ಬಾಯ್ತಪ್ಪಿ ಮಾತಾಡಿ ಬಳಿಕ ಕ್ಷಮೆ ಕೇಳಿದ ರಶ್ಮಿಕಾ ಮಂದಣ್ಣ

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಇದೀಗ ಭಾರತೀಯ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರು. ಬಾಲಿವುಡ್ ಅಂಗಳದಲ್ಲೂ ಕಿರಿಕ್ ಬೆಡಗಿ ಕ್ರೇಜ್ ಜೋರಾಗಿದೆ. ಸ್ಟಾರ್ ನಟರ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮುಂದೆ ಮತ್ತಷ್ಟು ಚಿತ್ರಗಳಲ್ಲಿ ಬಣ್ಣ ಹಚ್ಚಿ ನಟಿಸುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಮಾತುಗಳು ಕೆಲವೊಮ್ಮೆ ವಿವಾದ ಸೃಷ್ಟಿಸಿರುವುದು ಇದೆ. ಏನೋ ಮಾತನಾಡಲು ಹೋಗಿ ಮತ್ತೇನೋ ಆಗಿ ಎಡವಟ್ಟು ಆಗಿರುವುದು ಇದೆ. ಇದೀಗ ಮತ್ತೊಮ್ಮೆ ಸಂದರ್ಶನವೊಂದರಲ್ಲಿ ಮಾತನಾಡುವಾಗ ತಪ್ಪಾಗಿದೆ. ಬಳಿಕ ಅದನ್ನು ಟ್ರೋಲ್ ಮಾಡಲು ಆರಂಭಿಸುತ್ತಿದ್ದಂತೆ ಕ್ಷಮೆ ಕೇಳಿದ್ದಾರೆ.

Rashmika Mandanna made a mistake during her talk but she quickly apologized

ಹೌದು ಗೊತ್ತು. ಏನೋ ಮಾತನಾಡುವಾಗ ತಪ್ಪಾಗಿಬಿಡ್ತು ಕ್ಷಮಿಸಿ ಎಂದಿದ್ದಾರೆ. ಇತ್ತೀಚೆಗೆ ಬಂದ 'ಪುಷ್ಪ'-2 ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿಯಾಗಿ ಮತ್ತೊಮ್ಮೆ ಸಿನಿರಸಿಕರ ಮನಗೆದ್ದಿದ್ದಾರೆ. ಚಿತ್ರ ಬ್ಲಾಕ್‌ಬ್ಲಸ್ಟರ್ ಹಿಟ್ ಆಗಿದೆ. ಈಗಾಗಲೇ 1500 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡವೇ ಹೇಳಿದೆ. ಶೀಘ್ರದಲ್ಲೇ 'ಬಾಹುಬಲಿ-2' ದಾಖಲೆ ಮುರಿಯುತ್ತದೆ ಎನ್ನುವ ಲೆಕ್ಕಾಚಾರ ನಡೀತಿದೆ.

3 ವರ್ಷಗಳ ಹಿಂದೆ ಬಂದಿದ್ದ 'ಪುಷ್ಪ' ಚಿತ್ರದಲ್ಲಿ ಅಲ್ಲು ಅರ್ಜುನ್ ಜೋಡಿಯಾಗಿ ರಶ್ಮಿಕಾ ಮಿಂಚಿದ್ದರು. ಇದೀಗ ಅದರ ಸೀಕ್ವೆಲ್‌ನಲ್ಲಿ ಪಾತ್ರ ಮುಂದುವರೆದಿದೆ. ಅಲ್ಲಿ 'ಪುಷ್ಪ'ರಾಜ್ ಪ್ರೇಯಸಿಯಾಗಿದ್ದ ಶ್ರೀವಲ್ಲಿ ಈಗ ಮಡದಿಯಾಗಿ ನಟಿಸಿ ಗೆದ್ದಿದ್ದಾರೆ. ಆಕೆಯ ನಟನೆಗೂ ಒಳ್ಳೆ ಅಂಕಗಳು ಸಿಕ್ಕಿದೆ. ಒಟ್ಟಾರೆ ಸಿನಿಮಾ ಧೂಳೆಬ್ಬಿಸಿದೆ. ಚಿತ್ರದ ಟಿಕೆಟ್ ದರ ಹೆಚ್ಚಿಸಿದ್ದು ಕಲೆಕ್ಷನ್‌ಗೆ ಪ್ಲಸ್ ಆಗಿದೆ.

