'ಪುಷ್ಪ 2' ಚಿತ್ರದಲ್ಲಿ ರಶ್ಮಿಕಾ ತೆರೆ ಮೇಲೆ ಕಾಣಿಸಿಕೊಳ್ಳುವುದು ತೀರಾ ಕಡಿಮೆ!

2021ರಲ್ಲಿ ತೆರೆಕಂಡು ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನಿಸಿಕೊಂಡಿದ್ದ ಸುಕುಮಾರ್ ನಿರ್ದೇಶನದ ಹಾಗೂ ಅಲ್ಲು ಅರ್ಜುನ್ ನಟನೆಯ ಪುಷ್ಪ ದ ರೈಸ್ ಚಿತ್ರದ ಮುಂದುವರಿದ ಭಾಗ ಪುಷ್ಪ ದ ರೂಲ್ ಚಿತ್ರದ ಚಿತ್ರೀಕರಣ ಸಾಗುತ್ತಿದೆ. ಇನ್ನು ಪುಷ್ಪ ಚಿತ್ರಕ್ಕೂ ಮುನ್ನ ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದ್ದ ರಶ್ಮಿಕಾ ಮಂದಣ್ಣ ಖ್ಯಾತಿಯನ್ನು ಈ ಚಿತ್ರ ದುಪ್ಪಟ್ಟು ಮಾಡಿದ್ದು ಸುಳ್ಳಲ್ಲ.

ಈ ಚಿತ್ರದಲ್ಲಿ ಹೆಚ್ಚು ಪ್ರಾಶಸ್ತ್ಯ ಇದ್ದ ಶ್ರೀವಲ್ಲಿ ಪಾತ್ರವನ್ನು ನಿರ್ವಹಿಸಿದ್ದ ರಶ್ಮಿಕಾ ಮಂದಣ್ಣ ದೇಶವ್ಯಾಪಿ ರೀಚ್ ಆಗಿದ್ದರು. ಚಿತ್ರದಲ್ಲಿ ಎಮೋಷನಲ್ ದೃಶ್ಯಗಳು ಹಾಗೂ ಹಾಡುಗಳನ್ನೂ ಸಹ ಹೊಂದಿದ್ದ ರಶ್ಮಿಕಾ ಮಂದಣ್ಣಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿತ್ತು. ಆದರೆ ಪುಷ್ಪ ಎರಡನೇ ಭಾಗದಲ್ಲಿ ರಶ್ಮಿಕಾ ಮಂದಣ್ಣ ಪಾತ್ರಕ್ಕೆ ಹೆಚ್ಚು ಪ್ರಾಶಸ್ತ್ಯ ಇಲ್ಲ ಎನ್ನಲಾಗುತ್ತಿದೆ.

 Rashmika Mandanna likey to have very less screen space in Pushpa 2

ಹೌದು, ಎರಡನೇ ಭಾಗದಲ್ಲಿ ಅಲ್ಲು ಅರ್ಜುನ್ ನಿರ್ವಹಿಸುತ್ತಿರುವ ಪುಷ್ಪ ಪಾತ್ರ ಮತ್ತೊಂದು ಹಂತಕ್ಕೆ ಬೆಳೆಯುವ ಕಥೆ ಇರಲಿದ್ದು, ಅಲ್ಲು ಅರ್ಜುನ್ ಹಾಗೂ ಫಹಾದ್ ಫಾಸಿಲ್ ಪಾತ್ರಗಳಿಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಇರಲಿದೆ. ಈ ಎರಡು ಪಾತ್ರಗಳ ಜತೆ ಸಹ ನಟರ ಪಾತ್ರಗಳು ಮತ್ತು ಹೆಚ್ಚಾಗಿ ವಿಲನ್ ಪಾತ್ರಗಳಿಗೆ ಎರಡನೇ ಭಾಗದಲ್ಲಿ ಹೆಚ್ಚು ಪ್ರಾಶಸ್ತ್ಯ ಇರಲಿದೆ ಎಂಬ ಸುದ್ದಿ ಇದೆ.

ಸದ್ಯ ರಶ್ಮಿಕಾ ಮಂದಣ್ಣ ಬಾಲಿವುಡ್ ಚಿತ್ರರಂಗಕ್ಕೂ ಸಹ ಕಾಲಿಟ್ಟಿದ್ದು, ಈಕೆ ನಟನೆಯ ಮೊದಲ ಚಿತ್ರ ಗುಡ್ ಬೈ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದರೆ, ಎರಡನೇ ಹಿಂದಿ ಚಿತ್ರ ಮಿಷನ್ ಮಜ್ನು ಓಟಿಟಿಯಲ್ಲಿ ತೆರೆಕಂಡಿದೆ. ಇನ್ನು ರಶ್ಮಿಕಾ ಮಂದಣ್ಣ ಇದೇ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಹಾಡುಗಳ ಬಗ್ಗೆ ಕೇವಲವಾಗಿ ಮಾತನಾಡಿ ಸೌತ್ ಸಿನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು ಹಾಗೂ ಕನ್ನಡಿಗರಿಗೆ ಹಿಂದಿನಿಂದಲೂ ರಶ್ಮಿಕಾ ಮಂದಣ್ಣ ಎಂದರೆ ಇಷ್ಟವಿಲ್ಲ ಎಂಬುದು ತಿಳಿದಿರುವುದೇ. ಈ ಎಲ್ಲಾ ವೈರತ್ವದಿಂದ ರಶ್ಮಿಕಾ ಮಂದಣ್ಣ ಫೇಮ್ ದಿನದಿಂದ ದಿನಕ್ಕೆ ಕುಗ್ಗುತ್ತಿದೆ ಎಂದೂ ಸಹ ಮಾತುಗಳು ಕೇಳಿಬರುತ್ತಿದೆ.

More from Filmibeat

English summary
Rashmika Mandanna likey to have very less screen space in Pushpa 2. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X