Rashmika Mandanna: ಹುಟ್ಟುಹಬ್ಬಕ್ಕೆ ಶುಭ ಕೋರಿದವರಿಗೆ ವಿಡಿಯೋ ಮೂಲಕ ಸಂದೇಶ ಕೊಟ್ಟ ನ್ಯಾಷನಲ್ ಕ್ರಶ್
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇಂದು (ಏಪ್ರಿಲ್ 5) 27ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಬೆಳಗ್ಗೆಯಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶುಭಾಶಯಗಳನ್ನು ಹೇಳುತ್ತಿದ್ದಾರೆ. ಇದೇ ಸಂಭ್ರಮದಲ್ಲಿರುವ ರಶ್ಮಿಕಾ ತಮ್ಮ ಅಭಿಮಾನಿಗಳಿಗಾಗಿ ವಿಡಿಯೋ ಸಂದೇಶವನ್ನು ರವಾನೆ ಮಾಡಿದ್ದಾರೆ.
ರಶ್ಮಿಕಾ ಔಟ್‌ಡೋರ್‌ನಲ್ಲಿ ಕೂತು ವಿಡಿಯೋ ಮಾಡಿದ್ದಾರೆ. ಬಿಳಿ ಬಣ್ಣದ ಸ್ವಟರ್ ಧರಿಸಿ,ಡೆನಿಮ್ ಧರಿಸಿದ್ದಾರೆ. ಈ ವಿಡಿಯೋದಲ್ಲಿ ಅಭಿಮಾನಿಗಳಿಗೆ 'ಡಾರ್ಲಿಂಗ್, ಲವ್ಸ್' ಎಂದು ಕರೆದಿದ್ದಾರೆ. ಅಲ್ಲದೆ ತಮ್ಮ ಹುಟ್ಟುಹಬ್ಬಕ್ಕೆ ವಿಶ್ ಮಾಡಿದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಇದೇ ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ತಮ್ಮ ಅಭಿಮಾನಿಗಳ ಆರೋಗ್ಯ, ಮನಸ್ಸು, ಹೃದಯ ಹೇಗಿದೆ ಅಂತ ವಿಚಾರಿಸಿದ್ದಾರೆ."ಹಾಯ್.. ನನ್ನ ಡಾರ್ಲಿಂಗ್ ಲವ್ಸ್.. ಈ ವಿಡಿಯೋ ಹಾಗೇ ಸುಮ್ಮನೆ ಮಾಡಿದ್ದು ಅಂತ ನನಗೆ ಗೊತ್ತು. ನಾನು ನಿಮ್ಮ ಶುಭಾಶಯಗಳನ್ನು ನೋಡಿದ್ದೇನೆ. ನಿಮ್ಮ ಸಂದೇಶಗಳನ್ನು ಓದಿದ್ದೇನೆ. ನೀವು ನನ್ನ ಈ ದಿನವನ್ನು ತುಂಬಾನೇ ಸ್ಪೆಷಲ್ ಆಗಿ ಮಾಡಿದ್ದೀರ. ಈ ದಿನ ನೀವು ಹೇಗಿದ್ದೀರಾ? ಅಂತ ನಾನು ಹೇಳಲು ಬಯಸುತ್ತೇನೆ. ನಿಮ್ಮ ಆರೋಗ್ಯ ಹೇಗಿದೆ? ನಿಮ್ಮ ಮನಸ್ಸು ಹೇಗಿದೆ? ನಿಮ್ಮ ಹೃದಯ ಹೇಗಿದೆ? ನೀವು ಖುಷಿಯಾಗಿದ್ದೀರ. ಇವತ್ತು ನಿಮ್ಮ ದಿನ ಅದ್ಭುತವಾಗಿದ್ದರೆ ಇನ್ನೇನು ಬೇಕು." ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
"ನಾನು ನಿಮ್ಮನ್ನು ಪ್ರೀತಿಸುತ್ತೇನೆ"