'ಪುಷ್ಪ'-2 ಸಕ್ಸಸ್ ಬೆನ್ನಲ್ಲೇ ಸಾಕಷ್ಟು ಸಂದರ್ಶನಗಳಲ್ಲಿ ರಶ್ಮಿಕಾ ಮಂದಣ್ಣ ಮಾತನಾಡುತ್ತಿದ್ದಾರೆ. ಸಂದರ್ಶನವೊಂದರಲ್ಲಿ ತಮ್ಮ ನೆಚ್ಚಿನ ನಟನ ಬಗ್ಗೆ ರಶ್ಮಿಕಾ ಪ್ರತಿಕ್ರಿಯಿಸಿದ್ದಾರೆ. ತಮಿಳಿನ ದಳಪತಿ ವಿಜಯ್ ನನ್ನ ನೆಚ್ಚಿನ ನಟ. ಯಾಕಂದ್ರೆ ನಾನು ಚಿತ್ರಮಂದಿರದಲ್ಲಿ ನೋಡಿದ ಮೊದಲ ಸಿನಿಮಾ 'ಗಿಲ್ಲಿ' ಆ ಚಿತ್ರದಲ್ಲಿ ಅವರ ನಟನೆ, ಡ್ಯಾನ್ಸ್ ಇಷ್ಟವಾಗಿತ್ತು. ಅಂದಿನಿಂದ ವಿಜಯ್ ಸರ್ ಅಂದ್ರೆ ಇಷ್ಟ ಎಂದಿದ್ದಾರೆ.

'ಗಿಲ್ಲಿ' ತೆಲುಗಿನ 'ಪೋಕಿರಿ' ರೀಮೆಕ್ ಅಂತ ಇತ್ತೀಚೆಗೆ ಗೊತ್ತಾಯಿತು ಎಂದು ಬಾಯ್ತಪ್ಪಿ ಹೇಳಿದ್ದಾರೆ. ಅಂದಹಾಗೆ 'ಗಿಲ್ಲಿ' ತೆಲುಗಿನ 'ಒಕ್ಕಡು' ಚಿತ್ರದ ರೀಮೆಕ್. ಮುಂದೆ ಮಹೇಶ್‌ ಬಾಬು ನಟಿಸಿದ 'ಪೋಕಿರಿ' ಚಿತ್ರವನ್ನು ಕೂಡ 'ಪೋಕಿರಿ' ಹೆಸರಿನಲ್ಲಿ ತಮಿಳಿಗೆ ವಿಜಯ್ ರೀಮೆಕ್ ಮಾಡಿದ್ದರು. ಇದನ್ನೇ ಹೇಳುವ ಭರದಲ್ಲಿ 'ಪೋಕಿರಿ' ರೀಮೆಕ್ 'ಗಿಲ್ಲಿ' ಎಂದಿದ್ದಾರೆ.

ನೆಟ್ಟಿಗರೊಬ್ಬರು ರಶ್ಮಿಕಾ ತಪ್ಪಾಗಿ ಹೇಳಿದ್ದಾರೆ ಎಂದು ಆ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಸಾಕಷ್ಟು ಕಾಮೆಂಟ್ಸ್ ಬಂದಿದೆ. ಇದು ರಶ್ಮಿಕಾ ಗಮನಕ್ಕೆ ಬರುತ್ತಿದ್ದಂತೆ ಆ ಪೋಸ್ಟ್‌ಗೆ ರಿಪ್ಲೇ ಮಾಡಿದ್ದಾರೆ. "ಹೌದು, ಗೊತ್ತು ನನಗೆ. ಒಂದು ಮಿಸ್ಟೇಕ್ ಆಗಿಬಿಟ್ಟಿದೆ. ಸಂದರ್ಶನ ಮುಗಿದ ಬಳಿಕ 'ಗಿಲ್ಲಿ' ಸಿನಿಮಾ 'ಒಕ್ಕಡು' ರೀಮೆಕ್ ಎಂದು ನನಪಾಯ್ತು, ಸ್ವಾರಿ, ತಪ್ಪಾಯ್ತು" ಎಂದು ಬರೆದುಕೊಂಡಿದ್ದಾರೆ.

ರಶ್ಮಿಕಾ ರಿಪ್ಲೇ ನೋಡಿ ಹೋಗಲಿ ಬಿಡಿ ಮೇಡಂ. ಕೆಲವೊಮ್ಮೆ ತಪ್ಪು ಆಗುತ್ತದೆ. ತಲೆ ಕೆಡಿಸಿಕೊಳ್ಳಬೇಡಿ. ನಿಮಗೆ ತಪ್ಪಿನ ಅರಿವಾಯ್ತು ಅಲ್ವಾ. ಅಷ್ಟೇ ಸಾಕು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಅಂದಹಾಗೆ 'ಪುಷ್ಪ'-2 ಜೊತೆಗೆ ರಶ್ಮಿಕಾ ನಟಿಸಿದ್ದ 'ಚಾವ' ಚಿತ್ರ ಕೂಡ ತೆರೆಗೆ ಬರಬೇಕಿತ್ತು. ಕೊನೆ ಗಳಿಗೆಯಲ್ಲಿ ರಿಲೀಸ್ ಡೇಟ್ ಬದಲಾಯಿತು. ಇನ್ನು ತಮಿಳಿನ 'ಕುಬೇರ' ಚಿತ್ರದಲ್ಲಿ ಧನುಷ್ ಜೊತೆ ರಶ್ಮಿಕಾ ನಟಿಸುತ್ತಿದ್ದಾರೆ. ಬಾಲಿವುಡ್‌ 'ಸಿಂಕದರ್' ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತ ತೆರೆ ಹಂಚಿಕೊಳ್ಳುತ್ತಿದ್ದಾರೆ.

More from Filmibeat

English summary
Actress Rashmika Mandanna acknowledged her mistake while speaking later apologized;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X