೆ ನಡೆಸಲು ಸಜ್ಜಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಬಾಲಿವುಡ್ ನಲ್ಲಿ ರಶ್ಮಿಕಾ ಬ್ಯುಸಿ

ಬಾಲಿವುಡ್ ನಲ್ಲಿ ರಶ್ಮಿಕಾ ಬ್ಯುಸಿ

ರಶ್ಮಿಕಾ ಸದ್ಯ ತೆಲುಗು ಸಿನಿಮಾಗಳ ಜೊತೆಗೆ ಬಾಲಿವುಡ್ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಈಗಾಗಲೇ ಬಾಲಿವುಡ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ತೆಲುಗಿನ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಎರಡು ಕಡೆ ಬ್ಯುಸಿ ಇರುವ ರಶ್ಮಿಕಾ, ಶಂಕರ್ ಮತ್ತು ರಾಮ್ ಚರಣ್ ಸಿನಿಮಾ ಒಪ್ಪಿಕೊಳ್ಳುತ್ತಾರಾ ಎನ್ನುವುದು ಅಭಿಮಾನಿಗಳ ಕುತೂಹಲ. ಇಷ್ಟು ದೊಡ್ಡ ಸಿನಿಮಾಗೆ ಆಫರ್ ಬಂದರೆ ರಶ್ಮಿಕಾ ಕೈಚೆಲ್ಲುವ ಸಾಧ್ಯತೆಯೂ ಕಡಿಮೆ ಇದೆ.

Recommended Video

ಈ ವರ್ಷ ಕೀರ್ತಿ ಸುರೇಶ್ ಮದುವೆ, ಹುಡುಗ ಯಾರು ಗೊತ್ತಾ | Filmibeat Kannada
ರಾಮ್ ಚರಣ್ 15ನೇ ಸಿನಿಮಾ

ರಾಮ್ ಚರಣ್ 15ನೇ ಸಿನಿಮಾ

ರಾಮ್ ಚರಣ್ ನಟನೆಯ15ನೇ ಸಿನಿಮಾ ಇದಾಗಿದೆ. ಮೊದಲ ಬಾರಿಗೆ ನಿರ್ದೇಶಕ ಶಂಕರ್ ತೆಲುಗು ನಟನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ 5 ಭಾಷೆಯಲ್ಲಿ ತಯಾರಾಗುತ್ತಿದೆ. ವಿಶೇಷ ಎಂದರೆ ಕನ್ನಡದಲ್ಲೂ ಬರ್ತಿದೆ. 2022ಕ್ಕೆ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ರಾಮ್ ಚರಣ್ ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಶಂಕರ್ ಇಂಡಿಯನ್-2 ಸಿನಿಮಾ ಮುಗಿಸಬೇಕಿದೆ. ಇಬ್ಬರ ಕಮಿಟ್ ಮೆಂಟ್ ಮುಗಿದ ಬಳಿಕ ಸಿನಿಮಾ ಪ್ರಾರಂಭ ವಾಗಲಿದೆ.

More from Filmibeat

English summary
Actress Rashmika Mandanna likely to play female lead opposite to Ram charan for his next pan India movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X