ರಶ್ಮಿಕಾ ಮಂದಣ್ಣ ತಮ್ಮ ಅಭಿಮಾನಿಗಳ ಶುಭಾಶಯ ಕಂಡು ಫಿದಾ ಆಗಿದ್ದಾರೆ. ಇದೇ ಖುಷಿಯಲ್ಲಿ ತನಗಿಂತ ತಮ್ಮ ಅಭಿಮಾನಿಗಳ ಯೋಗಕ್ಷೇಮವನ್ನೇ ಹೆಚ್ಚಾಗಿಯೇ ವಿಚಾರಿಸಿಕೊಂಡಿದ್ದಾರೆ. ಅಲ್ಲದೆ ನಿಮ್ಮ ಒಳ್ಳೆಯ ಹಾಗೂ ಕೆಟ್ಟ ದಿನಗಳು ನನ್ನ ಮೇಲೂ ಪರಿಣಾಮ ಬೀರುತ್ತವೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
"ನೀವು ದಿನ ಹಾಗೂ ಸಮಯ ಅದ್ಭುತವಾಗಿಲ್ಲದೆ ಇದ್ದಿದ್ದರೆ, ನನ್ನ ಪ್ರೀತಿ ಪಾತ್ರರಾದವರೇ ಇದು ಹಾಗೇ ಕಣ್ಮರೆಯಾಗುತ್ತೆ. ಇದೆಲ್ಲವೂ ನನ್ನ ಕೆಟ್ಟ ದಿನಗಳನ್ನು ನೋಡಿ ಕಲಿತಿದ್ದೇನೆ. ನಾನು ನಿಮ್ಮ ಬಗ್ಗೆ ತುಂಬಾನೇ ಕಾಳಜಿವಹಿಸುತ್ತೇನೆ. ನಿಮ್ಮ ಒಳ್ಳೆಯ ದಿನಗಳು ಹಾಗೂ ಕೆಟ್ಟ ದಿನಗಳು ನನಗೂ ಎಫೆಕ್ಟ್ ಮಾಡುತ್ತವೆ. ನೀವು ನನ್ನನ್ನು ಎಷ್ಟು ಪ್ರೀತಿಸುತ್ತಿರೋ, ನಾನು ಅಷ್ಟೇ ನಿಮ್ಮನ್ನು ಪ್ರೀತಿಸುತ್ತೇನೆ. ನನ್ನನ್ನು ಈ ಮಟ್ಟಕ್ಕೆ ತಂದಿದ್ದಕ್ಕೆ ಧನ್ಯವಾದಗಳು." ಎಂದು ರಶ್ಮಿಕಾ ಮಂದಣ್ಣ ವಿಡಿಯೋದಲ್ಲಿ ಹೇಳಿದ್ದಾರೆ.
ರಶ್ಮಿಕಾ ಕೈ ತುಂಬಾ ಸಿನಿಮಾಗಳು
ಹುಟ್ಟುಹಬ್ಬಕ್ಕೂ ಕೆಲವು ದಿನಗಳ ಮುನ್ನ ರಶ್ಮಿಕಾ ಮಂದಣ್ಣ ನಟನೆಯ ಹೊಸ ಸಿನಿಮಾ ಸೆಟ್ಟೇರಿದೆ. ದೇವ ಮೋಹನ್ ಜೊತೆ ರಶ್ಮಿಕಾ ಮಂದಣ್ಣ ತೆರೆಮೇಲೆ ರೊಮ್ಯಾನ್ಸ್ ಮಾಡಲಿದ್ದಾರೆ. ಈ ಸಿನಿಮಾವನ್ನು ಶಾಂತಾರುಬನ್ ನಿರ್ದೇಶನ ಮಾಡುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಕೈಯಲ್ಲಿ ಸದ್ಯಕ್ಕೆ ಸಂದೀಪ್ ರೆಡ್ಡಿ ವಂಗ ನಿರ್ದೇಶಿಸುತ್ತಿರುವ 'ಎನಿಮಲ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಣ್‌ಬೀರ್ ಕಪೂರ್ ಲೀಡ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ಮೋಸ್ಟ್ ಎಕ್ಸ್‌ಪೆಕ್ಟೆಡ್ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ 2'ನಲ್ಲೂ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಈ ವರ್ಷವೇ ರಿಲೀಸ್ ಆಗುವ ಸಾಧ್ಯತೆಯಿದೆ.


Click it and Unblock the Notifications











